ETV Bharat / city

ಬ್ಯಾರಿ ಅಕಾಡೆಮಿಯಿಂದ 'ನೂತನ ಬ್ಯಾರಿ ಲಿಪಿ ಕಲಿಕಾ ವಿಧಾನ-ಭಾಗ-2' ಡಿವಿಡಿ ಬಿಡುಗಡೆ

ನೂತನ ಬ್ಯಾರಿ ಲಿಪಿ ಕಲಿಕಾ ವಿಧಾನ-ಭಾಗ-2 ಡಿವಿಡಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಬಿಡುಗಡೆಗೊಳಿಸಿದರು.

author img

By

Published : Jan 28, 2021, 11:07 PM IST

Barry Academy
ಬ್ಯಾರಿ ಅಕಾಡೆಮಿ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ರಚಿಸಲಾದ 'ನೂತನ ಬ್ಯಾರಿ ಲಿಪಿ ಕಲಿಕಾ ವಿಧಾನ-ಭಾಗ-2' ಡಿವಿಡಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬ್ಯಾರಿ ಭಾಷೆಗೆ 1,400 ವರ್ಷಗಳ ಇತಿಹಾಸ ಇದೆ. ಬ್ಯಾರಿ ಭಾಷೆಯಲ್ಲಿ ಈಗಾಗಲೇ ಲಿಪಿಯನ್ನು ಹಾಗೂ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಗಿದೆ. ಬ್ಯಾರಿ ಭಾಷೆಯ ಲಿಪಿಯನ್ನು ಜನರು ಸುಲಭವಾಗಿ ಕಲಿಯಬೇಕೆಂದು ಈಗಾಗಲೇ ಬ್ಯಾರಿ ಲಿಪಿ ಕಲಿಕಾ ವಿಧಾನದ ಮೊದಲ ಭಾಗದ ಡಿವಿಡಿಯನ್ನು ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿ ಸ್ವರಾಕ್ಷರ, ವ್ಯಂಜನಾಕ್ಷರ ಹಾಗೂ ಸಂಖ್ಯೆಗಳು ಕೂಡ ಇತ್ತು. ಇದೀಗ ಒತ್ತಾಕ್ಷರಗಳು ಹಾಗೂ ಕಾಗುಣಿತಗಳು ಇರುವಂತಹ ಎರಡನೇ ಭಾಗದ ಡಿವಿಡಿಯನ್ನು ನಾವು ಬಿಡುಗಡೆಗೊಳಿಸಿದ್ದೇವೆ ಎಂದರು.

ನಾಳೆಯಿಂದ ಎಲ್ಲರೂ ಬ್ಯಾರಿ ಲಿಪಿಯಲ್ಲೇ ಬರೆಯಬೇಕೆಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಹೇಳುವುದಿಲ್ಲ. ಆದರೆ ಈಗ ನಾವು ಕನ್ನಡ ಲಿಪಿಯನ್ನು ಬಳಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬ್ಯಾರಿ ಲಿಪಿಯನ್ನು ಬಳಸಿ ಅಧ್ಯಯನ ಮಾಡಬೇಕೆಂದು ಬಯಸುವವರಿಗೆ ಬ್ಯಾರಿ ಭಾಷೆಯಲ್ಲಿ ಲಿಪಿ ಇಲ್ಲ ಎಂಬ ಕೊರತೆಯನ್ನು ನಾವು ನೀಗಿಸಿದ್ದೇವೆ. ಬ್ಯಾರಿ ಭಾಷೆಗೆ ಶ್ರೀಮಂತಿಕೆಯನ್ನು ಕೊಡುವ ಪ್ರಯತ್ನವನ್ನು ಅಕಾಡೆಮಿ ಮಾಡಿದೆ . ಒಂದು ಭಾಷೆಗೆ ಲಿಪಿ ಇದ್ದರೆ ಭಾಷೆಗೆ ಇರುವಂತಹ ಪ್ರಾಮುಖ್ಯತೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಮಂಗಳೂರು: ಯುವಕನಿಗೆ ಚೂರಿ ಇರಿದ ಮೂವರು ಆರೋಪಿಗಳು ಅಂದರ್​

ಕಾರ್ಯಕ್ರಮದಲ್ಲಿ ಬ್ಯಾರಿ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಬ್ಯಾರಿ ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ, ರೂಪೇಶ್ ಉಚ್ಚಿಲ್, ನಫೀಸತ್ ಮಿಸ್ರಿಯಾ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.