ಬೆಂಗಳೂರು: ರಾಜ್ಯದಲ್ಲಿಂದು 10,801 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 126 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,47,209 ಕ್ಕೇರಿದೆ. ಪಾಸಿಟಿವ್ ದರ 1.16%ರಷ್ಟಿದೆ.
99 ಸೋಂಕಿತರು ಗುಣಮುಖರಾಗಿದ್ದು ಈತನಕ 39,05,397 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಎಲ್ಲೂ ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಈ ತನಕ 40,057 ಮೃತ ಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 1713 ರಷ್ಟಿದೆ.
ವಿಮಾನ ನಿಲ್ದಾಣದಿಂದ 2413 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 114 ಮಂದಿಗೆ ಸೋಂಕು ತಗುಲಿದ್ದು 17,83,195 ಕ್ಕೆ ಏರಿಕೆ ಆಗಿದೆ. 92 ಮಂದಿ ಡಿಸ್ಚಾರ್ಜ್ ಆಗಿದ್ದು ಈತನಕ 17,64,584 ಏರಿಕೆ ಕಂಡಿದೆ. ನಗರದಲ್ಲಿ ಯಾವುದೇ ಸಾವು ವರದಿಯಾಗಿಲ್ಲ. ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,648 ರಷ್ಟಿದೆ.
ರೂಪಾಂತರಿ ವೈರಸ್ಗಳಾದ ಅಲ್ಪಾ- 156, ಬೇಟಾ-08, ಡೆಲ್ಟಾ ಸಬ್ ಲೈನ್ ಏಜ್- 4623, ಇತರೆ- 331, ಒಮಿಕ್ರಾನ್- 5422 BAI.1.529- 1005, BA1- 100, BA2- 4317 ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಅನಾವಶ್ಯಕ ಕೋವಿಡ್ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ