ಮೈಸೂರು: ಅರಮನೆ ನಗರಿಯಲ್ಲಿ ಸತತ ಮಳೆಯಾಗುತ್ತಿರುವುದರಿಂದ ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ಮುಂಭಾಗದ ರಸ್ತೆ ಕುಸಿದಿದೆ. ಅಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಪಲ್ಟಿಯಾಗಿದೆ.
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಾಂಸ್ಕೃತಿಕ ನಗರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಚಾಮುಂಡಿ ಬೆಟ್ಟದ ಮೇಲಿನಿಂದ ನಂದಿ ವಿಗ್ರಹದ ಕಡೆಗೆ ಬರುವ ರಸ್ತೆಯಲ್ಲಿ ಮೈಸೂರು ನಗರವನ್ನು ಎತ್ತರದಿಂದ ನೋಡುವ ವ್ಯೂ ಪಾಯಿಂಟ್ನಲ್ಲಿ ಮಳೆಯ ಕಾರಣ ಭೂ ಕುಸಿತ ಉಂಟಾಗಿದೆ.
ನಗರವನ್ನು ಈ ವ್ಯೂ ಪಾಯಿಂಟ್ನಿಂದ ನಿಂತು ನೋಡಲು ಹಾಕಿದ್ದ ಪೊಲೀಸ್ ಬ್ಯಾರಿಕೇಡ್ ಸಹ ಪಲ್ಟಿ ಆಗಿದೆ. ಈ ಮಾರ್ಗದಲ್ಲಿ ಯಾವುದಾದರು ವಾಹನ ಓಡಾಡಿದ್ರೆ ಕೆಳಗೆ ಬೀಳುವ ಆತಂಕ ಕೂಡ ಇದೆ.