ETV Bharat / city

ಶ್ರೀರಾಮುಲುಗಿಂತ ನಾನು ಹಿರಿಯ, ಪಕ್ಷಕ್ಕಾಗಿ ಸಚಿವ ಸ್ಥಾನ ತ್ಯಾಗ ಮಾಡಿದ್ದೇನೆ: ಯತ್ನಾಳ್

ಶ್ರೀರಾಮುಲುಗಿಂತ ಪಕ್ಷದಲ್ಲಿ ನಾನು ಹಿರಿಯ. ಮೊದಲ ಕಂತಿನಲ್ಲೇ ನಾನು ಮಂತ್ರಿಯಾಗಬೇಕಿತ್ತು. ಆದ್ರೆ ಪಕ್ಷಕ್ಕಾಗಿ ನಾನು ತ್ಯಾಗ ಮಾಡಿದ್ದೇನೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

author img

By

Published : Dec 14, 2019, 5:23 PM IST

basanagowdha yatnal
basanagowdha yatnal

ಬೆಂಗಳೂರು: ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್ ಭೇಟಿ ಮಾಡಿ ಕ್ಷೇಮ ವಿಚಾರಿಸಿದರು.

ಬೆಂಗಳೂರಿನಲ್ಲಿ ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್ ಪ್ರತಿಕ್ರಿಯೆ

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್​, ಸಿದ್ದರಾಮಯ್ಯ ಆರೋಗ್ಯ ಸುಧಾರಿಸಿದೆ, ಚೇತರಿಸಿಕೊಳ್ಳುತ್ತಿದ್ದಾರೆ. ಚೆನ್ನಾಗಿ ಮಾತನಾಡಿದರು. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿದ್ದಾರೆ. ಮೊದಲಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.

ಬಳಿಕ ಪಕ್ಷದಲ್ಲಿ ಅಸಮಾಧಾನದ ಬಗ್ಗೆ ಮಾತನಾಡಿದ ಯತ್ನಾಳ್​, ಸಚಿವ ಶ್ರೀರಾಮುಲು ಅವರಿಗೆ ಅಸಮಾಧಾನವಾಗಿದೆ. ಅವರು ನಮ್ಮ ಪಕ್ಷದ ಪ್ರಮುಖ ನಾಯಕರು. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದಿದೆ. ಶ್ರೀರಾಮುಲು ಅವರಿಗೆ ಸರ್ಕಾರದಲ್ಲಿ ಸಮಸ್ಯೆ ಇರೋದು ನಿಜ. ಆ ಸಮಸ್ಯೆಯನ್ನ ಸಿಎಂ ಬಗೆಹರಿಸಲಿದ್ದಾರೆ ಎಂದು ಹೇಳಿದರು.

17 ಜನ ನಮಗಾಗಿ ರಾಜೀನಾಮೆ ಕೊಟ್ಟು ಬಂದಿದ್ದಾರೆ. ನಮಗೆ ಅವರು ಮೊದಲ ಆದ್ಯತೆ. ಇನ್ನು ಮೂರುವರೆ ವರ್ಷ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಇರುತ್ತಾರೆ. ಮೂಲ ಬಿಜೆಪಿಗರ ಅಸಮಾಧಾನ ಅಂತ ಏನು ಇಲ್ಲ ಎಂದರು.

Intro:video

Body:news sending by wrap

Conclusion:video
ETV Bharat Logo

Copyright © 2024 Ushodaya Enterprises Pvt. Ltd., All Rights Reserved.