ಬೆಳಗಾವಿ: ವಿವಾಹೇತರ ಸಂಬಂಧ ಶಂಕಿಸಿ ಪತಿಯೊಬ್ಬ ಪತ್ನಿ ಮತ್ತು ಮಗನ ಕತ್ತು ಸೀಳಿದ್ದಾನೆ. ನಾಲ್ಕು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಪತ್ನಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದ ಹೊರವಲಯದಲ್ಲಿರುವ ಘಟನೆ ನಡೆದಿದೆ.
ಮಗು ಬಾಳೇಶ ಅಕ್ಕಣಿ (4) ಸಾವನ್ನಪ್ಪಿದ್ದಾನೆ. ತಾಯಿ ಲಕ್ಷ್ಮೀ ಮುತ್ತೆಪ್ಪ ಅಕ್ಕಣಿ (27) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಮುತ್ತೆಪ್ಪ ಅಕ್ಕಣಿ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳಕ್ಕೆ ಗೋಕಾಕ ಡಿವೈಎಸ್ಪಿ ಮನೋಜಕುಮಾರ್, ಗೋಕಾಕ ಗ್ರಾಮೀಣ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿರೋಧದ ನಡುವೆಯೂ ಮದುವೆಯಾದ ಜೋಡಿ: ಅಮಾನುಷವಾಗಿ ಕೊಲೆ ಮಾಡಿದ ತಂದೆ