ಬಳ್ಳಾರಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿವೋರ್ವಳು ಸರ್ಕಾರಿ ಬಸ್ ನಿಲ್ದಾಣದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಅಶ್ವಿನಿ (23) ಮೃತ ಯುವತಿ. ಈಕೆಗೆ ಮಾನಸಿಕ ತೊಂದರೆಯಿರುವ ಕಾರಣ ಪೋಷಕರು ಮನಃಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಕನಕಗಿರಿಯಿಂದ ತಂದೆ-ಮಗಳು ಹುಬ್ಬಳ್ಳಿಗೆ ಹೋಗಬೇಕಿತ್ತು. ಅಲ್ಲಿನ ಬಸ್ ನಿಲ್ದಾಣದ ಹೋಟಲ್ವೊಂದರಲ್ಲಿ ಇಬ್ಬರು ಉಪಹಾರ ಸೇವಿಸುತ್ತಿರುವಾಗ ಅಶ್ವಿನಿ ಹೊರ ಬಂದಿದ್ದಳು. ಶೌಚಾಲಯಕ್ಕೆ ಹೋಗಿರಬಹುದೆಂದು ತಂದೆ ಸುಮ್ಮನಾಗಿದ್ದರು, ಆದರೆ ಅಶ್ವಿನಿ ಬಸ್ ಏರಿ ಹೊಸಪೇಟೆಗೆ ಬಂದಿದ್ದಳು.
ಬಳಿಕ ಹೊಸಪೇಟೆಯ ಬಸ್ ನಿಲ್ದಾಣದ ಲಾಡ್ಜ್ವೊಂದರಲ್ಲಿ ತನ್ನ ತಂದೆ-ತಾಯಿ ಊರಿನಿಂದ ಬರುತ್ತಿದ್ದಾರೆ. ಅಂಕಪಟ್ಟಿ ಮೆರತು ಬಂದಿದ್ದು, ಅವರು ತರುತ್ತಿದ್ದಾರೆ ಎಂದು ಹೇಳಿ ರೂಂ ಬುಕ್ ಮಾಡಿದ್ದಳಂತೆ. ಆದ್ರೆ ಬಸ್ ನಿಲ್ದಾಣದ ಮೇಲೇರಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.