ETV Bharat / city

ಮಂಗಳೂರು-ಮುಂಬೈ ಇಂಡಿಗೋ ಫ್ಲೈಟ್​ನಲ್ಲಿ ಕೇಳಿ ಬಂತು ತುಳು ಭಾಷೆಯ ಅನೌನ್ಸ್​ಮೆಂಟ್ : ವಿಡಿಯೋ ವೈರಲ್

ಇಂಗ್ಲಿಷ್ ಭಾಷೆಯಲ್ಲಿ ಮಾಡುವ ಅನೌನ್ಸ್​ಮೆಂಟ ಅನ್ನು ತುಳುವಿನಲ್ಲಿ ಬರೆದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಪೈಲಟ್​ನ ಭಾಷಾಭಿಮಾನಕ್ಕೆ ತುಳು ಮಂದಿ ಫಿದಾ ಆಗಿದ್ದಾರೆ..

author img

By

Published : Dec 26, 2021, 12:37 PM IST

Tulu Language Announcement video viral
ತುಳು ಭಾಷೆಯ ಅನೌನ್ಸ್​ಮೆಂಟ್ ವಿಡಿಯೋ ವೈರಲ್

ಮಂಗಳೂರು : ತುಳು ರಾಜ್ಯದ ಅಧಿಕೃತ ಭಾಷೆಯಾಗಬೇಕು. ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂಬ ಹಕ್ಕೊತ್ತಾಯ ಕೇಳಿ ಬರುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಭಿನ್ನ-ವಿಭಿನ್ನ ಪ್ರಯತ್ನ ನಡೆಯುತ್ತಿವೆ. ಈ ನಡುವೆ ತುಳು ಭಾಷಿಗ ಪೈಲಟ್ ಓರ್ವರು ವಿಮಾನದಲ್ಲಿ ತುಳು ಭಾಷೆಯಲ್ಲೇ ಅನೌನ್ಸ್‌ಮೆಂಟ್ ಮಾಡಿ ತಮ್ಮ ಭಾಷಾಭಿಮಾನವನ್ನು ಮೆರೆದಿದ್ದಾರೆ.

ಮುಂಬೈ- ಮಂಗಳೂರು ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ಪ್ರಯಾಣಿಕರನ್ನು ತುಳು ಭಾಷೆಯಲ್ಲಿ ಸ್ವಾಗತಿಸುವ ಮೂಲಕ ಪೈಲಟ್ ಪ್ರದೀಪ್ ಪದ್ಮಶಾಲಿ ತಮ್ಮ ತು ಭಾಷಾಭಿಮಾನವನ್ನು ಮೆರೆದಿದ್ದಾರೆ. ಮಾಮೂಲಿ ಫ್ಲೈಟ್‌ಗಳಲ್ಲಿ ಕೇಳಿ ಬರೋದು ಬರೀ ಹೈಫೈ ಇಂಗ್ಲಿಷ್ ಪದಗಳೇ..

ಈ ನಡುವೆ ಪೈಲಟ್ ಪ್ರದೀಪ್ ಪದ್ಮಶಾಲಿಯವರು ಶುಕ್ರವಾರ ರಾತ್ರಿ 8 ಗಂಟೆಗೆ ಮುಂಬೈನಿಂದ ಮಂಗಳೂರಿಗೆ ವಿಮಾನ ಹೊರಡುವ ಸಮಯದಲ್ಲಿ ತುಳುವಿನಲ್ಲಿಯೇ ಅನೌನ್ಸ್‌ಮೆಂಟ್ ಮಾಡಿ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ.

ತುಳು ಭಾಷೆಯ ಅನೌನ್ಸ್​ಮೆಂಟ್ ವಿಡಿಯೋ ವೈರಲ್..

ಮುಂಬೈ-ಮಂಗಳೂರು ನಡುವೆ ಸಂಚರಿಸುವ ಈ ಫ್ಲೈಟ್​ನಲ್ಲಿ ಅಧಿಕ ಸಂಖ್ಯೆಯಲ್ಲಿ ಕರಾವಳಿಯ ತುಳು ಭಾಷಿಗ ಪ್ರಯಾಣಿಕರೇ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಪೈಲಟ್ ಪ್ರದೀಪ್, ವಿಮಾನ ನಿಲ್ದಾಣದ ಹಿರಿಯಾಧಿಕಾರಿಗಳ ಅನುಮತಿ ಪಡೆದು ಈ ರೀತಿ ತುಳುವಿನಲ್ಲಿ ಅನೌನ್ಸ್​ಮೆಂಟ್ ಮಾಡಿದ್ದಾರೆ.

ಇಂಗ್ಲಿಷ್ ಭಾಷೆಯಲ್ಲಿ ಮಾಡುವ ಅನೌನ್ಸ್​ಮೆಂಟ ಅನ್ನು ತುಳುವಿನಲ್ಲಿ ಬರೆದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಪೈಲಟ್​ನ ಭಾಷಾಭಿಮಾನಕ್ಕೆ ತುಳು ಮಂದಿ ಫಿದಾ ಆಗಿದ್ದಾರೆ.

ಪ್ರದೀಪ್ ಪದ್ಮಶಾಲಿಯವರು ಉಡುಪಿ ಮೂಲದವರಾಗಿದ್ದು, ಮುಂಬೈನಲ್ಲಿಯೇ ನೆಲೆಸಿ ಶಿಕ್ಷಣ ಪಡೆದು ಪೈಲಟ್ ಆಗಿ ಕೆಲಸ ಮಾಡುತ್ತಿದ್ದಾರೆ‌. ಅವರು ತಮ್ಮ ಮಾತೃಭಾಷೆ ತುಳುವಿನ ಬಗ್ಗೆ ಅಭಿಮಾನದಿಂದ ಅನೌನ್ಸ್‌ಮೆಂಟ್ ಮಾಡಿರೋದು ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.