ಬೆಂಗಳೂರು: ವಿಧಾನಸಭೆಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉತ್ತರದ ವೇಳೆ, ಶೇ 40ರಷ್ಟು ಕಮಿಷನ್ ಆರೋಪ ವಿಚಾರ ಪ್ರಸ್ತಾಪವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು. 2022-23ನೇ ಸಾಲಿನ ಬಜೆಟ್ ಅನುದಾನದ ಬೇಡಿಕೆ ಮೇಲೆ ನಡೆದ ಚರ್ಚೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಉತ್ತರ ನೀಡಿದರು.
ಈ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಧ್ಯಪ್ರವೇಶಿಸಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಲ್ಲಾ ಶಾಸಕರಿಗೆ ಶೇ 10ರಷ್ಟು ಕಮಿಷನ್ ಇದೆ ಎಂಬ ಆರೋಪವಿದೆ ಎಂದು ಚರ್ಚೆ ವೇಳೆ ನೀವು ಹೇಳಿದ್ದೀರಿ, ಹಾಗಾದರೆ ನಿಮಗೂ ಕೂಡಾ ಕಮಿಷನ್ ಸೇರಿದಂತಾಯ್ತು ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರಗೆ ಹೇಳಿದರು. ಈ ಸಂದರ್ಭದಲ್ಲಿ ಎದ್ದು ನಿಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಿಮ್ಮ ಸರ್ಕಾರದ ಮೇಲೆ ಶೇ40ರಷ್ಟು ಕಮಿಷನ್ ಆರೋಪ ಇದೆ. ಅಧಿಕೃತವಾಗಿಯೇ ಹೇಳಿದ್ದೆ ಎಂದು ಮಾಧ್ಯಮಗಳ ವರದಿ ತೋರಿಸಿದರು. ಇದು ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ವಾಕ್ಸಮರ, ಕೆಲ ನಿಮಿಷಗಳ ಕಾಲ ಸದನದಲ್ಲಿ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ ರಾಗಿ, ತೊಗರಿ ಸಮಸ್ಯೆ : ಸದನದಲ್ಲಿ ಧರಣಿ ನಡೆಸಿದ ಶಾಸಕ ಡಾ. ರಂಗನಾಥ್