ಬೆಂಗಳೂರು: ಕೊರೊನಾ ಎರಡನೇ ಅಲೆಯ ಆಘಾತದಿಂದ ಈಗಷ್ಟೇ ರಾಜ್ಯ ನಿಧಾನವಾಗಿ ಹೊರಬರುತ್ತಿದೆ. ಎರಡನೇ ಲಾಕ್ಡೌನ್ನಿಂದ ನಿಧಾನವಾಗಿ ರಾಜ್ಯದ ಆರ್ಥಿಕತೆ ಚೇತರಿಕೆಯತ್ತ ಅಂಬೆಗಾಲಿಡುತ್ತಿದೆ. ಬರಿದಾದ ಸಂಪನ್ಮೂಲದ ಮಧ್ಯೆ ರಾಜ್ಯದ ತ್ರೈಮಾಸಿಕ ಇಲಾಖಾವಾರು ಆರ್ಥಿಕ ಪ್ರಗತಿಯೂ ವೇಗ ಕಳೆದುಕೊಂಡಿದೆ.
ರಾಜ್ಯ ಕೊರೊನಾ ಎರಡನೇ ಅಲೆಗೆ ಸಂಪೂರ್ಣವಾಗಿ ನಲುಗಿ ಹೋಗಿತ್ತು. 2020 ಕೆಟ್ಟದೊಂದು ಕನಸು ಎಂದು ತಿಳಿದು ಹೊರ ಬರುತ್ತಿರುವ ಸಂದರ್ಭದಲ್ಲೇ 2021ರಲ್ಲಿ ಮೊದಲಿಗಿಂತ ಭೀಕರವಾಗಿ ಕೊರೊನಾ ಎರಡನೇ ಅಲೆ ಅಪ್ಪಳಿಸಿತು. ಎರಡನೇ ಅಲೆಯ ಅಬ್ಬರಕ್ಕೆ ರಾಜ್ಯ ಅಕ್ಷರಶಃ ಮಂಡಿಯೂರುವಂತಾಯಿತು. ಎರಡನೇ ಅಲೆಯ ಆರ್ಭಟದಿಂದ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅನಿವಾರ್ಯವಾಗಿ ಮತ್ತೆ ಲಾಕ್‌ಡೌನ್ ಹೇರಿಕೆ ಮಾಡಿತು. ಸುಮಾರು ಎರಡು ತಿಂಗಳ ಲಾಕ್‌ಡೌನ್ ನಿಂದ ಮತ್ತೆ ರಾಜ್ಯ ಸ್ತಬ್ಧವಾಯಿತು. ಆರ್ಥಿಕ ಚಟುವಟಿಕೆಗಳು ಭಾಗಶಃ ಸ್ಥಗಿತಗೊಂಡವು. ಇದರಿಂದ ಅದಾಗಲೇ ಸೊರಗಿದ್ದ ರಾಜ್ಯದ ಆರ್ಥಿಕತೆಗೆ ಮತ್ತೆ ದೊಡ್ಡ ಕೊಡಲಿ ಏಟು ಬಿದ್ದಿದೆ. ಇತ್ತ ರಾಜ್ಯದ ಬೊಕ್ಕಸ ತುಂಬುವ ತೆರಿಗೆ ಸಂಗ್ರಹವೆಲ್ಲಾವೂ ಸೊರಗಿ ಹೋಗಿವೆ. ಇದರಿಂದ ರಾಜ್ಯದ ಇಲಾಖಾವಾರು ಅಭಿವೃದ್ಧಿ ಕಾಮಗಾರಿಗಳಿಗೂ ಕೊಡಲಿ ಏಟು ಬಿದ್ದಿದೆ.
ಇಲಾಖಾವಾರು ಪ್ರಗತಿ ಕುಂಠಿತ:
ಕೊರೊನಾ ಹಾಗೂ ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿದೆ. ಲಾಕ್ಡೌನ್ನಿಂದ ಸಂಪನ್ಮೂಲ ಕ್ರೋಢೀಕರಣವೇ ದುಸ್ತರವಾಗಿದೆ. ಸೀಮಿತ ಸಂಪನ್ಮೂಲದಿಂದ ಇಲಾಖಾವಾರು ಪ್ರಗತಿ ಮೇಲೆ ಹೊಡೆತ ಬಿದ್ದಿದೆ.
2021-22 ವರ್ಷದ ಆರಂಭದಲ್ಲೇ ಕೊರೊನಾ ಅಟ್ಟಹಾಸ ಹಾಗೂ ಲಾಕ್‌ಡೌನ್ ಹೊಡೆತದಿಂದ ರಾಜ್ಯದ ಆರ್ಥಿಕತೆಗೆ ತೀವ್ರ ಆಘಾತ ನೀಡಿತು. ಏಪ್ರಿಲ್ ಕೊನೆ ವಾರದಿಂದ ಜೂನ್ 15ರ ವರೆಗೆ ಲಾಕ್‌ಡೌನ್ ಹೇರಿದ ಪರಿಣಾಮವಾಗಿ ರಾಜ್ಯದ ಬೊಕ್ಕಸಕ್ಕೆ ಎಲ್ಲಿಲ್ಲದ ಹೊಡೆತ ಬಿದ್ದಿದೆ. ಇದರಿಂದ ಇಲಾಖಾವಾರು ಆರ್ಥಿಕ ಪ್ರಗತಿ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ.
2021-22 ಸಾಲಿನ ಮೊದಲ ತ್ರೈಮಾಸಿಕದಲ್ಲಿ ಇಲಾಖಾವಾರು ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಆರ್ಥಿಕ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ರಾಜ್ಯದ ಇಲಾಖಾವಾರು ಪ್ರಗತಿ ಕೇವಲ 17%. ಲಾಕ್‌ಡೌನ್ ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸರ್ಕಾರಕ್ಕೆ ಬಜೆಟ್ ನಲ್ಲಿ ಮೀಸಲಿಟ್ಟ ಇಲಾಖಾವಾರು ಅನುದಾನ ಪ್ರತಿ ನಿರೀಕ್ಷಿತ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿದೆ.
ಇಲಾಖಾವಾರು ಆರ್ಥಿಕ ಪ್ರಗತಿ ಹೇಗಿದೆ?
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ:
ಒಟ್ಟು ಅನುದಾನ- 5728.49 ಕೋಟಿ
ವೆಚ್ಚ- 469.63 ಕೋಟಿ
ಪ್ರಗತಿ- 52.7%
ಇಲಾಖಾವಾರು ಪ್ರಗತಿ:
ಒಟ್ಟು ಅನುದಾನ- 24,273.07 ಕೋಟಿ
ವೆಚ್ಚ- 8335.29 ಕೋಟಿ
ಪ್ರಗತಿ- 34.33%
ಗೃಹ ಇಲಾಖೆ:
ಒಟ್ಟು ಅನುದಾನ- 8077.03 ಕೋಟಿ
ವೆಚ್ಚ- 1805.61 ಕೋಟಿ
ಪ್ರಗತಿ- 22.35%
ಸಾರಿಗೆ ಇಲಾಖೆ:
ಒಟ್ಟು ಅನುದಾನ- 1954.30 ಕೋಟಿ
ವೆಚ್ಚ-412.54 ಕೋಟಿ
ಪ್ರಗತಿ-21%
ಸಣ್ಣ ನೀರಾವರಿ ಇಲಾಖೆ:
ಒಟ್ಟು ಅನುದಾನ-2261.25 ಕೋಟಿ
ವೆಚ್ಚ- 495.05 ಕೋಟಿ
ಪ್ರಗತಿ- 21.89%
ಆರೋಗ್ಯ ಇಲಾಖೆ:
ಒಟ್ಟು ಅನುದಾನ-8126.98 ಕೋಟಿ
ವೆಚ್ಚ-1744.84 ಕೋಟಿ
ಪ್ರಗತಿ-21.46%
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:
ಒಟ್ಟು ಅನುದಾನ- 4506.78 ಕೋಟಿ
ವೆಚ್ಚ- 929.92 ಕೋಟಿ
ಪ್ರಗತಿ-20.6%
ವಸತಿ ಇಲಾಖೆ:
ಒಟ್ಟು ಅನುದಾನ-2982.06 ಕೋಟಿ
ವೆಚ್ಚ-513.88 ಕೋಟಿ
ಪ್ರಗತಿ-17.23%
ಕಂದಾಯ ಇಲಾಖೆ:
ಒಟ್ಟು ಅನುದಾನ- 11258.46 ಕೋಟಿ
ವೆಚ್ಚ-1719.46 ಕೋಟಿ
ಪ್ರಗತಿ-15.27%
ಇಂಧನ ಇಲಾಖೆ:
ಒಟ್ಟು ಅನುದಾನ-12655.42 ಕೋಟಿ
ವೆಚ್ಚ-2195.59 ಕೋಟಿ
ಪ್ರಗತಿ- 17.34%
ನಗರಾಭಿವೃದ್ಧಿ ಇಲಾಖೆ:
ಒಟ್ಟು ಅನುದಾನ- 14137.60 ಕೋಟಿ
ವೆಚ್ಚ-1856.05 ಕೋಟಿ
ಪ್ರಗತಿ- 13.12%
ಲೋಕೋಪಯೋಗಿ ಇಲಾಖೆ:
ಒಟ್ಟು ಅನುದಾನ- 9081.85 ಕೋಟಿ
ವೆಚ್ಚ-980.80 ಕೋಟಿ
ಪ್ರಗತಿ- 10.79%
ಬೃಹತ್ ನೀರಾವರಿ ಇಲಾಖೆ:
ಒಟ್ಟು ಅನುದಾನ- 17063.09 ಕೋಟಿ
ವೆಚ್ಚ-1407.83 ಕೋಟಿ
ಪ್ರಗತಿ- 8.25%
ಪಂಚಾಯತ್ ರಾಜ್ ಇಲಾಖೆ:
ಒಟ್ಟು ಅನುದಾನ- 15,914.82 ಕೋಟಿ
ವೆಚ್ಚ- 1690.84 ಕೋಟಿ
ಪ್ರಗತಿ- 10.6%
ಸಹಕಾರ ಇಲಾಖೆ:
ಒಟ್ಟು ಅನುದಾನ-1604.02 ಕೋಟಿ
ವೆಚ್ಚ-42.27 ಕೋಟಿ
ಪ್ರಗತಿ- 2.63%
ಕೃಷಿ ಇಲಾಖೆ:
ಒಟ್ಟು ಅನುದಾನ- 5728.49 ಕೋಟಿ
ವೆಚ್ಚ-469.63 ಕೋಟಿ
ಪ್ರಗತಿ- 8%
ತೋಟಗಾರಿಕೆ ಇಲಾಖೆ:
ಒಟ್ಟು ಅನುದಾನ- 1112.52 ಕೋಟಿ
ವೆಚ್ಚ- 134.63 ಕೋಟಿ
ಪ್ರಗತಿ- 12%
ಎಸ್ ಟಿ ಕಲ್ಯಾಣ ಇಲಾಖೆ:
ಒಟ್ಟು ಅನುದಾನ-1395.79 ಕೋಟಿ
ವೆಚ್ಚ-162.20 ಕೋಟಿ
ಪ್ರಗತಿ- 11%
ಎಸ್ ಸಿ ಕಲ್ಯಾಣ ಇಲಾಖೆ:
ಒಟ್ಟು ಅನುದಾನ- 3710.48 ಕೋಟಿ
ವೆಚ್ಚ-662.88 ಕೋಟಿ
ಪ್ರಗತಿ- 17.86