ಬೆಂಗಳೂರು: ಕೋವಿಡ್ ಮರಣ ಪರಿಶೋಧನಾ ತಂಡವನ್ನು ರಚಿಸಿ ಸರ್ಕಾರ ಆದೇಶಿಸಿದೆ.
ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯಮಟ್ಟದಲ್ಲಿ ಕೋವಿಡ್ನಿಂದ ಮರಣಕ್ಕೆ ಕಾರಣಗಳು, ರೋಗಲಕ್ಷಣಗಳು, ಸಹರೋಗಗಳು, ಲಸಿಕಾಕರಣ, ಆಸ್ಪತ್ರೆಗೆ ರೋಗಿಗಳು ದಾಖಲಾದ ದಿನಗಳ ವಿಶ್ಲೇಷಣೆ, ದಾಖಲಾತಿ ಮತ್ತು ವರದಿಯಲ್ಲಿನ ವಿಳಂಬ ಮುಂತಾದವುಗಳನ್ನು ಪರಿಶೀಲಿಸಿ, ವಿಶ್ಲೇಷಣೆ ನಡೆಸಿ, ಅಗತ್ಯ ಸೂಚನೆಗಳನ್ನು ಮತ್ತು ಸಲಹೆಗಳನ್ನು ನೀಡಲು, ಚಿಕಿತ್ಸಾ ಶಿಷ್ಟಾಚಾರವನ್ನು ಪಾಲನೆ ಮಾಡಲು ಹಾಗೂ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಕೋವಿಡ್ ಮರಣ ಪರಿಶೋಧನಾ ತಂಡ ರಚಿಸಲು ನಿರ್ಧರಿಸಲಾಗಿದೆ.
ಸಮಿತಿಯ ಜವಾಬ್ದಾರಿಗಳು ಹೀಗಿವೆ:
- ದೈನಂದಿನ ಮರಣಗಳ ವಿಶ್ಲೇಷಣಾ ವರದಿಗಳನ್ನು ಕ್ರೋಢೀಕರಿಸಬೇಕು
- ಸಂಭಾವ್ಯ ಕಾರ್ಯತಂತ್ರಗಳನ್ನು ವರದಿ ಮಾಡಬೇಕು
- ರಾಜ್ಯದಲ್ಲಿನ ಪ್ರಮುಖ ಸಾವಿನ ವಿಶ್ಲೇಷಣಾ ವರದಿಗಳ ಕಾರಣಗಳನ್ನು ಸಾರಾಂಶ ಮಾಡಿ, ಪ್ರತಿ ವಾರ ಕ್ರಿಯಾ ಯೋಜನೆಯನ್ನು ಸೂಚಿಸಲು ವಿಶ್ಲೇಷಿಸಬೇಕಾದ ವಿವರವಾದ ಜಿಲ್ಲಾ ಮಟ್ಟದ ಸಾವಿನ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸಬೇಕು
- ವಿವರವಾದ ಡೆತ್ ಆಡಿಟ್ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲು ಸಾಧ್ಯವಾಗುವಂತೆ ಪ್ರತಿ ತಿಂಗಳು ಆರೋಗ್ಯ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಬೇಕು.
ಇದನ್ನೂ ಓದಿ: ಆಮ್ಲೆಟ್ ಮಾಡಿಕೊಡಲಿಲ್ಲ ಅಂತಾ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ!