ETV Bharat / city

ಫೇಲ್​ ಆದ ವಿದ್ಯಾರ್ಥಿಗಳು ಹತಾಶರಾಗಬೇಡಿ: ಸಚಿವ ಸುರೇಶ್​ ಕುಮಾರ್ - ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್​ ಕುಮಾರ್ ಮನವಿ

ಫೇಲ್​ ಆದ ವಿದ್ಯಾರ್ಥಿಗಳಿಗೆ ಅವಹೇಳನ ಮಾಡುವುದು, ನಿಂದಿಸುವುದನ್ನು ಯಾರೂ ಮಾಡಬೇಡಿ ಎಂದು ಪೋಷಕರ ಬಳಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಮನವಿ ಮಾಡಿದ್ದಾರೆ. ಹಾಗೆಯೇ ಫೇಲ್​ ಆದ ವಿದ್ಯಾರ್ಥಿಗಳಿಗೂ ಆತ್ಮಸ್ಥೈರ್ಯ ತುಂಬಿದ್ದಾರೆ.

Minister Suresh Kumar on Second PUC result
ಸಚಿವ ಸುರೇಶ್​ ಕುಮಾರ್
author img

By

Published : Jul 14, 2020, 12:43 PM IST

Updated : Jul 14, 2020, 1:34 PM IST

ಬೆಂಗಳೂರು: ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿಮಗೇ ನೀವೇ ಆತ್ಮಸ್ಥೈರ್ಯ ತುಂಬಿಕೊಳ್ಳಬೇಕೆ ವಿನಃ ದಯವಿಟ್ಟು ಆತ್ಮಹತ್ಯೆಗೆ ಮುಂದಾಗಬೇಡಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್​ ಕುಮಾರ್ ಮನವಿ ಮಾಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಳಿಸಿದ ಸಚಿವರು, ತೇರ್ಗಡೆ ಹೊಂದಿದ, ಡಿಸ್ಟಿಂಕ್ಷನ್​ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಫೇಲ್​ ಆದವರು ಮನನೋಯಿಸುಕೊಳ್ಳುವುದು, ಹತಾಶರಾಗುವುದು ಬೇಡ. ಯಾವುದೇ ಕಾರಣಕ್ಕೂ ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡಬೇಡಿ. ಹಾಗೆಯೇ ಪೋಷಕರೂ ಕೂಡ ಮಕ್ಕಳನ್ನು ಅವಹೇಳನ ಮಾಡುವುದು, ಬಯ್ಯುವುದನ್ನು ಮಾಡಬೇಡಿ ಎಂದು ಕೇಳಿಕೊಂಡರು.

ಪ್ರಶ್ನೆ ಪತ್ರಿಕೆ ಲೀಕ್​ ಆಗದೆ ಹಾಗೂ ಕೊರೊನಾ ಭೀತಿಯ ನಡುವೆಯೂ ಇಂಗ್ಲಿಷ್​ ಪರೀಕ್ಷೆ ನಡೆದಿರುವುದು ಈ ಬಾರಿಯ ಎರಡು ಮುಖ್ಯವಾದ ವಿಷಯಗಳು ಎಂದು ಸುರೇಶ್​ ಕುಮಾರ್ ತಿಳಿಸಿದರು.

ಫಲಿತಾಂಶದಲ್ಲಿ ಈ ಬಾರಿ ಉಡುಪಿ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದ್ದರೆ ಕೊಡಗು ಮೂರನೇ ಸ್ಥಾನದಲ್ಲಿದ್ದರೆ, ವಿಜಯಪುರ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಒಟ್ಟಾರೆ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

Last Updated : Jul 14, 2020, 1:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.