ETV Bharat / city

ದಯವಿಟ್ಟು ಮನೆಯಿಂದ ಹೊರ ಬರಬೇಡಿ: ಕೈಮುಗಿದು ಕೇಳಿಕೊಂಡ ರೇಣುಕಾಚಾರ್ಯ

ಕೊರೊನಾ ವೈರಸ್​ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ಯಾರೂ ಆದೇಶ ಉಲ್ಲಂಘಿಸಬೇಡಿ ಎಂದು ರೇಣುಕಾಚಾರ್ಯ ಮನವಿ ಮಾಡಿದರು.

author img

By

Published : Mar 27, 2020, 5:47 PM IST

Updated : Mar 27, 2020, 5:54 PM IST

renukacharya
ದಯವಿಟ್ಟು ಮನೆಯಿಂದ ಹೊರ ಬರಬೇಡಿ

ದಾವಣಗೆರೆ: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ದಯವಿಟ್ಟು ವಿನಾ ಕಾರಣ ರಸ್ತೆಗಿಳಿಯಬೇಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ಪಿ.‌ರೇಣುಕಾಚಾರ್ಯ ವಾಹನ ಸವಾರರಲ್ಲಿ ಮನವಿ ಮಾಡಿದರು.

ನಗರದ ಜಯದೇವ ಸರ್ಕಲ್​​​​ನಲ್ಲಿ ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ಜೊತೆ ಮನೆ ಬಿಟ್ಟು ಹೊರ ಬಂದ ವಾಹನ ಸವಾರರಿಗೆ ಅರಿವು ಮೂಡಿಸಿದರು. ಅಗತ್ಯ ಅಥವಾ ತುರ್ತು ಕೆಲಸ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ ಎಂದು ಕೈಮುಗಿದು ಕೇಳಿಕೊಂಡರು.

ಕೈಮುಗಿದು ಬೇಡಿಕೊಂಡ ರೇಣುಕಾಚಾರ್ಯ

ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರು ಜನರಿಗೋಸ್ಕರ ಲಾಕ್​​ಡೌನ್​​ ಆದೇಶಿಸಿದ್ದಾರೆ. ದಯವಿಟ್ಟು ಇದನ್ನು ಪಾಲಿಸಿ. ಇದರಿಂದ ಕೊರೊನಾ ಹರಡುವುದರಿಂದ ಎಚ್ಚರ ವಹಿಸಿ.‌ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ವಿನಂತಿಸಿಕೊಂಡರು.

Last Updated : Mar 27, 2020, 5:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.