ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನನ್ನು ಗೆಲ್ಲಿಸಲು ಪಕ್ಷದ ಹಿರಿಯ ಮುಖಂಡರುಗಳು ಸ್ಟಾರ್ ಪ್ರಚಾರಕರಾಗಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚುನಾವಣೆಯ ಮೊದಲಿನ ಲೆಕ್ಕಾಚಾರದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಸಾಕಷ್ಟು ಕಸರತ್ತು ಶುರುಮಾಡುತ್ತಾರೆ. ಇದರ ಸಲುವಾಗಿಯೇ ಚಿಕ್ಕ ಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಗಳು ರಾಜ್ಯದಲ್ಲಿನ ಸ್ಟಾರ್ ನಾಯಕರ ಮೊರೆ ಹೋಗಿ ತಮ್ಮ ಚುನಾವಣೆ ಪ್ರಚಾರದಲ್ಲಿ ಕಣಕ್ಕಿಳಿಸುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಪರ ದೊಡ್ಡ ಗೌಡ್ರು, ಸಿದ್ದು ಪ್ರಚಾರ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಮೊಯ್ಲಿ ಪರ ಬಿರುಸಿನ ಪ್ರಚಾರ ಶುರುಮಾಡಿದ ದೇವೆಗೌಡ, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಸ್ಟಾರ್ ಪ್ರಚಾರಕರಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮೊಯ್ಲಿ ಪರ ಮತಯಾಚನೆ ಮಾಡುತ್ತಿದ್ದಾರೆ.
ಇನ್ನೂ ಇತ್ತ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ನಿರ್ಣಾಯಕ ಪಾತ್ರ ಪಡೆದಿರುವ ಶಿಡ್ಲಘಟ್ಟ ಹಾಗೂ ಚಿಂತಾಮಣಿ ಕ್ಷೇತ್ರದಲ್ಲಿ ಕೆಎಚ್ ಮುನಿಯಪ್ಪ ಪರ ಕೇಂದ್ರದ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಹಾಗೂ ಸಿಎಂ ಹಿಬ್ರಾಹಿಂ ಸ್ಟಾರ್ ಪ್ರಚಾರಕರಾಗಿ ಪ್ರಚಾರ ಮಾಡಲಿದ್ದಾರೆ.
ಬಿಜೆಪಿ ಅಖಾಡದಲ್ಲಿ ಹಿರಿಯ ನಾಯಕರು
ಇನ್ನು ಬಿಜೆಪಿ ಅಖಾಡದಲ್ಲಿ ಗೆಲುವಿನ ಪರೀಕ್ಷೆಯನ್ನು ನಡೆಸುತ್ತಿರುವ ಬಿ ಎನ್ ಬಚ್ಚೇಗೌಡ ಪರ ಕಮಲದ ಸ್ಟಾರ್ ಪ್ರಚಾರಕರಾಗಿ ಚಕ್ರವರ್ತಿ ಸೂಲಿಬೆಲೆ, ನಟಿ ಶೃತಿ, ಬಿಎಸ್ ಯಡಿಯೂರಪ್ಪ, ಶ್ರೀರಾಮುಲು, ಆರ್ ಅಶೋಕ್, ವಿಶ್ವನಾಥ್ ಸ್ಟಾರ್ ಕ್ಯಾಂಪೇನ್ ಶುರುಮಾಡಿದ್ದಾರೆ.
ಬಿಎಸ್ಪಿ ಪಕ್ಷದ ಸ್ಟಾರ್ ಕ್ಯಾಪೇನರ್ ಮಯಾವತಿ
ಇನ್ನೂ ಬಿಎಸ್ಪಿ ಅಭ್ಯರ್ಥಿ ಧ್ವಾರಕನಾಥ್ ನಾಮಪತ್ರ ಸಲ್ಲಿಕೆಯ ದಿನ ಯೋಧನ ಪತ್ನಿಗೆ ಬಾಗಿನ ಅರ್ಪಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದು, ಪಕ್ಷದ ಸ್ಟಾರ್ ಪ್ರಚಾರಕಿಯಾಗಿ ಮಾಯಾವತಿ ಕಣಕ್ಕಿಳಿಯುವ ಮುನ್ಸೂಚನೆಯಿದೆ. ಒಟ್ಟಾರೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನದಲ್ಲಿ ರಾಜ್ಯದ ನಾಯಕರು ಹಾಗೂ ರಾಷ್ಟ್ರೀಯ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಮತದಾರ ಪ್ರಭು ಯಾರಿಗೆ ಮಣೆಯಾಕಲಿದ್ದಾರೆ ಎಂದು ಕಾದುನೋಡಬೇಕಿದೆ.