ಬಾಲಿವುಡ್ನ ನಟ, ನಿರ್ಮಾಪಕ ಅರ್ಬಾಜ್ ಖಾನ್ ಮತ್ತು ಅವರ ಮಾಜಿ ಪತ್ನಿ, ನಟಿ ಮಲೈಕಾ ಅರೋರಾ ಅವರ ಪುತ್ರ ಅರ್ಹಾನ್ ಖಾನ್ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕಲಿಯುತ್ತಿರುವ ಅರ್ಹಾನ್ ಖಾನ್ ಶೀಘ್ರದಲ್ಲೇ ತನ್ನ ಮುಂದಿನ ನಿರ್ಮಾಣ ಉದ್ಯಮದಲ್ಲಿ ತನ್ನ ತಂದೆಯೊಂದಿಗೆ ಸೇರಿಕೊಳ್ಳಲಿದ್ದಾರೆ.
- " class="align-text-top noRightClick twitterSection" data="
">
ಸಂದರ್ಶನವೊಂದರಲ್ಲಿ, ತನ್ನ ಮಗ ಸಿನಿಮಾ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಕನಸುಗಳಿವೆ ಎಂದು ಅರ್ಬಾಜ್ ಖಾನ್ ಖಚಿತಪಡಿಸಿದ್ದಾರೆ. ಅಲ್ಲದೇ ಚಿತ್ರ ನಿರ್ಮಾಪಕ ರೆ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸೆಟ್‌ನಲ್ಲಿ ಅರ್ಹಾನ್ ಅವರು ಈಗಾಗಲೇ 30 ದಿನಗಳ ಇಂಟರ್ನ್‌ಶಿಪ್ ಅನ್ನು ಸಹ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಮತ್ತೊಂದು ಖಾನ್ ಕುಡಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಲಿದೆಯೆಂದು ನೆಟಿಜೆನ್ಗಳು ಹೇಳುತ್ತಿದ್ದಾರೆ.
- " class="align-text-top noRightClick twitterSection" data="
">
ಅರ್ಹಾನ್ ಚಲನಚಿತ್ರ ನಿರ್ಮಾಣದ ಪ್ರಾಯೋಗಿಕ ಭಾಗವನ್ನು ಕಲಿಯಲು ಉತ್ಸುಕರಾಗಿದ್ದಾರೆ ಎಂದು ತಂದೆ ಅರ್ಬಾಜ್ ಹೇಳಿದರು. ಅರ್ಬಾಜ್ ನಿರ್ದೇಶನದ ಮುಂದಿನ ಪಟ್ನಾ ಶುಕ್ಲಾ ಸಿನಿಮಾಗೆ ತನ್ನ ಮಗ ಸಹಾಯ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: ಮಕ್ಕಳಿಗಾಗಿ ಗಂಧದ ಗುಡಿ ಟಿಕೆಟ್ ಬೆಲೆ ಇಳಿಕೆ: ಚಿತ್ರದ ಬಗ್ಗೆ ಮಾತನಾಡಿ, ಬಹುಮಾನ ಗೆಲ್ಲಿ!
1998ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ದಂಪತಿ 2002ರಲ್ಲಿ ಪುತ್ರ ಅರ್ಹಾನ್ಅನ್ನು ಸ್ವಾಗತಿಸಿದರು. 19 ವರ್ಷಗಳ ಸುದೀರ್ಘ ದಾಂಪತ್ಯದ ನಂತರ 2017 ರಲ್ಲಿ ವಿಚ್ಛೇದನ ಪಡೆದರು.