ETV Bharat / city

ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ: ಹೆಚ್.ಎಸ್.ವೆಂಕಟೇಶಮೂರ್ತಿ ಹೇಳಿದ್ದೇನು? - ಸಾಹಿತ್ಯ ಸಮ್ಮೇಳನದಲ್ಲಿ ಹೆಚ್.ಎಸ್. ವೆಂಕಟೇಶಮೂರ್ತಿ ಭಾಷಣ

ಗಡಿ ಭಾಗದಲ್ಲಿ ಕನ್ನಡ ಉಳಿಯಬೇಕಾದ್ರೆ ಮೊದಲು ಗಡಿ ಭಾಗದ ಮನೆಗಳಲ್ಲಿ ಕನ್ನಡ ಮಾತನಾಡುವಂತಾಗಬೇಕು ಎಂದು ಹಿರಿಯ ಸಾಹಿತಿ 85 ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಹೆಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

H.S.Venkatesh murthy
ಕಲಬುರಗಿ ಸಾಹಿತ್ಯ ಸಮ್ಮೇಳನ
author img

By

Published : Feb 7, 2020, 8:01 PM IST

Updated : Feb 7, 2020, 8:29 PM IST

ಕಲಬುರಗಿ: ಗಡಿ ಭಾಗದಲ್ಲಿ ಕನ್ನಡ ಉಳಿಯಬೇಕಾದ್ರೆ ಮೊದಲು ಗಡಿ ಭಾಗದ ಮನೆಗಳಲ್ಲಿ ಕನ್ನಡ ಮಾತನಾಡುವಂತಾಗಬೇಕು ಎಂದು ಹಿರಿಯ ಸಾಹಿತಿ 85 ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಹೆಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕಲಬುರಗಿ ಸಾಹಿತ್ಯ ಸಮ್ಮೇಳನ

ಸಮ್ಮೇಳನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಗಡಿ ಭಾಗದಲ್ಲಿ ಕನ್ನಡ ಉಳಿಸಲು ಮಾಡಬೇಕಾದ ಮೊದಲ‌ ಕೆಲಸದ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗಡಿ ಭಾಗದ ಮನೆ ಮನೆಗಳಲ್ಲಿ ಮೊದಲು ಕನ್ನಡ ಭಾಷೆ ಬಳಕೆಯಾಗಬೇಕು. ನಂತರ ಮಕ್ಕಳ ಶಿಕ್ಷಣ ಕನ್ನಡವಾಗಬೇಕು. ಮನೆಯೇ ಮೊದಲ ಪಾಠಶಾಲೆಯಾದ್ರೆ ಗಡಿಯಲ್ಲಿ ಕನ್ನಡ ಭಾಷೆ ರಕ್ಷಣೆ ಖಂಡಿತ ಎಂದು ಅಭಿಪ್ರಾಯ ಪಟ್ಟರು.

ಹಿಂದಿ ಭಾಷೆಯ ಹೇರಿಕೆ ಬದಲಾಗಿ ಸಂಸ್ಕೃತ ಭಾಷೆ ಬಳಸುವ ಕುರಿತು ಮಾತನಾಡಿ,‌ ಹಿಂದಿಗೆ ಬದಲಾಗಿ ಸೂಕ್ತವಾದದ್ದು ಸಂಸ್ಕೃತ ಭಾಷೆ ಅನ್ನೋ ಉದ್ದೇಶಕ್ಕೆ ಸಂಸ್ಕೃತ ಬಳಕೆಯಾಗಲಿ ಎಂದರು.

ಸಿಎಎ ಕುರಿತು ಮಾತನಾಡಿದ ಅವರು, ಸಿಎಎ ಜಾರಿಗೆ ಬಂದರೆ ಗಾಂಧಿ, ಅಂಬೇಡ್ಕರ್ ಅಂತಹ ಮಹಾನ್​ ನಾಯಕರು ಕಂಡ ಭಾರತದ ಅಖಂಡತ್ವ ಒಡೆಯದಂತಾಗಲಿದೆ ಎಂದು ವಿಷಾದಿಸಿದರು.

Last Updated : Feb 7, 2020, 8:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.