ETV Bharat / city

ಕೋವಿಡ್ -19 ಸೋಂಕಿನ ಭಯ: ಕೈದಿಗಳ ಸ್ಥಳಾಂತರ - ಸಾಮಾಜಿಕ ಅಂತರ

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದ 80 ಕೈದಿಗಳನ್ನು ಚಿಕ್ಕಮಗಳೂರು ಹಾಗೂ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

jail
ಕಾರಾಗೃಹ
author img

By

Published : Apr 18, 2020, 3:37 PM IST

ಮಂಗಳೂರು: ಕೋವಿಡ್ -19 ಸೋಂಕು ಭೀತಿಯ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದ 80 ಮಂದಿ ಕೈದಿಗಳನ್ನು ಇಂದು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಯಿತು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದ್ದು, ಒಟ್ಟು 80 ಮಂದಿ ಕೈದಿಗಳನ್ನು ಚಿಕ್ಕಮಗಳೂರು ಹಾಗೂ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಒಟ್ಟು ಎರಡು ಕೆಎಸ್​ಆರ್​ಟಿಸಿ ಬಸ್ ಮೂಲಕ ತಲಾ 40 ಜನರ ಎರಡು ತಂಡಗಳಾಗಿ ಪೊಲೀಸ್ ಬಿಗಿ ಬಂದೋಬಸ್ತ್​ನಲ್ಲಿ ಕೈದಿಗಳನ್ನು ಸ್ಥಳಾಂತರ ಮಾಡಲಾಯಿತು.

ಕಾರಾಗೃಹ ಕೈದಿಗಳ ಸ್ಥಳಾಂತರ

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸದ್ಯ 6 ಮಹಿಳಾ ಕೈದಿಗಳ ಸಹಿತ 311 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ. ಆದರೆ ಇಲ್ಲಿನ ಸಾಮರ್ಥ್ಯ 210 ಕೈದಿಗಳಿಗೆ ಮಾತ್ರ ಸೀಮಿತವಾಗಿರುವುದರಿಂದ 80 ಕೈದಿಗಳನ್ನು ಕಾರವಾರ ಹಾಗೂ ಚಿಕ್ಕಮಗಳೂರು ಜೈಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.