ಮೈಸೂರು: ಕಾಂಗ್ರೆಸ್ನ ಮಾಜಿ ಸಚಿವ ತನ್ವೀರ್ ಸೇಠ್ ಅವರ ಮೇಲೆ ಭಾನುವಾರ ರಾತ್ರಿ ಯುವಕನೋರ್ವ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಮೊಬೈಲ್ನಲ್ಲಿ ಸೆರೆಯಾಗಿದೆ.
ತನ್ವೀರ್ ಸೇಠ್ ಅವರು ನಗರದ ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ವಧು- ವರರಿಗೆ ಆಶೀರ್ವಾದಿಸಿ ಭೋಜನ ಸೇವಿಸಿ ಗಾಯನ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಯುವಕನೋರ್ವ ದಾಳಿ ಮಾಡಿದ್ದು ವಿಡಿಯೋದಲ್ಲಿದೆ.
ಆರ್ಕೆಸ್ಟ್ರಾ ನಡೆಯುತ್ತಿದ ವೇದಿಕೆಯ ಮುಂಭಾಗದಲ್ಲಿ ಶಾಸಕರು ಇತರರೊಂದಿಗೆ ಕುಳಿತು ಗಾಯಕರು ಹಾಡುಗಳನ್ನು ಕೇಳುತ್ತಿದ್ದರು. ಇದೇ ವೇಳೆ ಯುವಕನೋರ್ವ ತನ್ನ ಬಲಗೈಯಲ್ಲಿ ಮಾರಕಾಸ್ತ್ರ ಮರೆಮಾಚಿಕೊಂಡು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಶಾಸಕರತ್ತ ನಿಧಾನ ನಡೆದುಕೊಂಡು ಬಂದು ದಾಳಿ ಮಾಡಿ ಓಡು ಹೋಗುತ್ತಿದ್ದಾನೆ. ಬೆಂಬಲಿಗರು ಯುವಕನನ್ನು ಹಿಡಿಯುವಂತೆ ಕೂಗುತ್ತಿರುವ ದೃಶ್ಯಾವಳಿಗಳು 39 ಸೆಕೆಂಡ್ನ ವಿಡಿಯೋದಲ್ಲಿದೆ.
ಇದನ್ನೂ ಓದಿ...ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ..!
ಅ
ಸಂಗೀತ ಕಾರ್ಯಕ್ರಮದಲ್ಲಿ ಗಾಯಕರು ಹಾಡುತ್ತಿದ್ದ ಹಾಡನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಾಗ ಹಲ್ಲೆ ನಡೆಸಿರುವುದು ಸೆರೆಯಾಗಿದೆ. ಈಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ರಾತ್ರಿ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.