ETV Bharat / city

ತುಮಕೂರಲ್ಲಿ 165 ಮಂದಿ ಕೊರೊನಾ ಶಂಕಿತರ ವರದಿಗಾಗಿ ನಿರೀಕ್ಷೆ - ತುಮಕೂರು ಜಿಲ್ಲೆಯಲ್ಲಿ 556 ಜನರ ಗಂಟಲು ದ್ರವ ಮಾದರಿ ತಪಾಸಣೆ

ತುಮಕೂರು ಜಿಲ್ಲೆಯಲ್ಲಿ 556 ಜನರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 384 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿವೆ. 165 ಮಂದಿಯ ತಪಾಸಣೆ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ತಿಳಿಸಿದ್ದಾರೆ.

ಕೋವಿಡ್-19
ಕೋವಿಡ್-19
author img

By

Published : Apr 16, 2020, 7:38 PM IST

ತುಮಕೂರು: ಕೊವೀಡ್-19 ಸೋಂಕು ಹೆಚ್ಚಾಗುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ 165 ಮಂದಿಯ ತಪಾಸಣೆ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 480 ಮಂದಿಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಈ ಪೈಕಿ 49 ಮಂದಿಯನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬಾರದೆಂದು ಸೂಚಿಸಲಾಗಿದೆ. ಒಟ್ಟು 274 ಮಂದಿಯನ್ನು ಐಸೋಲೇಷನ್​ನಲ್ಲಿ ಇಡಲಾಗಿದ್ದು, 321 ಜನರ 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ.

ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆ
ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆ

ಈವರೆಗೆ 556 ಜನರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 384 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿವೆ. 2 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. 5 ಮಾದರಿಗಳು ತಿರಸ್ಕೃತಗೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.