ಮಂಗಳೂರು: ರಾತ್ರಿ ಮಲಗಿದ್ದ ಜಾಗದಿಂದಲೇ ಸಹೋದರಿಯರಿಬ್ಬರು ನಾಪತ್ತೆಯಾಗಿರುವ ಘಟನೆ ನಗರದ ಬಜ್ಪೆಯ ಕೊಂಚಾರ್ ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಜ್ಪೆಯ ಕೊಂಚಾರ್ ಎಂಬಲ್ಲಿನ ಬಾಡಿಗೆ ಮನೆ ನಿವಾಸಿಗಳಾದ ಮುಬೀನಾ(22) ಹಾಗೂ ಬುಶ್ರಾ (21) ನಾಪತ್ತೆಯಾದ ಸಹೋದರಿಯರು.
ಇದನ್ನೂ ಓದಿರಿ: ಚಲಿಸುತ್ತಿದ್ದ ಸಿಮೆಂಟ್ ಲಾರಿಗೆ ಬೆಂಕಿ.. ನಡುರಸ್ತೆಯಲ್ಲೇ ಹೊತ್ತಿ ಉರಿದ ವಾಹನ!
ಮುಬೀನಾ ಹಾಗೂ ಬುಶ್ರಾ ಫೆ.7ರಂದು ರಾತ್ರಿ ಸುಮಾರು 12.30ಕ್ಕೆ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ತಡರಾತ್ರಿ 2 ಗಂಟೆಗೆ ಅವರ ತಂದೆ ಎದ್ದು ನೋಡಿದಾಗ ಕಿರಿಯ ಪುತ್ರಿ ಬುಶ್ರಾ ಮನೆಯಲ್ಲಿ ಕಂಡಿರಲಿಲ್ಲ. ಇದರಿಂದ ಎಲ್ಲ ಕಡೆಗಳಲ್ಲಿ ಹುಡುಕಾಟ ನಡೆಸಲಾಗಿದೆ. ಈ ಸಂದರ್ಭ ಮತ್ತೋರ್ವ ಪುತ್ರಿ ಮುಬೀನಾ ಕೂಡಾ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಎಲ್ಲೆಡೆ ಹುಡುಕಾಟ ನಡೆಸಿದ್ರೂ, ಇಬ್ಬರೂ ಪತ್ತೆಯಾಗಿಲ್ಲ ಎಂದು ಬಜ್ಪೆ ಠಾಣೆಯಲ್ಲಿ ಹೆತ್ತವರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.