ಬೆಂಗಳೂರು : ತಮಿಳುನಾಡು ಸರ್ಕಾರವು (Tamilnadu Government) ತಮಿಳುನಾಡಿನ ಪುದುಕೋಟ್ಟಯಿ ಜಿಲ್ಲೆಯ ಕುಣತ್ತೂರುವಿನಲ್ಲಿ ನಿರ್ಮಿಸುತ್ತಿರುವ ಕಾವೇರಿ-ವಗೈ-ಗುಂಡಾರ ಜೋಡಣಾ ಕಾಲುವೆಯ (Cauvery-Vaigai-Gundar link canal) ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು (Karnataka Government) ಸರ್ವೋಚ್ಚ ನ್ಯಾಯಾಲಯದಲ್ಲಿ (Supreme Court) ದಾಖಲಿಸಿರುವ ಮೂಲದಾವೆ (Original Suit) 3/2021 ನವೆಂಬರ್ 15ರಂದು ವಿಚಾರಣೆಗೆ ಬರಲಿದೆ.
ತಮಿಳುನಾಡಿನ ಕರೂರ ಜಿಲ್ಲೆಯಲ್ಲಿ ಕಟ್ಟಲಾಗಿರುವ ಮಾಯನೂರು ಜಲಾಶಯದಿಂದ (Mayanur Dam) ಕಾವೇರಿಯ ಹೆಚ್ಚುವರಿ ನೀರನ್ನು ಗುಂಡಾರಕ್ಕೆ ಕಾಲುವೆಗಳ ಮೂಲಕ ವರ್ಗಾಯಿಸಲು ತಮಿಳುನಾಡು ಯೋಜಿಸಿದೆ. 262 ಕಿ.ಮೀ ಉದ್ದದ ಈ ಕಾಲುವೆ ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಫೆಬ್ರುವರಿ-2021ರಲ್ಲಿ ಅರ್ಜಿ ಸಲ್ಲಿಸಿತ್ತು.
ಕಾವೇರಿ ನ್ಯಾಯಾಧೀಕರಣವು (Cauvery water disputes Tribunal Modified by Honorable Supreme Court) ತಮಿಳುನಾಡಿಗೆ ಹಂಚಿಕೆ ಮಾಡಿರುವ 177.25 ಟಿಎಂಸಿ ಅಡಿ ನೀರನ್ನು ಬಿಳಿ ಗುಂಡ್ಲುವಿನ ಅಂತರ್ರಾಜ್ಯ ಮಾಪನ ಕೇಂದ್ರದಲ್ಲಿ ಸುನಿಶ್ಚಿತಗೊಳಿಸಿದ ಮೇಲೆ ಒಂದು ಸರಾಸರಿ ವರ್ಷದಲ್ಲಿ ಬಾಕಿ ಉಳಿದ ನೀರು ಕರ್ನಾಟಕಕ್ಕೆ ಸೇರಿದ್ದಾಗಿರುತ್ತದೆ.
ಅದರಲ್ಲಿ ಕರ್ನಾಟಕದ ಪಾಲಿನ 284.75 ಟಿಎಂಸಿ ಅಡಿ ನೀರು ಮತ್ತು ಕಾವೇರಿಯಲ್ಲಿ (Cauvery water disputes) ಲಭ್ಯವಾಗಬಹುದಾದ 45 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ ಸೇರಿದೆಯೆಂಬುದು ಸರ್ವಸಮ್ಮತ ನಿಲುವಾಗಿದೆಂದು ಕರ್ನಾಟಕವು ವಾದಿಸುತ್ತಿದೆ. ಕರ್ನಾಟಕವು ಮೇಕೆದಾಟು ( Mekedatu) ಬಳಿ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯವನ್ನು ತಮಿಳನಾಡು ವಿರೋಧಿಸುತ್ತಿದೆ.
ಓದಿ: ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ: 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ