ETV Bharat / city

600 ಕೋಟಿ ರೂ.ಆಸ್ತಿ ಕಬಳಿಸಿದ ಭೂಗಳ್ಳರ ಜಾಲ ಭೇದಿಸಿದ CID : ನಾಲ್ವರು ವಕೀಲರ ಬಂಧನ - 600 crores Rs worth land mafia case traced by CID

ಸಿಐಡಿ ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಮೊದಲು ಆರೋಪಿಗಳು ಬೆಂಗಳೂರಿನ ಸುತ್ತಮುತ್ತಲಿನ ಖಾಲಿ ಜಾಗಗಳನ್ನು ಗುರುತಿಸುತ್ತಿದ್ದರು. ಆ ಆಸ್ತಿಯನ್ನು ವಾರಸುದಾರರು ಬಳಕೆ ಮಾಡುತ್ತಿದ್ದರೋ, ಇಲ್ಲವೋ ಎನ್ನುವುದರ ಬಗ್ಗೆ ಒಂದು ಪಟ್ಟಿ ಸಿದ್ಧಪಡಿಸಿಕೊಳ್ಳುತ್ತಿದ್ದರು. ಬಳಿಕ ವಕೀಲರಿಗೆ ಆ ಆಸ್ತಿಯ ಪಟ್ಟಿಯನ್ನ ಭೂಗಳ್ಳರು ಕೊಡುತ್ತಿದ್ದರು. ಆಸ್ತಿಯ ಮಾಲೀಕರ ಹೆಸರನ್ನು ಮುಚ್ಚಿಟ್ಟು ನಕಲಿ ಕಕ್ಷಿದಾರರು ಹಾಗೂ ಪ್ರತಿವಾದಿಗಳನ್ನು ವಕೀಲರು ಸೃಷ್ಟಿಸಿದ್ದರು..

CID
ಸಿಐಡಿ
author img

By

Published : Aug 6, 2021, 9:12 PM IST

ಬೆಂಗಳೂರು : 600 ಕೋಟಿ ರೂ. ಆಸ್ತಿ ಕಬಳಿಕೆ ಮಾಡಿದ್ದ ಭೂಗಳ್ಳರ ಜಾಲವನ್ನು ಸಿಐಡಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ವಾರಸುದಾರರು ಉಪಯೋಗಿಸದ ಆಸ್ತಿಗಳನ್ನ ಭೂಗಳ್ಳರು ಟಾರ್ಗೆಟ್ ಮಾಡಿದ್ದರು. ಈ ಪ್ರಕರಣದಲ್ಲಿ ಭೂಗಳ್ಳರ ಜತೆ ಕೈ ಜೋಡಿಸಿದ್ದ ನಾಲ್ವರು ವಕೀಲರನ್ನು ಬಂಧಿಸಿದ್ದಾರೆ.

ಕಂಪನಿ ಜಾಗ ಕಬಳಿಸಲು ಯತ್ನಿಸಿ ಸಿಕ್ಕಬಿದ್ದಿದ್ದ ಭೂಗಳ್ಳರು, ಖಾಲಿ ಜಾಗವನ್ನು ಕೊಳ್ಳೆ ಹೊಡೆಯಲು ನಕಲಿ ಕಕ್ಷಿದಾರ ಹಾಗೂ ಪ್ರತಿವಾದಿಗಳನ್ನ ಸೃಷ್ಟಿಸಿದ್ದರು. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಆಸ್ತಿ ಕಬಳಿಕೆ ಮಾಡುತ್ತಿದ್ದ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ರಾಜಿ ಡಿಕ್ರಿ ಪಡೆಯುತ್ತಿದ್ದರು. ಪ್ರಕರಣವನ್ನು ತನಿಖೆ ನಡೆಸಿದ್ದ ಸಿಐಡಿ ಪೊಲೀಸರಿಗೆ ಈ ವೇಳೆ 116 ನಕಲಿ ರಾಜಿ ಡಿಕ್ರಿ ಸೃಷ್ಟಿಸಿ 600 ಕೋಟಿ ಆಸ್ತಿ ಕಬಳಿಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.

ಬೆಂಗಳೂರಿನ ಯಶವಂತಪುರ ಬಳಿಯಿರುವ ರೋ ಷಾ ಹರೀಲಾಲ್ ಭೀಕಾಬಾಯಿ ಕಂಪನಿಯ ಆಸ್ತಿ ಕಬಳಿಕೆಗೆ ಭೂಗಳ್ಳರು ಯತ್ನಿಸಿದ್ದರು. ಈ ಸಂಬಂಧ ರಿಜಿಸ್ಟರ್ ಧನಲಕ್ಷ್ಮಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಭೂಗಳ್ಳರ ವಿರುದ್ದ ದೂರು ದಾಖಲಿಸಿದ್ದರು. ಈ ಪ್ರಕರಣವನ್ನ ಸಿಐಡಿ ಕೈಗೆತ್ತಿಕೊಂಡು ತನಿಖೆ ನಡೆಸಿ ಭೂಗಳ್ಳರ ಜಾಲವನ್ನ ಭೇದಿಸಿದ್ದರು. ಇದೀಗ ಭೂಗಳ್ಳರ ಜೊತೆ ಕೈಜೋಡಿಸಿದ್ದ ನಾಲ್ವರು ವಕೀಲರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

ಸಿಐಡಿ ತನಿಖೆ ವೇಳೆ ಸ್ಪೋಟಕ ಮಾಹಿತಿ ಬೆಳಕಿಗೆ : ಸಿಐಡಿ ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಮೊದಲು ಆರೋಪಿಗಳು ಬೆಂಗಳೂರಿನ ಸುತ್ತಮುತ್ತಲಿನ ಖಾಲಿ ಜಾಗಗಳನ್ನು ಗುರುತಿಸುತ್ತಿದ್ದರು. ಆ ಆಸ್ತಿಯನ್ನು ವಾರಸುದಾರರು ಬಳಕೆ ಮಾಡುತ್ತಿದ್ದರೋ, ಇಲ್ಲವೋ ಎನ್ನುವುದರ ಬಗ್ಗೆ ಒಂದು ಪಟ್ಟಿ ಸಿದ್ಧಪಡಿಸಿಕೊಳ್ಳುತ್ತಿದ್ದರು. ಬಳಿಕ ವಕೀಲರಿಗೆ ಆ ಆಸ್ತಿಯ ಪಟ್ಟಿಯನ್ನ ಭೂಗಳ್ಳರು ಕೊಡುತ್ತಿದ್ದರು. ಆಸ್ತಿಯ ಮಾಲೀಕರ ಹೆಸರನ್ನು ಮುಚ್ಚಿಟ್ಟು ನಕಲಿ ಕಕ್ಷಿದಾರರು ಹಾಗೂ ಪ್ರತಿವಾದಿಗಳನ್ನು ವಕೀಲರು ಸೃಷ್ಟಿಸಿದ್ದರು.

ನಕಲಿ ದಾಖಲೆಗಳನ್ನ ಸೃಷ್ಟಿಸಿ ಆಸ್ತಿ ಕಬಳಿಕೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಿದ್ದರು. ಇಷ್ಟೆಲ್ಲ ಆದರೂ ಸಹ ಆಸ್ತಿಯ ನೈಜ ಮಾಲೀಕರಿಗೆ ತಿಳಿಯುತ್ತಿರಲಿಲ್ಲ. ನ್ಯಾಯಾಲಯದಲ್ಲಿ ನಕಲಿ ದಾಖಲೆಗಳನ್ನ ಅಸಲಿ ಎಂದು ವಾದಿಸಿ ಆಸ್ತಿ ಹಕ್ಕಿನ ರಾಜೀ ಡಿಕ್ರಿ ಪಡೆಯುತ್ತಿದ್ದರು. ಅದೇ ರಾಜೀ ಡಿಕ್ರಿಯಿಂದ ಸಂಧಾನದ ಮೂಲಕ ಜಾಗವನ್ನು ಕಬಳಿಸುತ್ತಿದ್ದರು. ಬಳಿಕ ಕೋಟ್ಯಂತರ ರೂ.ಗೆ ಬೇರೆಯವರಿಗೆ ಅದೇ ಆಸ್ತಿಯನ್ನ ಮಾರಾಟ ಮಾಡುತ್ತಿದ್ದರು ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.

ನಕಲಿ ದಾಖಲೆ ಸೃಷ್ಟಿಸಿ ಹಲವರಿಗೆ ವಂಚನೆ ಮಾಡಿರುವ ಸಂಶಯ : ಇದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ಹಲವರಿಗೆ ವಂಚನೆ ಮಾಡಿರುವ ಬಗ್ಗೆ ಶಂಕೆ ಹಿನ್ನೆಲೆ ಬಂಧಿತ ಭೂಗಳ್ಳರ ಹೆಸರನ್ನು ಗೌಪ್ಯವಾಗಿಟ್ಟು ಸಿಐಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ ಆರೋಪ ಕೇಸ್: ಅಮೆಜಾನ್‌, ಫ್ಲಿಪ್‌ಕಾರ್ಟ್‌ ಅರ್ಜಿ ಆ.9ಕ್ಕೆ ಮುಂದೂಡಿದ Supreme Court

ETV Bharat Logo

Copyright © 2025 Ushodaya Enterprises Pvt. Ltd., All Rights Reserved.