ETV Bharat / city

ಬೆಂಗಳೂರಲ್ಲಿ ಒಂದು ಸಾವಿರಕ್ಕೂ ಅಧಿಕ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್​ಗೆ ಸಂಸದ ತೇಜಸ್ವಿ ಸೂರ್ಯ ಚಾಲನೆ

author img

By

Published : May 10, 2021, 8:01 AM IST

ಬೆಂಗಳೂರು ದಕ್ಷಿಣ ಭಾಗದ ಜನರಿಗಾಗಿ ಸಂಸದ ತೇಜಸ್ವಿ ಸೂರ್ಯ, 250 ಯೂನಿಟ್​ಗಳ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್‌ಗೆ ಚಾಲನೆ ನೀಡಿದರು.

Bangalore
1 ಸಾವಿರಕ್ಕೂ ಅಧಿಕ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್​ಗೆ ಚಾಲನೆ ನೀಡಿದ ತೇಜಸ್ವಿ ಸೂರ್ಯ

ಬೆಂಗಳೂರು: ಕೊರೊನಾ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಯೂನಿಟ್​ಗಳ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್‌ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಭಾನುವಾರ ಚಾಲನೆ ನೀಡಿದರು.

1 ಸಾವಿರಕ್ಕೂ ಅಧಿಕ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್​ಗೆ ಚಾಲನೆ ನೀಡಿದ ತೇಜಸ್ವಿ ಸೂರ್ಯ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1 ಸಾವಿರಕ್ಕೂ ಅಧಿಕ ಆಕ್ಸಿಜನ್ ಕಾನ್ಸಂಟ್ರೇಟರ್​​​ಗಳನ್ನು ಬೆಂಗಳೂರು ನಾಗರಿಕರ ಸೇವೆಗೆ ಒದಗಿಸಲಿದ್ದು, ಈಗಾಗಲೇ 100 ಜನ ಕೋವಿಡ್ ಸೋಂಕಿತರಿಗೆ ಹಾಗು ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದ 150 ರೋಗಿಗಳ ಮನೆಗೆ ಕಾನ್ಸಂಟ್ರೇಟರ್ ಸೇವೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್​ನ ಅಲ್ಪ ಗುಣಲಕ್ಷಣಗಳನ್ನು ಹೊಂದಿದ ಹಲವು ರೋಗಿಗಳಲ್ಲಿ ಆಕ್ಸಿಜನ್ ಕೊರತೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಆಸ್ಪತ್ರೆ ಬೆಡ್ ಹಂಚಿಕೆಗಿಂತ ಪೂರ್ವದಲ್ಲಿ ಆಕ್ಸಿಜನ್ ಒದಗಿಸಿದಲ್ಲಿ ರೋಗಿಗಳಿಗೆ ಅತ್ಯಂತ ಹೆಚ್ಚಿನ ಸಹಾಯವಾಗಲಿದ್ದು, ಮನೆಯಲ್ಲಿ ಇದ್ದುಕೊಂಡೇ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಬಹುದು.

ನಗರದಲ್ಲಿ ಐಸಿಯು ಬೆಡ್​ಗಳ ಸಮಸ್ಯೆ ಎದ್ದು ಕಾಣಿಸುತ್ತಿದೆ. ಈ ಸಮಸ್ಯೆ ಆಗಬಾರದು ಅಂತಾ ಕಾನ್ಸಂಟ್ರೇಟರ್ ಬ್ಯಾಂಕ್​ಗಳನ್ನ‌ ಕೊಡುತ್ತಿದ್ದೇವೆ. ಬೇರೆ ದೇಶದಲ್ಲಿರುವ ಕನ್ನಡಿಗರು ನಮಗೆ ಇದನ್ನ ಕಳುಹಿಸಿದ್ದಾರೆ. 1,000 ಆಕ್ಸಿಜನ್ ಬ್ಯಾಂಕ್​ಗಳನ್ನ ಮಾಡುತ್ತೇವೆ. ಕೊರೊನಾ ಚಿಕಿತ್ಸೆ ಆದ ನಂತರವೂ ಕೆಲವರಿಗೆ ಆಕ್ಸಿಜನ್ ಅವಶ್ಯಕತೆ ಇದೆ. ಅಂತಹವರಿಗಾಗಿ ಈ ಆಮ್ಲಜನಕ ಬ್ಯಾಂಕ್ ಸಹಾಯವಾಗಲಿವೆ. ಸುಮಾರು 350 ಕಾನ್ಸಂಟ್ರೇಟರ್​ಗಳು ಪೇಟಿಎಂ ಕಂಪನಿಯಿಂದ ಜಯನಗರದ ಆಸ್ಪತ್ರೆಗೆ ಬರಲಿವೆ.

08061914960 ನಂಬರ್​ಗೆ ಕರೆ ಮಾಡಿದರೆ ಆಕ್ಸಿಜನ್ ಕಾನ್ಸಂಟ್ರೇಟರ್ ಅವಶ್ಯಕತೆ ಇರುವವರಿಗೆ ಸಿಗಲಿವೆ. ಈ ಸೇವೆ ಸಂಪೂರ್ಣ ಉಚಿತವಾಗಿರಲಿದೆ. ಪೀಸ್ ಆಟೋ ಸಂಸ್ಥೆ ತಲುಪಿಸುವ ಕಾರ್ಯದಲ್ಲಿ ಕೈಜೋಡಿಸಿದೆ ಎಂದು ಸಂಸದರು ಹೇಳಿದರು.

ಓದಿ: ಬೇಕಾಬಿಟ್ಟಿ ಓಡಾಟ.. ಹುಬ್ಬಳ್ಳಿಯಲ್ಲಿ ಎಎಸ್​ಐನಿಂದ ಯುವಕನ ಮೇಲೆ ಹಲ್ಲೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.