ETV Bharat / city

'ಸಂಚಾರಿ ವಿಜಯ್ ಉಸಿರಾಡುತ್ತಿದ್ದಾರೆ' - ಹೆಲ್ತ್‌ ಬುಲೆಟಿನ್‌ ಬಿಡುಗಡೆ

ಸಂಚಾರಿ ವಿಜಯ್‌ ಅವರ ಬ್ರೈನ್ ಡೆಡ್ ಸ್ಟೇಜ್​ನಿಂದ ಹೊರಬರೋದು ಕಷ್ಟವಿದೆ. ಆದರೆ ಅವರ ಅಂಗಾಂಗಳ ಕೆಲಸ ಸರಿಯಾಗಿ ನಡೆಯುತ್ತಿದೆ ಎಂದು ವಿಜಯ್‌ಗೆ ಚಿಕಿತ್ಸೆ ನೀಡುತ್ತಿರುವ ಅಪೋಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯಕ್ ಹೇಳಿದ್ದಾರೆ.

Health Bulletin released about sanchari Vijay
'ಸಂಚಾರಿ ವಿಜಯ್ ಉಸಿರಾಡುತ್ತಿದ್ದಾರೆ' - ಹೆಲ್ತ್‌ ಬುಲೆಟಿನ್‌ ಬಿಡುಗಡೆ
author img

By

Published : Jun 14, 2021, 3:00 PM IST

Updated : Jun 14, 2021, 3:08 PM IST

ರಾಷ್ಟ್ರ ಪ್ರಶಸ್ತಿ ವಿಜೇತ ಸ್ಯಾಂಡಲ್​ವುಡ್​ ನಟ ಸಂಚಾರಿ ವಿಜಯ್ ಆರೋಗ್ಯದ ಸ್ಥಿತಿ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ‌. ನಿನ್ನೆಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್ ಸ್ಥಿತಿ ಗಂಭೀರವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಅರುಣ್ ನಾಯಕ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಇಂದು ಮಾಹಿತಿ ನೀಡಿರುವ ಅವರು, ಮೆದುಳಿನ ಕೆಲಸಗಳು ನಿಂತು ಹೋಗಿವೆ. ಇದನ್ನು ಬ್ರೇನ್​ ಫೇಲ್ಯೂರ್​ ಎಂದು ಹೇಳುತ್ತೇವೆ. ಆದರೆ ಅವರ ದೈಹಿಕ ಕೆಲಸಗಳು ಸರಿಯಾಗಿ ನಡೆಯುತ್ತಿವೆ. ಇದು ಮುಂದುವರಿದರೆ ಚೇತರಿಕೆ ಸಾಧ್ಯತೆ ಕಡಿಮೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ವೆಂಟಿಲೇಟರ್​ ಮೇಲೆ ವಿಜಯ್​ ಇದ್ದಾರೆ. ನಾವು ಏನೇ ಚಿಕಿತ್ಸೆ ಕೊಟ್ಟರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಅವರ ಮೆದುಳು ನಿಷ್ಕ್ರಿಯವಾಗುತ್ತಿದೆ. ಮೆದುಳು ನಿಷ್ಕ್ರಿಯ ಹಂತದಲ್ಲಿ ಬಿಪಿ ಕಂಟ್ರೋಲ್ ಇರಲ್ಲ. ಅವರ ತಲೆಬುರುಡೆ ಸಹ ಡ್ಯಾಮೇಜ್ ಆಗಿದೆ ಅಂತಾ ವೈದ್ಯರು ತಿಳಿಸಿದರು.

Health Bulletin released about sanchari Vijay
'ಸಂಚಾರಿ ವಿಜಯ್ ಉಸಿರಾಡುತ್ತಿದ್ದಾರೆ' - ಹೆಲ್ತ್‌ ಬುಲೆಟಿನ್‌ ಬಿಡುಗಡೆ

ವಿಜಯ್ ಸೋದರ ಸಿದ್ದೇಶ್ ಮಾತನಾಡಿ, ಬ್ರೈನ್ ಡೆಡ್ ಸ್ಟೇಜ್​ನಿಂದ ಹೊರಬರೋದು ಕಷ್ಟವಿದೆ. ಸಮಾಜದ ಒಳಿತಿಗಾಗಿ ಸಂಚಾರಿ ವಿಜಯ್ ದುಡಿಯುತ್ತಿದ್ದರು. ಆದ್ದರಿಂದ ಅವರ ಅಂಗಾಂಗಗಳನ್ನ ದಾನ ಮಾಡಲು ನಿರ್ಧರಿಸಿದ್ದೇವೆ. ನಾರ್ಮಲ್ ಡೆತ್ ಆದರೆ ಅಂಗಾಂಗ ದಾನ ಮಾಡಕ್ಕಾಗಲ್ಲ. ಇದರಿಂದ ನಾಲ್ಕು ಜನರಿಗೆ ಸಹಾಯವಾಗಲಿ ಅಂತ ಬಯಸುತ್ತೇವೆ ಅಂತಾ ಹೇಳಿದರು. ಆದರೆ ಚಿತ್ರರಂಗದ ಕೆಲ ನಾಯಕ, ನಾಯಕಿರು, ನಿರ್ಮಾಪಕರು, ನಿರ್ದೇಶಕರು ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.

ಅಪೋಲೋ ಆಸ್ಪತ್ರೆಯ ವೈದ್ಯರು, ಸಂಚಾರಿ ವಿಜಯ್ ಇನ್ನೂ ಉಸಿರಾಡುತ್ತಿದ್ದಾರೆ, ವಿಜಯ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಅಂತಾ ಡಾ. ಶೈಲೇಶ್ ಮಾಹಿತಿ ನೀಡಿದ್ದಾರೆ. ಆದರೆ ಸಂಚಾರಿ ವಿಜಯ್ ನಿಧನರಾಗಿದ್ದಾರೆ ಎಂಬುದನ್ನ ಅಧಿಕೃತವಾಗಿ ಆಸ್ಪತ್ರೆಯ ವೈದ್ಯರು ತಿಳಿಸಿಲ್ಲ.

ಅಪಘಾತ ನಡೆದಾಗ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿದೆ. ಆದರೆ ಅವರು ಚಿಕಿತ್ಸೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಮೆದುಳಿನ ಬಲಭಾಗದಲ್ಲಿ ಹೆಚ್ಚು ಹೊಡೆತ ಬಿದ್ದು ತೀವ್ರ ರಕ್ತಸ್ರಾವ ಆಗಿತ್ತು. ನಿನ್ನೆ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಸರ್ಜರಿ ಮಾಡಲಾಗಿತ್ತು. ಅದಾಗಿ 36 ಗಂಟೆ ಕಳೆದರೂ ಅವರ ಬ್ರೇನ್​ ಪ್ರತಿಕ್ರಿಯಿಸುತ್ತಿಲ್ಲ. ಎಷ್ಟೇ ಚಿಕಿತ್ಸೆ ನೀಡಿದರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ತಿಳಿದುಬಂದಿದೆ.

Last Updated : Jun 14, 2021, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.