ETV Bharat / city

ಅಶ್ವತ್ಥ್ ನಾರಾಯಣ್ ಸಮರ್ಥಿಸಿಕೊಳ್ಳದ ಬಿಜೆಪಿ ಪ್ರ.ಕಾರ್ಯದರ್ಶಿ, ವಕ್ತಾರರಿಗೆ ಅರುಣ್ ಸಿಂಗ್ ಕ್ಲಾಸ್

ಅಶ್ವತ್ಥ್ ನಾರಾಯಣ್ ಮೇಲೆ ಡಿಕೆಶಿ ಅಂತಹ ಆರೋಪ ಮಾಡ್ತಿದ್ರೆ ಕೂಡಲೇ ಸಚಿವರ ಸಮರ್ಥನೆಗೆ ಯಾಕೆ ಮುಂದಾಗ್ಲಿಲ್ಲ?, ಎಲ್ಲದರ ಬಗೆಗೂ ಹೈಕಮಾಂಡೇ ಸಂದೇಶ ಕಳಿಸಬೇಕಾ? ಎಂದು ಕೋರ್​ ಕಮಿಟಿ ಸಭೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಮತ್ತು ವಕ್ತಾರರಿಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕ್ಲಾಸ್ ತೆಗೆದುಕೊಂಡರು.

ಅರುಣ್ ಸಿಂಗ್
ಅರುಣ್ ಸಿಂಗ್
author img

By

Published : May 15, 2022, 7:23 AM IST

ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಎಂ‌.ಬಿ.ಪಾಟೀಲ್ ಭೇಟಿ ಬಗ್ಗೆ ಡಿ.ಕೆ.ಶಿವಕುಮಾರ್​ ಆರೋಪ ವಿಚಾರವಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಮತ್ತು ವಕ್ತಾರರಿಗೆ ನಿನ್ನೆ ನಡೆದ ಕೋರ್​ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಶ್ವತ್ಥ್ ನಾರಾಯಣ್ ಮೇಲೆ ಡಿಕೆಶಿ ಅಂತಹ ಆರೋಪ ಮಾಡ್ತಿದ್ರೆ ಕೂಡಲೇ ಸಚಿವರ ಸಮರ್ಥನೆಗೆ ಯಾಕೆ ಮುಂದಾಗ್ಲಿಲ್ಲ?. ಸಚಿವ ಅಶ್ವತ್ಥ್ ನಾರಾಯಣ್ ಪರ ಸಮರ್ಥನೆಗೆ ಹೈಕಮಾಂಡ್ ಸೂಚನೆ ಬಳಿಕ ಮುಂದಾಗಿದ್ದೇಕೆ?. ಎಲ್ಲದರ ಬಗೆಗೂ ಹೈಕಮಾಂಡೇ ಸಂದೇಶ ಕಳಿಸಬೇಕಾ?. ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ವಕ್ತಾರರು ಕೂಡಲೇ ಸಚಿವರ ಸಮರ್ಥನೆಗೆ ಇಳಿಯಬೇಕಿತ್ತೆಂದು ತರಾಟೆಗೆ ತೆಗೆದುಕೊಂಡಿದರು.

ಸಭೆಯ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಸೂಚನೆ‌ ನೀಡಿದ ಅರುಣ್ ಸಿಂಗ್, ಇನ್ನು ಮುಂದೆ ಪಕ್ಷದ ಕಚೇರಿಯಲ್ಲಿ ನಿಯಮಿತವಾಗಿ ಸಚಿವರ ಸುದ್ದಿಗೋಷ್ಠಿಗಳನ್ನು ನಡೆಸಬೇಕು. ರಾಜ್ಯದ ಸಚಿವರಿಂದ ಪಕ್ಷದ ಕಚೇರಿಯಲ್ಲಿ ತಿಂಗಳಿಗೆ ಕನಿಷ್ಠ ಹತ್ತು ಸುದ್ದಿಗೋಷ್ಠಿಗಳು ನಡೆಸಬೇಕು. ಕೇಂದ್ರ ಸಚಿವರು ಪಕ್ಷದ ಕಚೇರಿಯಲ್ಲಿ ತಿಂಗಳಿಗೆ ಎರಡು ಬಾರಿ ಸುದ್ದಿಗೋಷ್ಠಿ ನಡೆಸುವಂತೆ ತಿಳಿಸಿದರು.

ಇದೇ ವೇಳೆ ಸಚಿವರ ಮೇಲೆ ವಿಪಕ್ಷಗಳು ಆರೋಪ, ಟೀಕೆ ಮಾಡುತ್ತಿರುವ ವಿಚಾರದ ಕುರಿತು ಸಹ ಸುದ್ದಿಗೋಷ್ಠಿ ನಡೆಸುವಂತೆಯೂ ತಾಕೀತು ಮಾಡಿದರು. ಸಚಿವರ ಸಮರ್ಥನೆಗೆ ಹತ್ತು ಜನ ಸಚಿವರು, ಪ್ರಧಾನ ಕಾರ್ಯದರ್ಶಿಗಳ ಎರಡು ಪ್ರತ್ಯೇಕ ಟೀಂ ರಚಿಸಲು ನಿರ್ದೇಶನ ಕೊಟ್ಟರು.

ಇದನ್ನೂ ಓದಿ: ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ, ಕೌನ್ಸಿಲ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮೇಲೆ ಚರ್ಚೆ : ಅರುಣ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.