ETV Bharat / city

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಲವರ್ಧನೆಗೆ ಅಗತ್ಯ ಕ್ರಮ: ಸಚಿವ ಲಿಂಬಾವಳಿ - ಕರ್ನಾಟಕ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿ ಅಧಿಕಾರಿಗಳ ಜೊತೆ ಸಚಿವ ಅರವಿಂದ ಲಿಂಬಾವಳಿ ನಿನ್ನೆ ಸಭೆ ನಡೆಸಿ 2021-22ನೇ ಸಾಲಿನ ಕ್ರಿಯಾ ಯೋಜನೆ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾರೆ.

Kannada and culture department minister Arvind Limbavali meeting with officers
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಲವರ್ಧನೆಗೆ ಅಗತ್ಯ ಕ್ರಮ: ಸಚಿವ ಅರವಿಂದ ಲಿಂಬಾವಳಿ
author img

By

Published : Apr 21, 2021, 7:10 AM IST

ಬೆಂಗಳೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿ ಎರಡನ್ನೂ ಸಮತೋಲನದಿಂದ ಕಾಯ್ದುಕೊಳ್ಳುವ ಬಹುದೊಡ್ಡ ಜವಾಬ್ದಾರಿ ಇಲಾಖೆಯ ಮೇಲಿದೆ. ಅಭಿವೃದ್ಧಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ವಿಭಾಗ ಮತ್ತು ಸಂಸ್ಕೃತಿ ಆಚರಣೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗವನ್ನು ಸೃಜನೆ ಮಾಡಿ ಸಮತೋಲನದಿಂದ ಬೆಳೆಸಬೇಕಿದೆ ಎಂದಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಕೋವಿಡ್ ಕಾರಣದಿಂದ ಹಲವು ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಾಗದ ಕಾರಣ ಹಣವನ್ನು ಇಲಾಖೆಯಲ್ಲಿ ಆಸ್ತಿ ಸೃಜನೆ ಕೆಲಸಗಳಿಗೆ ಬಳಸಿಕೊಳ್ಳಬಹುದು.

ಅಪೂರ್ಣ ರಂಗಮಂದಿರಗಳ ನಿರ್ಮಾಣ, ಹೊಸ ರಂಗಮಂದಿರಗಳ ಕಾಮಗಾರಿ ಆರಂಭ, ಕಲಾಗ್ರಾಮ ಅಭಿವೃದ್ಧಿ ಕಾಮಗಾರಿಗಳ ವೇಗವರ್ಧನೆ ಮುಂತಾದವುಗಳಿಗೆ ಒತ್ತು ನೀಡಬೇಕು. ಕಟ್ಟಡ ಇಲ್ಲದ ರಂಗಾಯಣಗಳಿಗೆ ರಂಗಮಂದಿರಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿರಿಜನ ಉಪಯೋಜನೆ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಅದಕ್ಕೆ ಕ್ರಮಕೈಗೊಳ್ಳಿ ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವೃತ್ತಿ ನಾಟಕ ಕಂಪನಿಗಳಲ್ಲಿ ಪೌರಾಣಿಕ ನಾಟಕಗಳನ್ನು ಹೆಚ್ಚಾಗಿ ಪ್ರದರ್ಶಿಸಲು ಕಂಪನಿ ಮಾಲೀಕರುಗಳಿಗೆ ಸೂಚಿಸಬೇಕು. ಇಲಾಖೆಯಿಂದ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಲುವಾಗಿ ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಗುರುತಿಸಿ ಅವುಗಳನ್ನು ನಾಟಕಗಳನ್ನಾಗಿ ಬರೆಸಿ ಪ್ರದರ್ಶಿಸಲು ಸಚಿವ ಅರವಿಂದ ಲಿಂಬಾವಳಿ ಇದೇ ವೇಳೆ ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎಸ್.ರಂಗಪ್ಪ, ಸರ್ಕಾರದ ಉಪ ಕಾರ್ಯದರ್ಶಿ ಮಾಲತಿ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.