ಬೆಂಗಳೂರು : ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನೆ ದಿನೇ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿಯೋಣ.
ಇಂದಿನ ಚಿನ್ನ, ಬೆಳ್ಳಿ ದರದ ಮಾಹಿತಿ:
ನಗರ | ಚಿನ್ನ (22k) | ಚಿನ್ನ(24K) | ಬೆಳ್ಳಿ ದರ |
ಬೆಂಗಳೂರು | 4,700 ರೂ. | 5,040 ರೂ. | 60.2 ರೂ |
ಹುಬ್ಬಳ್ಳಿ | 4,771 ರೂ. | 5,139 ರೂ. | 60.170 ರೂ. |
ಮೈಸೂರು | 4,688 ರೂ. | 5,192 ರೂ. | 61.40 ರೂ. |
ಬೆಂಗಳೂರು | 4,700 ರೂ. | 5,040 ರೂ. | 60.2 ರೂ. |
ಮಂಗಳೂರು | 4,625 ರೂ. | 5,045 ರೂ. | 63.70 ರೂ. |
ದಾವಣಗೆರೆ | 4,620 ರೂ. | 5,000 ರೂ. | 63.78 ರೂ. |
ಶಿವಮೊಗ್ಗ | 4,625 ರೂ. | 5,027 ರೂ. | 60.80 ರೂ. |
ನಿನ್ನೆಯ ಚಿನ್ನ ಬೆಳ್ಳಿಯ ದರ ನೋಡುವುದಾದರೆ, ಹುಬ್ಬಳ್ಳಿಯಲ್ಲಿ ಇಂದು ಯಾವುದೇ ವ್ಯತ್ಯಾಸವಾಗಿಲ್ಲ. ಆದ್ರೆ, ಬೆಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗದಲ್ಲಿ ನಿನ್ನೆಗಿಂತ ಇಂದು ಕೊಂಚ ಚಿನ್ನ, ಬೆಳ್ಳಿ ದರ ಇಳಿಕೆ ಕಂಡಿದೆ. ಮಂಗಳೂರಿನಲ್ಲಿ 22k ಚಿನ್ನದಲ್ಲಿ 20 ರೂ,. 24K ಚಿನ್ನದಲ್ಲಿ 22 ರೂ. ಕಡಿಮೆಯಾಗಿದೆ. ಆದ್ರೆ ಬೆಳ್ಳಿ ದರ ಮಾತ್ರ 30 ಪೈಸೆ ಹೆಚ್ಚಳವಾಗಿದೆ.
ಇದನ್ನೂ ಓದಿ: ದೇಶಾದ್ಯಂತ 2,858 ಹೊಸ ಕೋವಿಡ್ ಕೇಸ್ ಪತ್ತೆ.. 11 ಮಂದಿ ಸಾವು