ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಟೋಲ್ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಜುಲೈ 1 ರಿಂದಲೇ ಈ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ. ದ್ವಿಚಕ್ರ ವಾಹನಕ್ಕೆ- 20 ರೂ. ಹಿಂತಿರುಗಿ ಬರುವುದಕ್ಕೆ 30 ರೂ. ಶುಲ್ಕ ನಿಗದಿಯಾಗಿದೆ.
ಕಾರು, ಜೀಪ್, ವ್ಯಾನ್ಗೆ 50 ರೂ. ಹಿಂತಿರುಗೆ ಬರುವುದಕ್ಕೆ 80 ರೂ. ಶುಲ್ಕ ನಿಗದಿಯಾಗಿದೆ. ಮಿನಿ ಬಸ್, ಲಘು ವಾಹನ 80 ರೂ. ವಾಪಸ್ ಬಂದರೆ 110 ರೂ ನಿಗದಿಯಾಗಿದ್ದರೆ, ಬಸ್, ಗೂಡ್ಸ್ಗೆ 145 ರೂ, ಹಿಂತಿರುಗಿ ಬಂದ್ರೆ 220 ರೂ. ಟೋಲ್ ದರ ಫಿಕ್ಸ್ ಆಗಿದೆ. ಇನ್ನು ಭಾರಿ ವಾಹನಕ್ಕೆ 295 ರೂ. ಹಾಗೂ ಹಿಂತಿರುಗಿ ಬಂದ್ರೆ 440ರೂ. ಟೋಲ್ ಚಾರ್ಜ್ ಫಿಕ್ಸ್ ಆಗಿದೆ.
ಇನ್ನು ವಾಹನಗಳ ಮಾಸಿಕ ಪಾಸ್ನಲ್ಲಿ ಟೋಲ್ ಶುಲ್ಕದಲ್ಲಿ ಶೇಕಡ 75 ರಿಂದ 80 ರಷ್ಟು ಹೆಚ್ಚಳವಾಗಿದೆ. ದ್ವಿಚಕ್ರ ವಾಹನಕ್ಕೆ ಮಾಸಿಕ ಪಾಸ್ ದರ 625ರೂ. ಕಾರು, ಜೀಪ್, ವ್ಯಾನ್ಗೆ ಟೋಲ್ನ ಮಾಸಿಕ ಪಾಸ್ ದರ 1570 ರೂ, ಲಘು ವಾಹನ, ಮಿನಿ ಬಸ್ಗೆ ಟೋಲ್ನ ಮಾಸಿಕ ಪಾಸ್ ದರ- 2195 ರೂ, ಟ್ರಕ್ ಮತ್ತು ಬಸ್ಗೆ 4390 ರೂ ನಿಗದಿಪಡಿಸಲಾಗಿದೆ. ಇನ್ನು ಭಾರೀ ವಾಹನಗಳಿಗೆ ಎಲೆಕ್ಟ್ರಾನಿಕ್ ಸಿಟಿ ಟೋಲ್ನ ಮಾಸಿಕ ಪಾಸ್ ದರ-8780 ರೂ ನಿಗದಿಯಾಗಿದೆ.
ರೈತರು, ವಾಹನ ಸವಾರರಿಂದ ಆಕ್ರೋಶ:
ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ರಸ್ತೆ ಬಳಕೆ ಟೋಲ್ ಶುಲ್ಕ ಹೆಚ್ಚಳವಾದ ಹಿನ್ನೆಲೆಯಲ್ಲಿ ವಾಹನ ಸವಾರರಿಂದ ವಿರೋಧ ವ್ಯಕ್ತವಾಗಿದೆ. ಟೋಲ್ ಇರುವ ಸುತ್ತಮುತ್ತಲೂ ಐಟಿ ಕಂಪನಿಗಳು ಹಲವು ಕಾರ್ಖಾನೆಗಳು ಇವೆ. ಕೆ.ಆರ್ ಮಾರ್ಕೆಟನ್ನು ಸಿಂಗಸಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತರಕಾರಿ ವ್ಯಾಪಾರಿಗಳಿಗೆ ಟೋಲ್ ರಸ್ತೆಯನ್ನೇ ಬಳಸಿ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಆದ್ರೆ ಟೋಲ್ ಶುಲ್ಕ ಹೆಚ್ಚಳದಿಂದ ತೊಂದರೆ ಉಂಟಾಗಿದೆ. ಕೂಡಲೇ ಟೋಲ್ ಶುಲ್ಕ ಹೆಚ್ಚಳ ಸಂಬಂಧಿಸಿದಂತೆ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.