ETV Bharat / city

Rajamouli Visits Puneeth Rajkumar House : ಅಪ್ಪು ಕಾರ್ಯಗಳನ್ನು ಸ್ಮರಿಸಿದ ಬಾಹುಬಲಿ ನಿರ್ದೇಶಕ - ಪುನೀತ್​ ರಾಜಕುಮಾರ್ ನಿವಾಸಕ್ಕೆ ನಿರ್ದೇಶಕ ರಾಜಮೌಳಿ ಭೇಟಿ

ನಟ ಸಾರ್ವಭೌಮ ಪುನೀತ್​ ರಾಜಕುಮಾರ್ ನಿವಾಸಕ್ಕೆ ನಿರ್ದೇಶಕ ರಾಜಮೌಳಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ, ಅವರಿಂದ ಬಹಳಷ್ಟು ಕಲಿಯುವುದಿದೆ. ಅವರ ಸಾಮಾಜಿಕ ಕಳಕಳಿ, ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಅಪ್ಪು ಕಾರ್ಯಗಳ ಕುರಿತು ಹೊಗಳಿದರು..

Rajamouli,  Puneeth Rajkumar
ರಾಜಮೌಳಿ, ಪುನೀತ್ ರಾಜಕುಮಾರ್
author img

By

Published : Nov 26, 2021, 5:11 PM IST

Updated : Nov 26, 2021, 5:22 PM IST

ಬೆಂಗಳೂರು : ನಟ ಪುನೀತ್​ ರಾಜಕುಮಾರ್ ನಿಧನ ಹಿನ್ನೆಲೆ ಸದಾಶಿವನಗರದ ಅವರ ಮನೆಗೆ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅಪ್ಪು ಜೊತೆಗಿನ ಒಡನಾಟಗಳನ್ನು ನೆನೆದರು.

ಪುನೀತ್​ ರಾಜಕುಮಾರ್ ನಿವಾಸಕ್ಕೆ ನಿರ್ದೇಶಕ ರಾಜಮೌಳಿ ಭೇಟಿ

ಪುನೀತ್​ ರಾಜಕುಮಾರ್ ಇಲ್ಲ ಎನ್ನುವ ಆಘಾತ ನಮ್ಮೆಲ್ಲರನ್ನ ಕಾಡುತ್ತಿದೆ.​ ಸ್ವಲ್ಪ ದಿನಗಳ ಹಿಂದೆ ನಾನು ಅವರೊಂದಿಗೆ ಇದೇ ಜಾಗದಲ್ಲಿ ಮಾತನಾಡಿದ್ದಾಗ ಅವರು ನನ್ನನ್ನು ಕುಟುಂಬದವರಂತೆ ಟ್ರೀಟ್ ಮಾಡಿದ್ರು.

ನನ್ನ ಜೊತೆ ಕುಟುಂಬದವರ ಹತ್ತಿರ ಮಾತನಾಡುತ್ತಿದ್ದೇನೆ ಎನ್ನುವ ಭಾವನೆ ಬರುವಂತೆ ನಡೆದುಕೊಂಡಿದ್ದರು. ನನಗೆ ಯಾವುದೇ ಸ್ಟಾರ್ ಜೊತೆ ಮಾತನಾಡುತ್ತಿದ್ದೇನೆ ಅನಿಸಲಿಲ್ಲ.

ಅವರನ್ನು ಕಳೆದುಕೊಂಡಿರುವುದು ಬಹಳ ನೋವಿನ ವಿಚಾರ. ಅವರಿಂದ ಬಹಳಷ್ಟು ಕಲಿಯುವುದಿದೆ. ಒಬ್ಬರಿಗೆ ಸಹಾಯ ಮಾಡಿದ್ರೆ ಊರೆಲ್ಲ ಹೇಳುವ ಜನರಿದ್ದಾರೆ. ಅಂತಹವರಲ್ಲಿ ಅಪ್ಪು ಎಷ್ಟೋ ಜನರಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡಿದ್ದಾರೆ.

ಅವರ ಸಾಮಾಜಿಕ ಕಳಕಳಿ, ಸೇವೆ ನಿಜಕ್ಕೂ ಶ್ಲಾಘನೀಯ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಪುನೀತ್ ಅವರ ಸಾಮಾಜ ಸೇವೆಯನ್ನು ಕುಟುಂಬ ಮುಂದುವರಿಸಿಕೊಂಡು ಹೋಗುತ್ತೆ ಅನ್ನುವ ಭರವಸೆ ಇದೆ ಎಂದು ರಾಜಮೌಳಿ ಭರವಸೆಯ ಮಾತುಗಳನ್ನಾಡಿದರು.

Last Updated : Nov 26, 2021, 5:22 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.