ETV Bharat / city

ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಪತಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ - crime latest news

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡೇಶ್ವರಿ ನಗರದ ಬಾಡಿಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ.

woman-corpse-in-decay
author img

By

Published : Sep 29, 2019, 11:04 PM IST

ಬೆಂಗಳೂರು: ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡೇಶ್ವರಿ ನಗರದ ಬಾಡಿಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಪತಿಯೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ನಂದಿನಿ ಮೃತರು. ಮನೆಯಿಂದ ದುರ್ವಾಸನೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಹಾಸನದ ಬೇಲೂರು ತಾಲೂಕಿನ ಮಧು ಹತ್ತು ವರ್ಷಗಳ ಹಿಂದೆ ಪ್ರೀತಿಸಿ ನಂದಿನಿಯನ್ನು ವಿವಾಹವಾಗಿದ್ದ. ದಂಪತಿಗೆ ಏಳು ವರ್ಷದ ಹೆಣ್ಣು ಮಗಳು ಹಾಗೂ ನಾಲ್ಕು ವರ್ಷ ಪುತ್ರ ಇದ್ದಾನೆ. ಪತಿ ಮಧು ಆಟೋ ಚಾಲಕನಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ.

ಸೆ. 22ರಂದು ಮನೆಗೆ ಬೀಗ ಹಾಕಿಕೊಂಡು ತನ್ನಿಬ್ಬರು ಮಕ್ಕಳೊಂದಿಗೆ ಹಾಸನದಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿದ್ದ. ಮಕ್ಕಳೊಂದಿಗೆ ಬಂದಿದ್ದ ಮಧುನನ್ನು ಚಿಕ್ಕಮ್ಮ ಪ್ರಶ್ನಿಸಿದ್ದರೂ ಆತ ಪ್ರತಿಕ್ರಿಯೆ ನೀಡಿರಲಿಲ್ಲ. ಸಂಜೆ ತನಕ ಉಪಚರಿಸಿದ್ದ ಚಿಕ್ಕಮ್ಮ ತನ್ನ ಊರಿಗೆ ಹೋಗುವಂತೆ ಮಧುಗೆ ಹೇಳಿ ಕಳುಹಿಸಿದ್ದರಂತೆ.

ಮಧು ವರ್ತನೆಯಿಂದ ಅನುಮಾನಗೊಂಡು ಮಕ್ಕಳ ಜತೆ ಮನೆಗೆ ಬಂದಿದ್ದ ವಿಚಾರವನ್ನು ಆತನ ಸಹೋದರ ಸತೀಶ್‌ಗೆ ಹೇಳಿದ್ದರು. ಸತೀಶ್, ಮಧು ಮೊಬೈಲ್‌ಗೆ ಕರೆ ಮಾಡಿದ್ದಾಗ ಸ್ವಿಚ್ ಆಫ್ ಆಗಿತ್ತು. ನಾಲ್ಕೈದು ದಿನ ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್​ ಆಫ್​ನಲ್ಲೇ ಇತ್ತು. ಹೀಗಾಗಿ ಬೆಂಗಳೂರಿನ ಸಂಬಂಧಿಕರೊಬ್ಬರಿಗೆ ತಿಳಿಸಿ ಮಧು ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದರು. ಸಂಬಂಧಿಯೊಬ್ಬರು ಮನೆ ಬಳಿ ಬಂದಾಗ ದುರ್ವಾಸನೆ ಬರುತ್ತಿತ್ತು.

ಆತಂಕಗೊಂಡು ಬಾಗಿಲು ಒಡೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ನಮಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

Intro:Body:Photo sikilla
ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ: ಉಸಿರುಗಟ್ಟಿಸಿ ಹತ್ಯೆಗೈದಿರುವ ಶಂಕೆ

ಬೆಂಗಳೂರು:
ಬೇಗೂರಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಉಸಿರುಗಟ್ಟಿಸಿ ಹತ್ಯೆಗೈಲಾಗಿದೆ.
ಬೇಗೂರಿನ ಚಾಮುಂಡೇಶ್ವರಿ ನಗರ ನಿವಾಸಿ ನಂದಿನಿ ತಲೆಮರೆಸಿಕೊಂಡಿರುವ ಪತಿ ಮಧು ಎಂಬಾತನೇ ಕೊಲೆ ಮಾಡಿರುವ ಶಂಕೆ ಇದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಮನೆಯಿಂದ ದುರ್ವಾಸನೆ ಬಂದ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಧು ಅಲಿಯಾಸ್ ಆಟೋ ಮಧು ಕಳೆದ ಹತ್ತು ವರ್ಷಗಳ ಹಿಂದೆ ಪ್ರೀತಿಸಿ ನಂದಿನಿಯನ್ನು ವಿವಾಹವಾಗಿದ್ದ. ದಂಪತಿಗೆ ಏಳು ವರ್ಷದ ಹೆಣ್ಣು ಮಗಳು ಹಾಗೂ ನಾಲ್ಕು ವರ್ಷ ಪುತ್ರ ಇದ್ದಾನೆ. ಮಧು ಆಟೋ ಚಾಲಕನಾಗಿದ್ದರೆ, ನಂದಿನಿ ಗೃಹಿಣಿಯಾಗಿದ್ದರು.
ಕಳೆದ ಸೆ.೨೨ರಂದು ಮನೆ ಬೀಗ ಹಾಕಿಕೊಂಡು ಇಬ್ಬರು ಮಕ್ಕಳನ್ನು ಕರೆದುಕೊಂಡು ಮಧು ಹಾಸನದಲ್ಲಿರುವ ಚಿಕ್ಕಮ್ಮನ ಮನೆಗೆ ಆಟೋದಲ್ಲಿ ಹೋಗಿದ್ದ. ಮಕ್ಕಳ ಜತೆ ಬಂದಿದ್ದ ಮಧುನನ್ನು ಆತನ ಚಿಕ್ಕಮ್ಮ ಪ್ರಶ್ನೆ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಂಜೆ ತನಕ ಮಧುಗೆ ಉಪಚರಿಸಿದ್ದ ಚಿಕ್ಕಮ್ಮ ತನ್ನ ಊರಿಗೆ ಹೋಗುವಂತೆ ಮಧುಗೆ ಹೇಳಿ ಕಳುಹಿಸಿದ್ದರು. ಅಲ್ಲದೆ, ಮಧು ವರ್ತನೆಯಿಂದ ಅನುಮಾನಗೊಂಡು ಮಕ್ಕಳ ಜತೆ ಮನೆಗೆ ಬಂದಿದ್ದ ವಿಚಾರವನ್ನು ಆತನ ಸಹೋದರ ಸತೀಶ್‌ನಿಗೆ ಹೇಳಿದ್ದರು. ಸಹೋದರ ಸತೀಶ್, ಮಧು ಮೊಬೈಲ್‌ಗೆ ಕರೆ ಮಾಡಿದ್ದು, ಸ್ವಿಚ್ ಆಫ್ ಆಗಿತ್ತು. ನಾಲ್ಕೈದು ದಿನ ಪ್ರಯತ್ನಿಸಿದರೂ ಮಧು ಮೊಬೈಲ್ ಚಾಲನೆಯಲಿರಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿರುವ ಸಂಬಂಧಿಯೊಬ್ಬರಿಗೆ ತಿಳಿಸಿ ಮಧು ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದರು. ಅದರಂತೆ ಸಂಬಂಧಿಕರೊಬ್ಬರು ಭಾನುವಾರ ಮನೆ ಬಳಿ ಹೋಗಿ ನೋಡಿದಾಗ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಆತಂಕಗೊಂಡು ಬಾಗಿಲು ಒಡೆದು ನೋಡಿದಾಗ ಮೃತ ದೇಹ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.