ಬೆಂಗಳೂರು: ಬಿಬಿಎಂಪಿ ನೌಕರರ ರಾಮಮಂದಿರ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ 5 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ರಾಮ ಮಂದಿರ ನಿರ್ಮಾಣದ ಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ದೊಡ್ಡ-ದೊಡ್ಡ ಉದ್ದಿಮೆದಾರರು ಮುಂದೆ ಬಂದಿದ್ದಾರೆ. ಆದರೆ, ದೇಶದ ಶ್ರದ್ಧಾಳುಗಳೆಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂಬುದು ಮಂದಿರ ನಿರ್ಮಾಣ ಟ್ರಸ್ಟ್ನ ಇಚ್ಛೆ. ಇದಕ್ಕೆ ಸಾಮಾನ್ಯರಿಂದ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ.
ರಾಮಮಂದಿರ ನಿರ್ಮಾಣಕ್ಕಾಗಿ ಬೆಂಗಳೂರು ಜನರಿಂದ ನಿರೀಕ್ಷೆ ಮೀರಿ ದೇಣಿಗೆ ಸಂಗ್ರಹವಾಗುತ್ತಿದೆ. ಈ ಅಭಿಯಾನದಡಿ ಇಲ್ಲಿ 18 ಲಕ್ಷ ಕುಟುಂಬಗಳನ್ನು ತಲುಪುವ ನಿರೀಕ್ಷೆ ಮಾಡಿದ್ದೆವು. ಆದರೆ, ಈಗಾಗಲೇ 23 ಲಕ್ಷ ಕುಟುಂಬಗಳು ಮಂದಿರಕ್ಕೆ ನಿಧಿ ಸಮರ್ಪಿಸಿವೆ ಎಂದು ಹೇಳಿದರು.
ಓದಿ: ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ: ಕಾಯ್ದೆ ಸಂಬಂಧ ಸರ್ಕಾರದಿಂದ ಅಧಿಸೂಚನೆ!
ಈ ವೇಳೆ ದಕ್ಷಿಣ ಪ್ರಾಂತ ಕಾರ್ಯವಾಹಕ ತಿಪ್ಪೇಸ್ವಾಮಿ, ಪಾಲಿಕೆ ಆಡಳಿತಾಧಿಕಾರಿ ಗೌರವ ಗುಪ್ತ, ಆಯುಕ್ತ ಮಂಜುನಾಥ ಪ್ರಸಾದ್, ಎಸ್.ಹರೀಶ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.