ETV Bharat / city

ಸಣ್ಣ ಕೈಗಾರಿಕೆಗಳಿಗೆ ವಿನಾಯಿತಿ ನೀಡದಿದ್ದರೆ ಭಾರೀ ಉದ್ಯೋಗ ನಷ್ಟ: ಸಿ.ಪ್ರಕಾಶ್

author img

By

Published : Jun 6, 2021, 8:44 AM IST

ಶ್ರಮಿಕ ವರ್ಗಕ್ಕೆ ಕೊರೊನಾ ಸೋಂಕು ಬಾಧಿಸದಂತೆ ಪೀಣ್ಯ ಕೈಗಾರಿಕಾ ಸಂಘ, ಎಂಐಎ ಮತ್ತು ಲೇಬರ್ ನೆಟ್ ಆಶ್ರಯದಲ್ಲಿ ಐದು ದಿನಗಳಲ್ಲಿ 6000 ಜನರಿಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.

cprakash
cprakash

ಬೆಂಗಳೂರು: ದುಡಿಯುವ ಶ್ರಮಿಕ ವರ್ಗಕ್ಕೆ ಸೋಂಕು ಬಾಧಿಸದಂತೆ ತಡೆಯುವ ಉದ್ದೇಶದಿಂದ ಪೀಣ್ಯ ಕೈಗಾರಿಕಾ ಸಂಘ, ಎಂಐಎ ಮತ್ತು ಲೇಬರ್ ನೆಟ್ ಆಶ್ರಯದಲ್ಲಿ ಐದು ದಿನಗಳಲ್ಲಿ 6000 ಜನರಿಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸಿ.ಪ್ರಕಾಶ್ ಮಾತನಾಡಿ, "ಲಾಕ್​ಡೌನ್​ನಿಂದ ಸಣ್ಣ ಕೈಗಾರಿಕೆಗಳನ್ನು ಹೊರಗಿಡಬೇಕು. ಇಲ್ಲವಾದಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಸಣ್ಣ ಕೈಗಾರಿಕೆಗಳು ಶಾಶ್ವತವಾಗಿ ನಶಿಸಿಹೋಗಲಿವೆ" ಎಂದು ಕಳವಳ ವ್ಯಕ್ತಪಡಿಸಿದರು.

"ಜೀವ ಮತ್ತು ಜೀವನ ಎರಡೂ ಮುಖ್ಯವಾಗಿದೆ. ರಫ್ತು ಚಟುವಟಿಕೆಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ಶೇ 90 ಉತ್ಪನ್ನಗಳನ್ನು ಸಣ್ಣ ಕೈಗಾರಿಕೆಗಳೇ ಉತ್ಪಾದಿಸಲಿವೆ. ಲಾಕ್​ಡೌನ್ ಇರುವುದರಿಂದ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಿರುವಾಗ ರಫ್ತು ವಲಯದಲ್ಲೂ ಕೂಡ ಯಾವುದೇ ಕೆಲಸ ಆಗುತ್ತಿಲ್ಲ. ಸರ್ಕಾರ ತಕ್ಷಣವೇ ಸಣ್ಣ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮನವಿ ನೀಡಲಾಗಿದೆ" ಎಂದರು.

"ಸೋಂಕು ಹೆಚ್ಚಾಗಿದ್ದ ಕಾರಣ ಆಮ್ಲಜನಕ ಪೂರೈಕೆಗೆ ನಾವು ಸಹಕಾರ ನೀಡಿದ್ದೆವು. ಇದೀಗ ಕೈಗಾರಿಕೆಗಳ ಪಾಲಿನ ಶೇ. 50 ರಷ್ಟು ಆಮ್ಲಜನಕ ಬಳಕೆಗೆ ಸರ್ಕಾರ ತಕ್ಷಣವೇ ಅನುಮತಿ ನೀಡಬೇಕು" ಎಂದು ಸಿ. ಪ್ರಕಾಶ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.