ETV Bharat / city

ಉತ್ತರ ಪ್ರದೇಶ, ಪಂಜಾಬ್ ಚುನಾವಣೆ ಹಿನ್ನೆಲೆ ಕೇಂದ್ರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ : ಡಿಕೆಶಿ - ಕೃಷಿ ಕಾಯ್ದೆ ರದ್ದುಗೊಳಿಸಿದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

ಈ ಹೋರಾಟದಲ್ಲಿ ಸತ್ತಿರುವ ಸುಮಾರು 700 ರೈತರನ್ನು ದೇಶದ ಹುತಾತ್ಮರು ಎಂದು ಘೋಷಿಸಿ, ಅವರಿಗೆ ಸಿಗಬೇಕಾದ ಗೌರವ, ಅವರ ಕುಟುಂಬದವರಿಗೆ ಪರಿಹಾರ, ಸೌಲಭ್ಯ ಒದಗಿಸಬೇಕು. ಆಯಾ ರಾಜ್ಯದಲ್ಲಿ ಅವರ ಕುಟುಂಬದವರಿಗೆ 5 ಎಕರೆ ಭೂಮಿ ಕೊಟ್ಟು, ಕುಟುಂಬ ಸದಸ್ಯರು ಬದುಕಲು ಅವಕಾಶ ಮಾಡಿಕೊಡಬೇಕು ಎಂದರು..

KPCC President DK Shivakumar on Repeal of farm laws
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
author img

By

Published : Nov 19, 2021, 7:35 PM IST

ನವದೆಹಲಿ/ಬೆಂಗಳೂರು : ದೇಶದ ಜನರ ಹೋರಾಟಕ್ಕೆ ಇದು ಐತಿಹಾಸಿಕ ದಿನ. ಕೃಷಿ ತಿದ್ದುಪಡಿ ಕಾಯ್ದೆಗಳ ವಾಪಸ್ ಸಂಬಂಧ ಬಿಜೆಪಿ ಮೋಸ ಮಾಡಲಿದೆ ಎಂದು ಜನರಲ್ಲಿ ಭಯವಿದೆ. ಸದ್ಯದಲ್ಲೇ ಸಂಸತ್ ಅಧಿವೇಶನ ನಡೆಯಲಿದೆ. ಅವರು ಈ ಬಗ್ಗೆ ನಿರ್ಣಯ ಮಂಡಿಸಲಿ. ಮುಖ್ಯಮಂತ್ರಿ ಇದ್ದಾಗ ಮೋದಿ ಅವರು ಏನು ಹೇಳಿದ್ದಾರೋ ಅದನ್ನು ಮಾಡಲಿ. ಅವರು ನುಡಿದಂತೆ ನಡೆಯಲಿ ಎಂದು ಜನ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ತಿಳಿಸಿದರು.

ಕೃಷಿ ಕಾಯ್ದೆಗಳನ್ನ ಕೇಂದ್ರ ವಾಪಸ್‌ ಪಡೆದ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿರುವುದು..

ಕೇಂದ್ರ ಕೃಷಿ ಕಾಯ್ದೆ ರದ್ದುಗೊಳಿಸಿರುವ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ, ಪಂಜಾಬ್ ಚುನಾವಣೆ ಸಮೀಪಿಸುತ್ತಿವೆ. ಮತದಾರರ ತೀರ್ಪು ಶಕ್ತಿ, ಅಭಿಪ್ರಾಯದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ಅದರಿಂದ ಎಚ್ಚೆತ್ತು ಕೇಂದ್ರ ಈಗ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ (Repeal of farm laws). ಅವರಿಗೆ ಈಗಲಾದರೂ ಜ್ಞಾನೋದಯವಾಗಿರುವುದಕ್ಕೆ ಧನ್ಯವಾದಗಳು ಎಂದರು.

ಈ ಹೋರಾಟ ಬಿಜೆಪಿಯದ್ದಲ್ಲ. ಹೀಗಾಗಿ, ಈ ಗೆಲುವು ಬಿಜೆಪಿಯದ್ದಲ್ಲ. ಈ ದೇಶದ ರೈತರು, ಕಾಂಗ್ರೆಸ್ ಪಕ್ಷದ ಗೆಲುವು. ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿ ಬಂದ ನಂತರ ರಾಹುಲ್ ಗಾಂಧಿ ಅವರು ರೈತರನ್ನು ಬೆಂಬಲಿಸುವಂತೆ ಕರೆ ಕೊಟ್ಟರು.

ಜತೆಗೆ ಎಷ್ಟೇ ಸಮಯವಾಗಲಿ ಸರ್ಕಾರ ಕೇಂದ್ರ ಸರ್ಕಾರ ಈ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯದೆ ಬೇರೆ ದಾರಿಯಿಲ್ಲ ಎಂದು ರಾಹುಲ್ ಗಾಂಧಿ ಅವರು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ಬಿಜೆಪಿಗೆ ವಿಧಿ ಇಲ್ಲದೆ ಈಗ ಹಿಂಪಡೆದಿದೆ ಎಂದು ಹೇಳಿದರು.

ನಾವೆಲ್ಲ ಇದೇ ನ.21ರಿಂದ (ಭಾನುವಾರ) ತುಮಕೂರಿನಿಂದ ಪಾದಯಾತ್ರೆ ಮಾಡಿ ಜನರ ಬಳಿ ಹೋಗುತ್ತೇವೆ. ನಮ್ಮ ಮಾತು, ಧ್ವನಿ, ಆಚಾರ-ವಿಚಾರವನ್ನು ಜನ ಒಪ್ಪಿದ್ದಾರೆ. ನಾವು ಜನರ ಪರವಾಗಿ ಇದ್ದೇವೆ ಎಂಬುದಕ್ಕೆ ಇದೇ ಸಾಕ್ಷಿ.

ಈ ಹೋರಾಟದಲ್ಲಿ ಸತ್ತಿರುವ ಸುಮಾರು 700 ರೈತರನ್ನು ದೇಶದ ಹುತಾತ್ಮರು ಎಂದು ಘೋಷಿಸಿ, ಅವರಿಗೆ ಸಿಗಬೇಕಾದ ಗೌರವ, ಅವರ ಕುಟುಂಬದವರಿಗೆ ಪರಿಹಾರ, ಸೌಲಭ್ಯ ಒದಗಿಸಬೇಕು. ಆಯಾ ರಾಜ್ಯದಲ್ಲಿ ಅವರ ಕುಟುಂಬದವರಿಗೆ 5 ಎಕರೆ ಭೂಮಿ ಕೊಟ್ಟು, ಕುಟುಂಬ ಸದಸ್ಯರು ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.

ಓದಿ: ಯಾವ ಕಾರಣಕ್ಕೆ ಕೃಷಿ ಕಾಯಿದೆಗಳನ್ನು ವಾಪಸ್​ ಪಡೆದಿದ್ದಾರೋ ಗೊತ್ತಿಲ್ಲ: ಸಚಿವ ಬಿ.ಸಿ.ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.