ಬೆಂಗಳೂರು: ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಟ್ರಾಫಿಕ್ ಪೊಲೀಸರು ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ಟ್ರಾಫಿಕ್ ನಿಯಮ ಮತ್ತು ದಂಡ ಕುರಿತಾಗಿ ಕೆಲ ಬದಲಾವಣೆಗಳನ್ನು ತಂದಿತ್ತು. ಈ ನಿಯಮ ಅನುಷ್ಠಾನಗೊಳ್ಳುವ ಮೊದಲೇ ಮತ್ತೊಂದು ದಿಟ್ಟ ಹೆಜ್ಜೆಯನ್ನ ಟ್ರಾಫಿಕ್ ಪೊಲೀಸರು ಇರಿಸಿದ್ದಾರೆ.
ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ದೃಷ್ಟಿಯಿಂದ ಸದ್ಯ ದ್ವಿಚಕ್ರ ಸವಾರರಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ. ಇಂದು ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರನ್ನೂ ಕರೆದು ಸಭೆ ನಡೆಸಿದರು. ಒಂದು ವೇಳೆ ಯಾರಾದ್ರೂ ಹೆಲ್ಮೆಟ್ ಧರಿಸದೇ ಇದ್ರೇ ಪೆಟ್ರೋಲ್ ನೀಡದಂತೆ ಸೂಚಿಸಿದ್ದಾರೆ.
ಈ ನಿಯಮಕ್ಕೆ ಬಂಕ್ ಮಾಲೀಕರೇನಾದ್ರೂ ಒಪ್ಪಿಗೆ ಸೂಚಿಸಿದ್ರೇ, ಆದಷ್ಟು ಹೆಲ್ಮೆಟ್ ಇಲ್ಲದೆ ವಾಹನ ಸವಾರಿ ಮಾಡುವುದು ತಪ್ಪಲಿದೆ.