ತುಮಕೂರು: ಕಲ್ಪತರು ನಾಡಿನ ಕೆಎಸ್ಆರ್ಟಿಸಿ ಬಸ್ ಚಾಲಕನೊಬ್ಬನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಆತನನ್ನ ರೋಗಿ ನಂ. 2135 ಎಂದು ಗುರುತಿಸಲಾಗಿದ್ದು, ಇವರು ಮಾಗಡಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಕರ್ತವ್ಯಕ್ಕೆ ಹಾಜರಾಗುವ ಮುನ್ನ ತಪಾಸಣೆ ನಡೆಸಿದ ಸಂದರ್ಭದಲ್ಲಿ ಇವರಿಗೆ ಸೋಂಕು ಇರುವುದು ಪತ್ತೆಯಾಗಿದೆ. ತುಮಕೂರು ತಾಲೂಕಿನ ಮಾವಿನಕುಂಟೆ ಗ್ರಾಮದವರಾಗಿರುವ ಚಾಲಕನ ಕುಟುಂಬದವರನ್ನ ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತ ಚಾಲಕನಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಾವಿನಕುಂಟೆ ಗ್ರಾಮವನ್ನ ಕಂಟೇನ್ಮಂಟ್ ಝೋನ್ ಮಾಡಲಾಗಿದೆ.