ETV Bharat / city

14 ವರ್ಷ ಪೂರೈಸಿದ ಕೆಂಪೇಗೌಡ ಏರ್​ಪೋರ್ಟ್​: 25 ಕೋಟಿ ಜನ ಪ್ರಯಾಣಕ್ಕೆ ಸಾಕ್ಷಿಯಾದ ವಿಮಾನ ನಿಲ್ದಾಣ - ಏರ್ ಟ್ರಾಫಿಕ್ ಮೂಮೆಂಟ್

20 ಲಕ್ಷ ಏರ್ ಟ್ರಾಫಿಕ್ ಮೂಮೆಂಟ್​ಗಳ (ATM) ಮೂಲಕ ದಾಖಲೆ ಸಂಖ್ಯೆಯ ಪ್ರಯಾಣಿಕರು ಏರ್​ಪೋರ್ಟ್ ಮೂಲಕ ಪ್ರಯಾಣಿಸಿದ್ದಾರೆ. ಕೊರೊನಾ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾದರೂ ಅನಂತರ ಪ್ರಯಾಣಿಕರ ಸಂಖ್ಯೆ ಗಮನಾರ್ಹ ಸಂಖ್ಯೆಯಲ್ಲಿ ಏರಿಕೆಯಾಗಿದೆ.

Kempegowda International Airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Jun 30, 2022, 10:10 AM IST

Updated : Jun 30, 2022, 12:51 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ಮೇ 24, 2008 ರಿಂದ 2022ರ ಜೂನ್ ಕೊನೆಯ ವಾರದ ಅಂತ್ಯಕ್ಕೆ 25 ಕೋಟಿ ಜನ ಪ್ರಯಾಣಿಸಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ವಿಮಾನ ನಿಲ್ದಾಣಗಳಲ್ಲಿ ಕೆಐಎಎಲ್ ಹೊಸ ಮೈಲಿಗಲ್ಲು ಸಾಧಿಸಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೂರನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೆ.

2008 ಮೇ 24 ರಂದು ಕೆಐಎಎಲ್​ನಲ್ಲಿ ಪ್ರಯಾಣಿಕರ ವಿಮಾನ ಹಾರಾಟ ಪ್ರಾರಂಭವಾಗಿತ್ತು. 2022ರ ಜೂನ್ ತಿಂಗಳ ಕೊನೆಯ ವಾರಕ್ಕೆ 25 ಕೋಟಿ ಜನ ಪ್ರಯಾಣಿಸಿದ್ದಾರೆ. 20 ಲಕ್ಷ ಏರ್ ಟ್ರಾಫಿಕ್ ಮೂಮೆಂಟ್​ಗಳ (ATM) ಮೂಲಕ ದಾಖಲೆ ಸಂಖ್ಯೆಯ ಪ್ರಯಾಣಿಕರು ಏರ್​ಪೋರ್ಟ್ ಮೂಲಕ ಪ್ರಯಾಣಿಸಿದ್ದಾರೆ. ಏರ್​ಪೋರ್ಟ್ ಮೂಲಕ ಪ್ರಪಂಚದ ವಿವಿಧ ನಗರಗಳಿಗೆ ವಿಮಾನ ಸಂಪರ್ಕ ಮತ್ತು ಅಸ್ಥಿತ್ವದಲ್ಲಿರುವ ವಿಮಾನ ಮಾರ್ಗಗಳಲ್ಲಿ ಹೆಚ್ಚುತ್ತಿರುವ ಸಂಖ್ಯೆ ಪ್ರಯಾಣಿಕರ ಏರಿಕೆಗೆ ಕಾರಣವಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕೊರೊನಾ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾದರೂ ಅನಂತರ ಪ್ರಯಾಣಿಕರ ಸಂಖ್ಯೆ ಗಮನಾರ್ಹ ಸಂಖ್ಯೆಯಲ್ಲಿ ಏರಿಕೆಯಾಗಿದೆ. ವಿಮಾನ ನಿಲ್ದಾಣದಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯಗಳು, ಐಷರಾಮಿ ಪ್ರಯಾಣಿಕರ ಲಾಂಚ್​ಗಳು ಮತ್ತು ಹೊಟೇಲ್​ಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14ನೇ ವಾರ್ಷಿಕೋತ್ಸವದ ಸಂಭ್ರಮ

Last Updated : Jun 30, 2022, 12:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.