ETV Bharat / city

ಪತ್ನಿ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಪತಿ ನೇಣಿಗೆ ಶರಣು - A husband committed suicide in mysure

ಪತ್ನಿ ದೂರವಾದ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನೇಣಿಗೆ ಶರಣಾದ ಪತಿ
ನೇಣಿಗೆ ಶರಣಾದ ಪತಿ
author img

By

Published : Dec 21, 2020, 2:36 PM IST

ಮೈಸೂರು: ಪತ್ನಿ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಪತಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಸಾತಗಳ್ಳಿಯಲ್ಲಿ ನಡೆದಿದೆ.

ಶಂಶೀರ್ (33) ಮೃತ ದುರ್ದೈವಿ. ಎರಡು ವರ್ಷದ ಹಿಂದೆ ಶಂಶೀರ್ ಹಾಗೂ ಅಶ್ವಿನಿ ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ದಿನ ಕಳೆದಂತೆ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ, ಒಂದು ತಿಂಗಳ ಹಿಂದೆ ಅಶ್ವಿನಿ‌ ದುಬೈಗೆ ತೆರಳಿದ್ದಳು.

ಪತ್ನಿ ದೂರವಾದ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಂಶೀರ್, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.