ETV Bharat / city

ಮಹದಾಯಿ ಯೋಜನೆಗೆ ತಡೆ ಕುರಿತ ಚರ್ಚೆಗೆ ಸರ್ವಪಕ್ಷ ಸಭೆ ಕರೆಯಿರಿ: ಹೆಚ್.​ಕೆ.ಪಾಟೀಲ್​​ - h k patil writes letter to cm regarding mahadayi project

ಮಹದಾಯಿ ನಾಲಾ ಯೋಜನೆ ಸಂಬಂಧ ಸರ್ವಪಕ್ಷ ಸಭೆ ಕರೆಯಬೇಕೆಂದು ಮಾಜಿ ಸಚಿವ ಹೆಚ್.​ಕೆ.ಪಾಟೀಲ್ ಸಿಎಂಗೆ ಪತ್ರ ಹಾಗೂ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ಪತ್ರದಲ್ಲಿ ಕಾನೂನಾತ್ಮಕ ಹೋರಾಟ ಹಾಗೂ ಪ್ರಧಾನಿ ಮಧ್ಯಪ್ರವೇಶದ ಕುರಿತು ಉಲ್ಲೇಖಿಸಿದ್ದಾರೆ.

h k patil
h k patil
author img

By

Published : Dec 19, 2019, 3:05 PM IST

ಬೆಂಗಳೂರು: ಮಹದಾಯಿ ನಾಲಾ ಯೋಜನೆಗೆ ತಡೆ ವಿಚಾರ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮಾಜಿ ಸಚಿವ ಹೆಚ್.​ಕೆ.ಪಾಟೀಲ್ ಪತ್ರದ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಒತ್ತಾಯಿಸಿದ್ದಾರೆ. ಮಹದಾಯಿ ನಾಲಾ ಯೋಜನೆ ಸಂಬಂಧ ಸಿಎಂಗೆ ಪತ್ರ ಹಾಗೂ ಟ್ವೀಟ್ ಮೂಲಕ ಒತ್ತಾಯಿಸಿರುವ ಅವರು, ಕಳಸಾ ಬಂಡೂರಿಗೆ ಕೇಂದ್ರವೇ ಅನುಮತಿ ನೀಡಿತ್ತು. ಈಗ ಕೇಂದ್ರ ಪರಿಸರ ಇಲಾಖೆಯೇ ಅನುಮತಿಗೆ ತಡೆ ನೀಡಿದೆ. ಈ ಆದೇಶ ಕರ್ನಾಟಕಕ್ಕೆ ಆಘಾತ ತಂದಿದೆ. ರಾಜ್ಯದ ಕೇಂದ್ರ ಸಚಿವರೇ ಎಲ್ಲಿದ್ದೀರಾ? ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಿ. ಮುಖ್ಯಮಂತ್ರಿಯವರೇ ಗಂಭೀರವಾದ ಹೆಜ್ಜೆಯಿಡಿ ಎಂದು ಟ್ವಿಟರ್​​ನಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಒತ್ತಾಯ ಮಾಡಿದ್ದಾರೆ.

ಇನ್ನು ಸಿಎಂಗೆ ಬರೆದಿರುವ ಪತ್ರದಲ್ಲಿ, ಕೇಂದ್ರ ಪರಿಸರ ಇಲಾಖೆ ತಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದೇನೆ. ಮಹದಾಯಿ ಜಲ ವಿವಾದ ನ್ಯಾಯಾಧಿಕರಣ ತನ್ನ ಐತೀರ್ಪಿನ ವರದಿಯನ್ನು ಸಲ್ಲಿಸಿ ಒಂದು ವರ್ಷ ಮೂರು ತಿಂಗಳು ಕಳೆದಿದೆ. ಕಳಸ ಮತ್ತು ಬಂಡೂರಿ ನಾಲಾ ಯೋಜನೆಗಳು, ಮಹಾದಾಯಿ ನದಿ ತಿರುವು ಅತ್ಯಂತ ಪ್ರಮುಖ ಯೋಜನೆಗಳು. ಕರ್ನಾಟಕದ ಪ್ರದೇಶದಲ್ಲಿ ಹರಿಯುವ ಮತ್ತು ಮಹದಾಯಿ ಕಣಿವೆಗೆ ಜಲ ಸಂಪನ್ಮೂಲದ ಕೊಡುಗೆ ನೀಡುವ ಈ ಎರಡೂ ನಾಲಾ ಯೋಜನೆಗಳ ಮೂಲಕ ಕರ್ನಾಟಕದ ಹಕ್ಕು ನೀರನ್ನು ಪಡೆಯಲು ಎರಡು ದಶಕಗಳ ಸುದೀರ್ಘ ಹೋರಾಟದ ನಂತರ ತೀವ್ರ ಅನ್ಯಾಯಕ್ಕೊಳಗಾಗಿ ಅಲ್ಪ ಪ್ರಮಾಣದ ಹಂಚಿಕೆ ನ್ಯಾಯಾಧಿಕರಣದ ಮೂಲಕ ಆಗಿದೆ. ಈ ರೀತಿ ಹಂಚಿಕೆಯಾಗಿ ತನ್ನ ಪಾಲಿನ ನೀರನ್ನು ಪಡೆದಿರುವ ನಮ್ಮ ರಾಜ್ಯ ತ್ವರಿತಗತಿಯಲ್ಲಿ ಯೋಜನೆಗೆ ಚಾಲನೆ ನೀಡಿ ಜಲ ಸಂಪನ್ಮೂಲ ಸದ್ಬಳಕೆಗೆ ಅಣಿಯಾಗಬೇಕಿದೆ ಎಂದಿದ್ದಾರೆ.

h k patil
ಹೆಚ್.ಕೆ.ಪಾಟೀಲ್ ಪತ್ರ

ಸರ್ವಪಕ್ಷ ಸಭೆ ಕರೆಯಿರಿ:

ಇಂಥ ಗಂಭೀರ ಅನ್ಯಾಯವಾದಾಗಲೆಲ್ಲ ಎಲ್ಲ ಪಕ್ಷಗಳೂ ಸೇರಿ ಸಮಾಲೋಚಿಸಿ ರಾಜ್ಯದ ಒಗ್ಗಟ್ಟಿನ ನಿಲುವು ಕೈಗೊಳ್ಳುವುದು ನಮ್ಮ ರಾಜ್ಯದ ಹಿತ ಕಾಪಾಡಲು ಮಾಡುವ ಸತ್ ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣ ಸರ್ವಪಕ್ಷ ಸಭೆ ಕರೆಯಲು ಮತ್ತು ನಮ್ಮ ರಾಜ್ಯದ ಪ್ರತಿಭಟನೆ ಸ್ವರೂಪ ಕುರಿತು ನಿಲುವು ಕೈಗೊಳ್ಳಲು ಹಾಗೂ ನ್ಯಾಯ ಪಡೆಯಲು ಕ್ರಮವಹಿಸಲು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಕಾನೂನಾತ್ಮಕ ಹೋರಾಟ ಮುಂದುವರೆಯಲಿ:

ನಮ್ಮ ಕಾನೂನಾತ್ಮಕ ಹೋರಾಟ ಮುಂದುವರೆಯಬೇಕಿದೆ. ಆದರೆ ಈ ನೀರಿನ ಸದ್ಬಳಕೆ ಅತ್ಯಂತ ಮಹತ್ವವಾಗಿದ್ದು, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಮಂಜೂರಾತಿ ತಡೆ ಹಿಡಿಯುವ ಆದೇಶ ಕರ್ನಾಟಕಕ್ಕೆ ಬಹು ದೊಡ್ಡ ಆಘಾತವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ರೈತರ ಮತ್ತು ನಾಗರಿಕರ ಕಲ್ಯಾಣದ ಹಿತದೃಷ್ಟಿಯಿಂದ ಗಮನಹರಿಸಬೇಕಾದದ್ದು ಬಹಳ ಮಹತ್ವದ ಅಗತ್ಯತೆಯಾಗಿದೆ ಎಂದಿದ್ದಾರೆ.

ಕಳಸ ಮತ್ತು ಬಂಡೂರಿ ನಾಲಾ ತಿರುವು ಯೋಜನೆಯು 1999ರಲ್ಲಿ ಬೀಜಾಂಕುರಗೊಂಡು ಚಾಲನೆಗೆ ಬಂದಿದೆ. 7.56 ಟಿಎಂಸಿ ನೀರನ್ನು ಮಲಪ್ರಭಾ ಕಣಿವೆ ವರ್ಗಾಯಿಸುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆ 2003ರ ಆ. 28ರಂದು ನಡೆದ ತನ್ನ ಅರಣ್ಯ ಸಲಹಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಆದರೆ ಈ ಸಭೆಯ ನಿರ್ಣಯ ಕರ್ನಾಟಕಕ್ಕೆ ಅಧಿಕೃತವಾಗಿ ತಿಳಿಯಲಿಲ್ಲ. ಸಭೆಯ ನಿರ್ಣಯವನ್ನು ಅನುಷ್ಠಾನಗೊಳಿಸುವ ಕುರಿತು ಅಂದಿನ ಕೇಂದ್ರ ಅರಣ್ಯ ಸಚಿವರು ಇದರ ಅನುಷ್ಠಾನ ತಡೆದು ಕಡತಗಳನ್ನು ಗುಪ್ತವಾಗಿರಿಸುವ ಪ್ರಯತ್ನ ಮಾಡಲಾಯಿತು. ಆರ್.ಟಿ.ಐ ಮೂಲಕ ಕಡತದ ಬಹುತೇಕ ವಿವರಗಳನ್ನು ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಆಸಕ್ತಿಯುಳ್ಳ ನಾಗರಿಕ ಲಕ್ಷ್ಮೀಕಾಂತ ಜೋಶಿ ಪಡೆದಿದ್ದಾರೆ. ಈಗ ನ್ಯಾಯಾಧಿಕರಣದ ಐತೀರ್ಪಿನಿಂದಾಗಿ ಅಂತಾರಾಜ್ಯ ಜಲ ವಿವಾದ ನಿರ್ಣಯವಾಗಿದೆ.

h k patil
ಹೆಚ್.​ಕೆ.ಪಾಟೀಲ್ ಟ್ವೀಟ್

ಪ್ರಧಾನಿ ಪ್ರವೇಶಕ್ಕೆ ಒತ್ತಾಯಿಸುವುದು ಅಗತ್ಯ:
ಕಳಸಾ ಬಂಡೂರಿ ಯೋಜನೆ ಕುರಿತು ಕೇಂದ್ರ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡುವುದು ಮತ್ತು ಪ್ರಧಾನಮಂತ್ರಿಯವರ ಮಧ್ಯಪ್ರವೇಶಕ್ಕೆ ಇನ್ನೊಮ್ಮೆ ಅನಿವಾರ್ಯವಾಗಿ ಒತ್ತಾಯಿಸುವುದು ಅಗತ್ಯ. ಮಲಪ್ರಭಾ ಕಣಿವೆ ಕೊರತೆ ಕಣಿವೆಯಾಗಿದ್ದು, ಮಹಾದಾಯಿ ಕಣಿವೆ 200 ಟಿಎಂಸಿಯಷ್ಟು ಜಲಸಂಪನ್ಮೂಲ ಲಭ್ಯತೆಯೊಂದಿಗೆ ಹೆಚ್ಚುವರಿ ನೀರು ಕಣಿವೆಯಾಗಿದೆ ಎಂಬುದು ಸಾಬೀತಾದ ಅಂಶ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಅನುಮತಿ ನೀಡುವಲ್ಲಿ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳಂತೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮೋದನೆಯನ್ನು ನೀಡಲಾಗಿತ್ತು ಎಂದಿದ್ದಾರೆ.

ಅಂತರ್ ಕಣಿವೆ ವರ್ಗಾವಣೆಗಳಿಗೆ ರಾಷ್ಟ್ರೀಯ ಜಲ ನೀತಿಯ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಸತ್ತು ಅಂಗೀಕರಿಸಿರುವ ರಾಷ್ಟ್ರೀಯ ಜಲ ನೀತಿ ಅಡಿಯಲ್ಲಿ ಕಳಸಾ ಬಂಡೂರಿ ಯೋಜನೆಗೆ ಅಗತ್ಯದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮೋದನೆ ನೀಡಲು ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಆದರೆ ಈಗ ರಾಷ್ಟ್ರೀಯ ಜಲ ನೀತಿ ಮತ್ತು ಅದರ ಮಾರ್ಗಸೂಚಿಗಳನ್ನು ಈಗಾಗಲೇ ನ್ಯಾಯಾಧಿಕರಣ ನೀಡಿರುವ ಐತೀರ್ಪಿನ ಸ್ಪಷ್ಟೀಕರಣ ಕೋರಿ ನ್ಯಾಯಾಧಿಕರಣದ ಮುಂದೆಯೇ ಸಲ್ಲಿಸಲಾದ ಅರ್ಜಿಗಳನ್ನು ನೆಪ ಮಾಡಿಕೊಂಡು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಗೋವಾ ರಾಜಕೀಯ ಉದ್ದೇಶಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ತನ್ನ ಆದೇಶವನ್ನು ತಡೆ ಹಿಡಿದಿರುವುದು ನ್ಯಾಯಾಧಿಕರಣದ ಐತೀರ್ಪಿಗೆ ತೋರಿರುವ ಅಗೌರವ ಹಾಗೂ ಕರ್ನಾಟಕಕ್ಕೆ ಮಹಾ ಅನ್ಯಾಯ ಎಂದಿದ್ದಾರೆ.

Intro:newsBody:ಮಹದಾಯಿ ನಾಲಾ ಯೋಜನೆಗೆ ಕೇಂದ್ರದ ತಡೆ ಕುರಿತ ಚರ್ಚೆಗೆ ಸರ್ವಪಕ್ಷ ಸಭೆ ಕರೆಯಿರಿ: ಎಚ್ಟಿಪಿ

ಬೆಂಗಳೂರು: ಮಹದಾಯಿ ನಾಲಾ ಯೋಜನೆಗೆ ಕೇಂದ್ರದ ತಡೆ ವಿಚಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮಾಜಿ ಸಚಿವ ಎಚ್ಕೆ ಪಾಟೀಲ್ ಪತ್ರದ ಮೂಲಕ ಬಿಎಸ್ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದಾರೆ.
ಮಹದಾಯಿ ನಾಲಾ ಯೋಜನೆ ಸಂಬಂಧ ಸಿಎಂಗೆ ಪತ್ರದ ಮೂಲಕ ಹಾಗೂ ಟ್ವೀಟ್ ಮೂಲಕ ಒತ್ತಾಯಿಸಿರುವ ಅವರು, ಕಳಸಾ ಬಂಡೂರಿಗೆ ಕೇಂದ್ರವೇ ಅನುಮತಿ ನೀಡಿತ್ತು. ಈಗ ಕೇಂದ್ರ ಪರಿಸರ ಇಲಾಖೆಯೇ ಅನುಮತಿ ತಡೆ ನೀಡಿದೆ. ಈ ಆದೇಶ ಕರ್ನಾಟಕಕ್ಕೆ ಆಘಾತ ತಂದಿದೆ. ರಾಜ್ಯದ ಕೇಂದ್ರ ಸಚಿವರೇ ಎಲ್ಲಿದ್ದೀರ? ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಿ. ಮುಖ್ಯಮಂತ್ರಿಯವರೇ ಗಂಭೀರವಾದ ಹೆಜ್ಜೆಯಿಡಿ ಎಂದು ಟ್ವಿಟರ್ ನಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಒತ್ತಾಯ ಮಾಡಿದ್ದಾರೆ.
ಇನ್ನು ಸಿಎಂಗೆ ಬರೆದಿರುವ ಪತ್ರದಲ್ಲಿ, ಕೇಂದ್ರ ಪರಿಸರ ಇಲಾಖೆ ತಡೆಗೆ ತೀರ್ವ ವಿರೋಧ ವ್ಯಕ್ತಪಡಿಸುತ್ತಿದ್ದೇನೆ. ಮಹದಾಯಿ ಜಲ ವಿವಾದ ನ್ಯಾಯಾಧೀಕರಣ ತನ್ನ ಐತೀರ್ಪಿನ ವರದಿಯನ್ನು ಸಲ್ಲಿಸಿ ಒಂದು ವರ್ಷ ಮೂರು ತಿಂಗಳು ಕಳೆದಿದೆ. ಕಳಸ ಮತ್ತು ಬಂಡೂರಿ ನಾಲಾ ಯೋಜನೆಗಳು ಮಹಾದಾಯಿ ನದಿ ತಿರುವು ಅತ್ಯಂತ ಪ್ರಮುಖ ಯೋಜನೆಗಳು, ಕರ್ನಾಟಕದ ಪ್ರದೇಶದಲ್ಲಿ
ಹರಿಯುವ ಮತ್ತು ಮಹದಾಯಿ ಕಣಿವೆಗೆ ಜಲಸಂಪನ್ಮೂಲದ ಕೊಡುಗೆ ನೀಡುವ ಈ ಎರಡೂ
ನಾಲಾ ಯೋಜನೆ ಗಳ ಮೂಲಕ ಕರ್ನಾಟಕದ ಹಕ್ಕು ನೀರನ್ನು ಪಡೆಯಲು ಎರಡು ದಶಕಗಳ
ಸುದೀರ್ಘ ಹೋರಾಟದ ನಂತರ ತೀವ್ರ ಅನ್ಯಾಯಕ್ಕೊಳಗಾಗಿ ಅಲ್ಪ ಪ್ರಮಾಣದ ಹಂಚಿಕೆ
ನ್ಯಾಯಾಧೀಕರಣದ ಮೂಲಕ ಆಗಿದೆ. ಈ ರೀತಿ ಹಂಚಿಕೆ ಯಾಗಿ ತನ್ನ ಪಾಲಿನ ನೀರನ್ನು ಪಡೆದಿರುವ ನಮ್ಮ ರಾಜ್ಯ ತ್ವರಿತ ಗತಿಯಲ್ಲಿ ಯೋಜನೆಗೆ ಚಾಲನೆ ನೀಡಿ ಜಲಸಂಪನ್ಮೂಲ ಸದ್ಬಳಕೆಗೆ ಅಣಿಯಾಗಬೇಕಿದೆ ಎಂದಿದ್ದಾರೆ.
ಸರ್ವಪಕ್ಷ ಸಭೆ ಕರೆಯಿರಿ
ಇಂಥ ಗಂಭೀರ ಅನ್ಯಾಯವಾದಾಗಲೆಲ್ಲ ಎಲ್ಲ ಪಕ್ಷಗಳೂ ಸೇರಿ ಸಮಾಲೋಚಿಸಿ ರಾಜ್ಯದ ಒಗ್ಗಟ್ಟಿನ ನಿಲುವು ಕೈಗೊಳ್ಳುವುದು ನಮ್ಮ ರಾಜ್ಯದ ಹಿತ ಕಾಪಾಡಲು ಮಾಡುವ ಸತ್ ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣ ಸರ್ವಪಕ್ಷ ಸಭೆ
ಕರೆಯಲು ಮತ್ತು ನಮ್ಮ ರಾಜ್ಯದ ಪ್ರತಿಭಟನೆ ಸ್ವರೂಪ ಕುರಿತು ನಿಲುವು ಕೈಗೊಳ್ಳಲು ಹಾಗೂ ನ್ಯಾಯ ಪಡೆಯಲು ಕ್ರಮವಹಿಸಲು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕಾನೂನಾತ್ಮಕ ಹೋರಾಟ ಮುಂದುವರೆಯಲಿ
ನಮ್ಮ ಕಾನೂನಾತ್ಮಕ ಹೋರಾಟ ಮುಂದುವರೆಯ ಬೇಕಿದೆ. ಆದರೆ ಈ ನೀರಿನ ಸದ್ಬಳಕೆಗೆ ಅತ್ಯಂತ ಮಹತ್ವದ ಮಂಜೂರಾಶಿಯಾಗಿದ್ದ ಕೇಂದ್ರ ಸರ್ಕಾರ
ಪರಿಸರ ಮತ್ತು ಅರಣ್ಯ ಇಲಾಖೆಯು ತಾನೇ ಕಳೆದ ಅ.17 ರಂದು ನೀಡಿದ್ದ ಮಂಜೂರಾತಿಯನ್ನು ನಿನ್ನೆ ಮಂಜೂರಾತಿ ತಡೆಹಿಡಿಯುವ ಆದೇಶ ಕರ್ನಾಟಕಕ್ಕೆ ಬಹು ದೊಡ್ಡ ಆಘಾತ ತಂದರು ಅನ್ಯಾಯ
ಪರಂಪರೆಯನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ರೈತರ ಮತ್ತು ನಾಗರೀಕರ ಕಲ್ಯಾಣದ ಹಿತದೃಷ್ಟಿಯಿಂದ ಗಮನಹರಿಸಬೇಕಾದದ್ದು ಬಹಳ ಮಹತ್ವದ ಅಗತ್ಯತೆಯಾಗಿದೆ ಎಂದಿದ್ದಾರೆ.
ಕಳಸ ಮತ್ತು ಬಂಡೂರಿ ನಾಲಾ ತಿರುವು ಯೋಜನೆ ಪದ ಮತ್ತು 1999 ರಲ್ಲಿ ಬೀಜಾಂಕುರ ಗೊಂಡು ಚಾಲನೆಗೆ ಬಂದಿವೆ. 7.56 ಟಿ.ಎಂ.ಸಿ ನೀರನ್ನು ಮಲಪ್ರಭಾ ಕಣಿವೆ
ವರ್ಗಾಯಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಅರಣ್ಯ ಮತ್ತು ಪರಿಸರ ಇಲಾಖೆ 2003 ರ ಆ.28 ರಂದು ನಡೆದ ತನ್ನ ಅರಣ್ಯ ಸಲಹಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಆದರೆ ಈ ಸಭೆಯ ನಿರ್ಣಯವನ್ನು ಕರ್ನಾಟಕಕ್ಕೆ ಅಧಿಕೃತವಾಗಿ ತಿಳಿಯಲಿಲ್ಲ. ಸಭೆಯ ನಿರ್ಣಯವನ್ನು
ಅನುಷ್ಠಾನಗೊಳಿಸುವ ಕುರಿತು ಅಂದಿನ ಕೇಂದ್ರ ಅರಣ್ಯ ಸಚಿವರು ಇದರ ಅನುಷ್ಠಾನ ತಡೆದು ಕಡತಗಳನ್ನು ಗುಪ್ತವಾಗಿರಿಸುವ ಪ್ರಯತ್ನ ಮಾಡಲಾಯಿತು. ಆರ್.ಟಿ.ಐ ಮೂಲಕ ಕಡತದ ಬಹುತೇಕ ವಿವರಗಳನ್ನು ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಆಸಕ್ತಿ ಯುಳ್ಳ ನಾಗರಿಕ ಲಕ್ಷ್ಮೀಕಾಂತ ಜೋಶಿ ಪಡೆದಿದ್ದಾರೆ. ಈಗ ನ್ಯಾಯಾಧಿಕರಣದ ಐತೀರ್ಪಿನಿಂದಾಗಿ ಅಂತಾರಾಜ್ಯ
ಜಲವಿವಾದವು ನಿರ್ಣಯವಾಗಿದೆ. ಜಲವಿವಾದ ನ್ಯಾಯಾಧಿಕರಣಗಳು ನೀಡುವ ಐತೀರ್ಪುಗಳು
ಸರ್ವೋಚ್ಚ ನ್ಯಾಯಾಲಯ ಡಿಕ್ರಿ ಸಮಾನ ಇಂದು ನಮ್ಮ ಅಂತರರಾಜ್ಯ ಜಲವಿವಾದ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ.
ಪ್ರಧಾನಿ ಪ್ರವೇಶಕ್ಕೆ ಒತ್ತಾಯಿಸುವುದು ಅಗತ್ಯ
ಆದ್ದರಿಂದ ಕಳಸಾ ಬಂಡೂರಿ ಯೋಜನೆ ಕುರಿತು ಕೇಂದ್ರ ಸರ್ಕಾರದ “ಕಣ್ಣು ತೆರೆಸಿದ ಪ್ರಯತ್ನ ಮಾಡುವುದು ಮತ್ತು ಪ್ರಧಾನ ಮಂತ್ರಿಯವರ ಮಧ್ಯ ಪ್ರವೇಶಕ್ಕೆ ಇನ್ನೊಮ್ಮೆ ಅನಿವಾರ್ಯವಾಗಿ ಒತ್ತಾಯಿಸುವುದು ಅಗತ್ಯ. ಮಲಪ್ರಭಾ ಕಣಿವೆ ಕೊರತೆ ಕಣಿವೆಯಾಗಿದ್ದು ಮಹಾದಾಯಿ ಕಣಿವೆ 200 ಟಿಎಂಸಿ
ಯಷ್ಟು ಜಲಸಂಪನ್ಮೂಲ ಲಭ್ಯತೆಯೊಂದಿಗೆ ಹೆಚ್ಚುವರಿ ನೀರು ಕಣಿವೆಯಾಗಿದೆ ಎಂಬುದು ಸಾಬೀತಾದ ಅಂಶ, ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಅನುಮತಿ ನೀಡುವಲ್ಲಿ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರ ಗಳಂತೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮೋದನೆಯನ್ನು ನೀಡಲಾಗಿತ್ತು ಎಂದಿದ್ದಾರೆ.
ಹಿಂಜರಿಯಬೇಡಿ
ಅಂತರ್ ಕಣಿವ ವರ್ಗಾವಣೆಗಳಿಗೆ ರಾಷ್ಟ್ರೀಯ ಜಲನೀತಿಯ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಸತ್ತು ಅಂಗೀಕರಿಸಿರುವ ರಾಷ್ಟ್ರೀಯ ಜಲನೀತಿ ಅಡಿಯಲ್ಲಿ ಕಳಸಾ ಬಂಡೂರಿ ಯೋಜನೆಗೆ ಅಗತ್ಯದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮೋದನೆ ನೀಡಲು ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಆದರೆ ಈಗ ರಾಷ್ಟ್ರೀಯ ಜಲನೀತಿ ಮತ್ತು ಅದರ ಮಾರ್ಗಸೂಚಿಗಳನ್ನು ಈಗಾಗಲೇ ನ್ಯಾಯಾಧಿಕರಣ ನೀಡಿರುವ ಐತೀರ್ಪಿನ ಸ್ಪಷ್ಟಿಕರಣ ಕೋರಿ ನ್ಯಾಯಾಧಿಕರಣದ ಮುಂದೆಯೇ ಸಲ್ಲಿಸಲಾದ ಅರ್ಜಿ ಗಳನ್ನು ನೆಪ ಮಾಡಿಕೊಂಡು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಗೋವಾ ರಾಜಕೀಯ ಉದ್ದೇಶಗಳನ್ನು ಈಡೇರಿಸಲು ಕೇಂದ್ರ ಸರ್ಕಾರದ ತನ್ನ ಆದೇಶವನ್ನು ತಡೆ ಹಿಡಿದಿರುವುದು ನ್ಯಾಯಾಧೀಕರಣದ ಐ ತೀರ್ಪಿಗೆ ಕೇಂದ್ರ ಸರ್ಕಾರ ತೋರಿರುವ ಅಗೌರವ ಹಾಗೂ ಕರ್ನಾಟಕಕ್ಕೆ ಮಹಾ ಅನ್ಯಾಯ ಎಂದಿದ್ದಾರೆ.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.