ETV Bharat / city

ಪಾಕಿಸ್ತಾನದ ವ್ಯವಸ್ಥೆ ನೋಡಿ HDK ಆರ್‌ಎಸ್‌ಎಸ್ ಬಗ್ಗೆ ಮಾತನಾಡಿರಬಹುದು: ಸಚಿವ ಆರ್​​.ಅಶೋಕ್ - ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಕುಮಾರಸ್ವಾಮಿ ಯಾವ ವ್ಯವಸ್ಥೆಯಲ್ಲಿ ಬದುಕಿದ್ದಾರೆ?. ಅವರು ಪಾಕಿಸ್ತಾನದ ವ್ಯವಸ್ಥೆಗಳನ್ನು ನೋಡಿರಬೇಕು ಎನಿಸುತ್ತದೆ. ಅಲ್ಲಿನ ವ್ಯವಸ್ಥೆ ನೋಡಿ ಅವರು ಆರ್​​ಎಸ್​​ಎಸ್ ಬಗ್ಗೆ ಹೇಳುತ್ತಿರಬೇಕು ಎಂದು ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.

ಸಚಿವ ಆರ್​​.ಅಶೋಕ್
ಸಚಿವ ಆರ್​​.ಅಶೋಕ್
author img

By

Published : Oct 6, 2021, 7:00 PM IST

ಬೆಂಗಳೂರು: ಐಎಎಸ್‌, ಐಪಿಎಸ್ ಆಯ್ಕೆಗೆ ಅದರದ್ದೇ ಆದ ಪರೀಕ್ಷಾ ವ್ಯವಸ್ಥೆ ಇದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಯಾವ ವ್ಯವಸ್ಥೆಯಲ್ಲಿ ಬದುಕಿದ್ದಾರೋ ಗೊತ್ತಿಲ್ಲ. ಅವರು ಪಾಕಿಸ್ತಾನದ ವ್ಯವಸ್ಥೆ ಬಗ್ಗೆ ಮಾತನಾಡಿರಬೇಕು. ಆದರೆ, ಇದು ಭಾರತ ಎಂದು ಹೆಚ್​ಡಿಕೆಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್​​.ಅಶೋಕ್

ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ಒಂದು ಪುಸ್ತಕದಲ್ಲಿ ಬರೆದಿರುವುದೆಲ್ಲ ನಿಜವಾಗಿ ಇರುವುದಿಲ್ಲ. ಅವರವರ ಭಾವನೆಗಳಿಗೆ ತಕ್ಕ ರೀತಿಯಲ್ಲಿ ಹಲವಾರು ಜನ ಪುಸ್ತಕಗಳನ್ನು ಬರೆದಿರುತ್ತಾರೆ. ಅದನ್ನೇ ಆಧಾರವಾಗಿಟ್ಟುಕೊಂಡು ಆರ್​​ಎಸ್​​ಎಸ್​​ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ.

ಆರ್​​ಎಸ್​​ಎಸ್ ದೇಶಭಕ್ತಿ ಸಂಸ್ಥೆ. ಅವರ ತ್ಯಾಗದ ಫಲದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ದೇಶದಲ್ಲಿ ಉಳಿದಿದೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಇಡೀ ದೇಶದಲ್ಲಿ ಅಂದು ಬಂಧನಕ್ಕೆ ಒಳಗಾಗಿದ್ದವರಲ್ಲಿ ಶೇ.80ರಷ್ಟು ಆರ್​​ಎಸ್​​ಎಸ್ ಹಿನ್ನೆಲೆಯವರು ಇದ್ದಾರೆ. 2ನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದವರು ಪ್ರಮುಖವಾಗಿ ಆರ್​​ಎಸ್​​ಎಸ್ ನವರು. ಅವರಿಗೆ ಯಾವುದೇ ರಾಜಕೀಯ ಗಂಧ ಗಾಳಿ ಇಲ್ಲ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಎಸ್​ಎಸ್​ಎಲ್​ಸಿ, ಇಂಜಿನಿಯರಿಂಗ್ ಪಾಸಾಗಲು ಪರೀಕ್ಷೆ ಹೇಗಿದೆಯೋ ಹಾಗೆ ಐಎಎಸ್ - ಐಪಿಎಸ್ ಪಾಸಾಗಲು ಪರೀಕ್ಷೆ ಇದೆ. ಅದರಲ್ಲಿ ನೀವು ತಪ್ಪುಗಳನ್ನು ಹುಡುಕಲು ಹೊರಟರೆ ಹೇಗೆ?, ಆ ವ್ಯವಸ್ಥೆ ಸರಿ ಇಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಹೆಚ್​​ಡಿಕೆ ಅವರ ನಿಲುವು ಬದಲಾಗುತ್ತಲೇ ಇರುತ್ತದೆ:

ಆರ್​​ಎಸ್​​ಎಸ್ ಬಗ್ಗೆ ಕುಮಾರಸ್ವಾಮಿಗೆ ತಪ್ಪು ತಿಳಿವಳಿಕೆ ಇದೆ. ಆರ್​​ಎಸ್​​ಎಸ್ ದೇಶ ಪ್ರೇಮಿಗಳನ್ನು, ದೇಶ ಭಕ್ತರನ್ನು ಕಟ್ಟುವ ಸಂಸ್ಥೆ. ಅದರ ಬಗ್ಗೆ ಯಾವುದೇ ರೀತಿಯ ಟೀಕೆಗಳನ್ನು ಮಾಡುವ ಅಧಿಕಾರವನ್ನ ಯಾರೂ ಕುಮಾರಸ್ವಾಮಿಗೆ ಕೊಟ್ಟಿಲ್ಲ.

ಕುಮಾರಸ್ವಾಮಿ ಯಾವಾಗಲೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಟೀಕೆ ಮಾಡುತ್ತಾರೆ. ಅವರಿಗೆ ಒಂದು ನಿಲುವಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಒಂದೊಂದು ರೀತಿಯಲ್ಲಿ ನಿಲುವು ವ್ಯಕ್ತಪಡಿಸುತ್ತಾರೆ. 2006ರಲ್ಲಿ ಮೊದಲು ಬಿಜೆಪಿ ಜತೆ ಬಂದಿದ್ದರು. ಆದರೆ, ಈ ಬಾರಿ ಬಿಜೆಪಿ ಹೆಚ್ಚು ಸ್ಥಾನ ಬಂದರೂ ಕಾಂಗ್ರೆಸ್ ಜತೆ ಹೋದರು. ಪ್ರತಿ ನಿಮಿಷಕ್ಕೂ ಅವರ ನಿಲುವು ಬದಲಾಗುತ್ತಲೇ ಇರುತ್ತದೆ ಎಂದು ಟೀಕಿಸಿದರು.

ನನ್ನ ಸೋಲಿಸಲು ಆರ್​​ಎಸ್​ಎಸ್​ ಕಾರಣ ಎಂದ ಖರ್ಗೆ.. ಅಶೋಕ್​ ಟಾಂಗ್​

ನನ್ನ ಸೋಲಿಗೆ ಆರ್​​ಎಸ್​​ಎಸ್ ಕಾರಣ ಎಂಬ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್​​, ಖರ್ಗೆ ಅವರು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅವರು ಹೋರಾಟ ಮಾಡಲಿ. ಆದರೆ ಆರ್‌ಎಸ್‌ಎಸ್ ಯಾವುದೇ ಚುನಾವಣೆಯಲ್ಲಿ ಭಾಗವಹಿಸಿಲ್ಲ. ಆದರೆ ನಾವೆಲ್ಲ ಆರ್‌ಎಸ್‌ಎಸ್. ಇದಕ್ಕಾಗಿ ನಮಗೆ ಹೆಮ್ಮೆ ಇದೆ.

ಕೆಲವರು ಕಮ್ಯೂನಿಸ್ಟ್‌ ಸಿದ್ದಾಂತದ ಕಡೆಯಿಂದ ಬಂದಿರುತ್ತಾರೆ. ಸಂಸ್ಥೆ ಬಗ್ಗೆ ತಿಳಿಯದೇ ಮಾತಾನಾಡಿದ್ದು ಸರಿಯಲ್ಲ. ಆನೆ ಕಾಲು ಮುಟ್ಟಿ, ಆನೆ ಬಾಳೆ ಕಂದು ತರ ಇದೆ ಎಂದು ಹೇಳುವುದು ತಪ್ಪು. ಸರಿಯಾಗಿ ನೋಡಿದರೆ ಆನೆ ಸ್ವರೂಪ ಗೊತ್ತಾಗುತ್ತದೆ. ಎಲ್ಲರಿಗೂ ಆರ್‌ಎಸ್‌ಎಸ್ ಟಾರ್ಗೆಟ್ ‌ಮಾಡಿದರೆ ಪ್ರಚಾರ ಸಿಗುತ್ತದೆ ಎಂದು ಹಾಗೆಲ್ಲ ಮಾಡುತ್ತಾರೆ ಎಂದು ಆರೋಪಿಸಿದರು‌.

ಮಳೆ ವಿಚಾರ.. ಕಮಿಷನರ್​ ಜತೆ ಮಾತನಾಡಿದ್ದೇನೆ

ಬೆಂಗಳೂರಲ್ಲಿ ಮಳೆಯಿಂದ ಸಮಸ್ಯೆ ಆಗಿರುವ ವಿಚಾರ ಕುರಿತು ಬಿಬಿಎಂಪಿ ಕಮಿಷನರ್ ಜತೆ ಮಾತಾಡಿದ್ದೇನೆ. ಅಗತ್ಯ ಕ್ರಮಕ್ಕೆ ಸೂಚಿಸಿದ್ದೇನೆ. ರಸ್ತೆ ಗುಂಡಿ ಸಮಸ್ಯೆ ಇದೆ. ಈ ಬಾರಿ ಸಾಕಷ್ಟು ಮಳೆ ಆಗುತ್ತಿದೆ. ಬೆಂಗಳೂರಲ್ಲಿ ಈಗಾಗಲೇ ಗುಂಡಿ ಮುಚ್ಚಲು ಹೇಳಿದ್ದೇನೆ.

ಮಳೆಯಿಂದ ಗುಂಡಿ‌ ಮುಚ್ಚಲು ಕಷ್ಟವಾಗುತ್ತಿದೆ. ನೀರು ನಿಂತು ಡ್ರೈ ಆಗುವವರೆಗೂ ಏನು ಮಾಡಲು ಆಗಲ್ಲ. ಕೂಡಲೇ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ. ನೀರು ನುಗ್ಗಿರುವ ಕಡೆ ಎಚ್ಚೆತ್ತುಕೊಂಡು ಸರಿ ಮಾಡಲು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಂಡ ಮಾಡಿದ್ದು, ಮರ ಬಿದ್ದಾಗ ಕಟ್ ಮಾಡಲು ಹೇಳಿದ್ದೇನೆ. ನಾನು ಕೂಡ ಸ್ಥಳಕ್ಕೆ ಹೋಗುತ್ತೇನೆ. ದಸರಾ ಕಾರ್ಯಕ್ರಮ ಮುಗಿಸಿಕೊಂಡು ಬಂದು ಇದನೆಲ್ಲ ನೋಡುತ್ತೇವೆ ಎಂದರು.

ಬೆಂಗಳೂರು ಉಸ್ತುವಾರಿ ವಿಚಾರ ಸಿಎಂ ಬಸವರಾಜ ಬೊಮ್ಮಾಯಿ‌ ಗಮನದಲ್ಲಿದೆ. ಅವರೇ ತೀರ್ಮಾನ ಮಾಡುತ್ತಾರೆ. ಆದರೆ, ಸದ್ಯ ಮಳೆ ಅನಾಹುತದ ಬಗ್ಗೆ ನಮ್ಮ ಮೊದಲ ಆದ್ಯತೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.