ETV Bharat / city

ಹುಬ್ಬಳ್ಳಿಯ ಪ್ಲೈಓವರ್ ನಿರ್ಮಾಣಕ್ಕೆ ವಿಘ್ನ: ಉಪಯೋಗವಿಲ್ಲದ ಯೋಜನೆ ಯಾಕೆ..?

ಉಪಯೋಗವಿಲ್ಲದ ಪ್ಲೈಓವರ್ ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿ ಬೇಡವೆ ಬೇಡ. ಬೇರೆ ಕಡೆಗೆ ನಿರ್ಮಾಣ ಮಾಡಿ. ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿ ಪ್ಲೈಓವರ್ ನಿರ್ಮಾಣ ಮಾಡಿದರೇ ನಗರದ ಸೌಂದರ್ಯಕ್ಕೆ‌ ಪೆಟ್ಟು ಬಿಳುವುದು ಮಾತ್ರವಲ್ಲದೇ ಮತ್ತಷ್ಟು ಅವ್ಯವಸ್ಥೆ ಆಗರವಾಗುವುದಂತೂ ಸತ್ಯ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.‌

hubli-fly-over-construction-problems
ಹುಬ್ಬಳ್ಳಿಯ ಪ್ಲೈಓವರ್ ನಿರ್ಮಾಣ
author img

By

Published : Oct 9, 2021, 4:44 PM IST

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯ ಪ್ಲೈಓವರ್ ನಿರ್ಮಾಣಕ್ಕೆ ಒಂದಿಲ್ಲೊಂದು ರೀತಿಯಲ್ಲಿ ವಿಘ್ನಗಳು ಎದುರಾಗುತ್ತಲೇ‌ ಇವೆ. ಮಣ್ಣಿನ‌ ಪರೀಕ್ಷೆ ಆಯ್ತು, ಮೊದಲ ಹಂತದ ಕಾಮಗಾರಿಯೂ ಪ್ರಾರಂಭವಾಗಿದ್ದು, ಈಗ ಅಪಸ್ವರ ಕೇಳಿ ಬರುತ್ತಿದೆ.

ಹುಬ್ಬಳ್ಳಿಯ ಪ್ಲೈಓವರ್ ನಿರ್ಮಾಣಕ್ಕೆ ವಿಘ್ನ

ಹೌದು.. ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಉಪಯೋಗವಿಲ್ಲದ ಪ್ಲೈಓವರ್ ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿ ಬೇಡವೆ ಬೇಡ. ಬೇರೆ ಕಡೆಗೆ ನಿರ್ಮಾಣ ಮಾಡಿ. ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿ ಪ್ಲೈಓವರ್ ನಿರ್ಮಾಣ ಮಾಡಿದರೇ ನಗರದ ಸೌಂದರ್ಯಕ್ಕೆ‌ ಪೆಟ್ಟು ಬೀಳುವುದು ಮಾತ್ರವಲ್ಲದೇ ಮತ್ತಷ್ಟು ಅವ್ಯವಸ್ಥೆ ಆಗರವಾಗುವುದಂತೂ ಸತ್ಯ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.‌

ನಗರದ ಚೆನ್ನಮ್ಮ ವೃತ್ತದ ಮೂಲಕ ಹಾದು ಹೋಗುವ ಪ್ಲೈ ಓವರ್ 3.6 ಕಿಲೊಮೀಟರ್ ಉದ್ದವಿದೆ. ಚನ್ನಮ್ಮ ವೃತ್ತದಿಂದ ಬಾಗಲಕೋಟೆ ರಸ್ತೆಯ ದೇಸಾಯಿ ವೃತ್ತದವರೆಗೆ, ಧಾರವಾಡ ರಸ್ತೆಯ ಹೊಸೂರವರೆಗೆ, ಗದಗ ರಸ್ತೆಯಲ್ಲಿ ಅಂಬೇಡ್ಕರ್ ವೃತ್ತದವರೆಗೆ ಒಟ್ಟು 3.6 ಕಿ.ಮೀ. ನಾಲ್ಕು ಪಥದ ಫ್ಲೈಓವರ್ ನಿರ್ಮಾಣವಾಗಲಿದೆ. ಒಟ್ಟು ಮೂರು ಹಂತದ ಯೋಜನೆಗೆ 1,242 ಕೋಟಿ ವೆಚ್ಚದ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಯೋಜನೆ ವೆಚ್ಚ ಹೆಚ್ಚಾಗಿದೆ ಎಂಬ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಮೂರು ಹಂತಗಳಾಗಿ ವಿಂಗಡಿಸಿ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ, ಡಿಪಿಆರ್ ಮೂಲಕ ಇದು ಯಾರಿಗೂ ಕೂಡ ಉಪಯೋಗ ಆಗುವುದಿಲ್ಲ. ಇದನ್ನು ಕೈ ಬಿಟ್ಟು ಬೇರೆ ಪರ್ಯಾಯ ಯೋಜನೆಯನ್ನು ಅವಳಿನಗರದ ಜನರಿಗೆ ತೆಗೆದುಕೊಂಡು ಬನ್ನಿ ಅಂತಿದ್ದಾರೆ ಉದ್ಯಮಿಗಳು.

ಒಟ್ಟಿನಲ್ಲಿ ಸಾಕಷ್ಟು ವಿರೋಧದ ನಡುವೆಯೂ ಇಂತಹ ಪ್ಲೈ ಓವರ್ ಬೇಕಾ ಎಂಬುವ ಪ್ರಶ್ನೆಗಳು ಸಾರ್ವಜನಿಕರ ವಲಯದಲ್ಲಿ ಉದ್ಬವವಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು ಅಧಿಕಾರಗಳು ಉತ್ತರಿಸಿ ಗೊಂದಲಕ್ಕೆ ತೆರೆ ಎಳೆಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.