ತುಮಕೂರು: ಭಾರತೀಯ ಸೇನೆಯ ಕ್ಯಾಪ್ಟನ್ವೊಬ್ಬರಿಗೆ ಜಮೀನು ಕೊಡಿಸುವುದಾಗಿ ನಂಬಿಸಿ ವಂಚಿಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀಕಾಂತ್, ಚಂದ್ರಯ್ಯ, ದಿವಾಕರ್, ಮಧುಶ್ರೀ, ಆಸ್ಮಾ ಬಂಧಿತ ಆರೋಪಿಗಳು. ಇನ್ನೂ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಇಂಡಿಯನ್ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಯಾಪ್ಟನ್ ಹಬೀಬುಲ್ಲಾ ಖಾನ್ ಎಂಬವರಿಗೆ ಶಿರಾ ತಾಲೂಕಿನ ರತ್ನಸಂದ್ರ ಗ್ರಾಮದಲ್ಲಿ ಜಮೀನು ಕೊಡಿಸುವುದಾಗಿ ಆರೋಪಿಗಳು ನಂಬಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನೀಡಲಾಗಿತ್ತು. ಜೊತೆಗೆ 10.5 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದರು.
ಈ ಕುರಿತು ಹಬೀಬುಲ್ಲಾ ಖಾನ್ ತುಮಕೂರು ನಗರ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ 1,35,00 ರೂ. ನಗದು, 5 ಮೊಬೈಲ್, 3 ಆಟೋ, ಒಂದು ಇಂಡಿಗೋ ಕಾರು, ಸೇರಿದಂತೆ 93 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.