ETV Bharat / city

ನೆಹರೂ ಕುಟುಂಬ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದೆ, ಅದನ್ನು ಬಿಜೆಪಿಯವರು ಎಲ್ಲೂ ಹೇಳಲ್ಲ: ಸಿದ್ದರಾಮಯ್ಯ ಬೇಸರ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ

ನೆಹರೂ ನಿಧನದ ವೇಳೆ ಇಡೀ ವಿಶ್ವವೇ ಸಂತಾಪ ವ್ಯಕ್ತಪಡಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಆಧುನಿಕ ಭಾರತದ ನಿರ್ಮಾತೃ ಎಂದು ಬರೆದಿತ್ತು. ವರ್ಲ್ಡ್​ ಟೈಮ್ಸ್ ಕೂಡ ನೆಹರು ಬಗ್ಗೆ ಬರೆದಿದೆ. ಇದನ್ನು ನೆಹರು ಹೇಳಿ‌ ಬರೆಸಿದ್ರಾ? ಇದನ್ನ ಬಿಜೆಪಿಯವರು ಯಾಕೆ ಒಪ್ಪಲ್ಲ. ನೆಹರು ಅಲ್ಪಸಂಖ್ಯಾತರನ್ನ ನೆಲೆವೂರುವಂತೆ ಮಾಡಿದ್ದರು. ಅಲ್ಪಸಂಖ್ಯಾತರ ವಿರೋಧಿಗಳು ಬಿಜೆಪಿಯವರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

former-cm-siddaramaiah-talk-about-neharu-birthday-special
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ
author img

By

Published : Nov 14, 2020, 4:11 PM IST

ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಕುಟುಂಬ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಆದರೆ ಬಿಜೆಪಿಯವರು ಅದನ್ನು ಎಲ್ಲೂ ಹೇಳಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನೆಹರೂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆಹರೂ ನಿಧನದ ವೇಳೆ ಇಡೀ ವಿಶ್ವವೇ ಸಂತಾಪ ವ್ಯಕ್ತಪಡಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಆಧುನಿಕ ಭಾರತದ ನಿರ್ಮಾತೃ ಎಂದು ಬರೆದಿತ್ತು. ವರ್ಲ್ಡ್​ ಟೈಮ್ಸ್ ಕೂಡ ನೆಹರು ಬಗ್ಗೆ ಬರೆದಿದೆ. ಇದನ್ನು ನೆಹರು ಹೇಳಿ‌ ಬರೆಸಿದ್ರಾ? ಇದನ್ನ ಬಿಜೆಪಿಯವರು ಯಾಕೆ ಒಪ್ಪಲ್ಲ. ನೆಹರು ಅಲ್ಪಸಂಖ್ಯಾತರನ್ನ ನೆಲೆವೂರುವಂತೆ ಮಾಡಿದ್ದರು. ಅಲ್ಪಸಂಖ್ಯಾತರ ವಿರೋಧಿಗಳು ಬಿಜೆಪಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಕ್ಕೆ ಆರ್​​ಎಸ್​​ಎಸ್ ಕೊಡುಗೆಯೇನು? ಸ್ವಾತಂತ್ರ್ಯಕ್ಕಾಗಿ ಅವರ ಬಲಿದಾನವೇನು? ಭಗತ್ ಸಿಂಗ್ ಅವರ ಹೆಸರನ್ನು ಮುಂದೆ ತರ್ತಾರೆ. ವಿವೇಕಾನಂದರನ್ನು ಮುಂದೆ ತರ್ತಾರೆ. ಇವರನ್ನ ಆರ್​ಎಸ್​ಎಸ್ ನಮ್ಮವರೆಂದು ಬಿಂಬಿಸಿಕೊಳ್ಳುತ್ತಿದೆ. ಇವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ನೆಹರೂ ಅವರು ದೇಶಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಇವರು ಹುಟ್ಟುಹಬ್ಬವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಆಗರ್ಭ ಶ್ರೀಮಂತರಾದ ಇವರು ವಿದೇಶಗಳಲ್ಲಿ ಶಿಕ್ಷಣ ಪಡೆದಿದ್ದಾರೆ. ಭಾರತಕ್ಕೆ ವಾಪಸಾದ ಮೇಲೆ ಉನ್ನತ ಶಿಕ್ಷಣ ಪಡೆದು ನಂತರ ಗಾಂಧಿ ಹೋರಾಟದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಾಕಷ್ಟು ಬಾರಿ ಜೈಲು ವಾಸ ಅನುಭವಿಸಿದ್ದರು.
ದೇಶವನ್ನು ಒಗ್ಗೂಡಿಸುವ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ ಆರ್​​ಎಸ್​​ಎಸ್​​ನವರು ನೆಹರು ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ನಡುವೆ ಭಿನ್ನಾಭಿಪ್ರಾಯವಿತ್ತು ಎಂಬ ಸುಳ್ಳು ಮಾಹಿತಿಯನ್ನು ಜನರಿಗೆ ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಅವರ ಕೈಯಲ್ಲಿ ಅಧಿಕಾರ ಇದ್ದರೆ ನಿರಂತರ ರಕ್ತಪಾತವಾಗುವಂತೆ ಮಾಡುತ್ತಿದ್ದರು. ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ವಲ್ಲಭಭಾಯ್​ ಪಟೇಲ್ ಅವರು ಮುಂಚೂಣಿ ನಾಯಕರು. ಅವರನ್ನು ಮುಂಚೂಣಿಯಲ್ಲಿ ಉಳಿಸುವ ಕಾರ್ಯ ನಾವು ಮಾಡಬೇಕು. ದೇಶ ಕಂಡ ಅತ್ಯಂತ ದೊಡ್ಡ ಸುಳ್ಳುಗಾರ ಎಂದರೆ ಅದು ನರೇಂದ್ರ ಮೋದಿ ಎಂದು ಟೀಕಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.