ETV Bharat / city

ಮದ್ಯದಂಗಡಿ ಬೇಕೆಬೇಕೆಂದು ಪ್ರತಿಭಟಿಸಿದ 'ಗುಂಡ್‌'ಹೈಕ್ಳು.. ಇವ್ರ್‌ ಹಿಂಗ್‌ ಅಂದ್ರೇ, ಅವ್ರ್ ಹಂಗ್ ಅಂತಾವ್ರೇ..

ಮದ್ಯಪಾನಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಸಂಬರಗಿ ಗ್ರಾಮಸ್ಥರು ಮಧ್ಯದ ಅಂಗಡಿ ಬಂದ್ ಮಾಡುವಂತೆ ಸಹಿ ಸಂಗ್ರಹಿಸಿ ಅಬಕಾರಿ ಇಲಾಖೆ ಮನವಿ ಸಲ್ಲಿಸಿದ್ದಾರೆ. ಆದರೆ ಇದನ್ನು ವಿರೋಧಿಸಿರುವ ಮದ್ಯ ಪ್ರಿಯರು ವಿರೋಧಿಸಿ ನಮಗೆ ಬೇಕೇ ಬೇಕು ಎಂದು ಸಾರಾಯಿ ಅಂಗಡಿ ಮುಂದೆ ಪ್ರತಿಭಟನೆ ನಡೆಸಿದರು.

author img

By

Published : Jul 18, 2021, 9:03 PM IST

Updated : Jul 18, 2021, 9:21 PM IST

drinkers-protest
ಮದ್ಯ ಪ್ರಿಯರು

ಅಥಣಿ : ಮದ್ಯದಂಗಡಿ ತೆರೆಯುವಂತೆ ಒತ್ತಾಯಿಸಿ ಮದ್ಯಪ್ರಿಯರು ಪ್ರತಿಭಟಿಸಿದ ಘಟನೆ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ. ಒಂದು ವೇಳೆ ಬಾರ್​ ತೆರೆಯದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮದ್ಯಪಾನಿಗಳು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಮದ್ಯದಂಗಡಿ ಬೇಕೆಬೇಕೆಂದು ಪ್ರತಿಭಟಿಸಿದ 'ಗುಂಡ್‌'ಹೈಕ್ಳು

ಸಂಬರಗಿ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾದ ಕಾರಣ ಕನ್ನಡ ಪರ ಹೋರಾಟಗಾರರು, ಗ್ರಾಮದ ಮಹಿಳೆಯರು ಹಾಗೂ ಮುಖಂಡರು ಸೇರಿ ಸಹಿ ಸಂಗ್ರಹಿಸಿ ಮದ್ಯದಂಗಡಿ ಮುಚ್ಚುವಂತೆ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಆದ್ರೆ, ಇದನ್ನ ಮದ್ಯಪ್ರಿಯರು ವಿರೋಧಿಸಿದ್ದು, ಬಾರ್​ ಸ್ಥಳಾಂತರ ಮಾಡಿದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ. ಒಟ್ಟಾರೆ ದಾರಿ ತಪ್ಪುತ್ತಿರುವ ಯುವ ಜನತೆಗೆ ಸರಿಪಡಿಸಲು ಒಂದು ಬಣ ಮದ್ಯದ ಅಂಗಡಿ ಮುಚ್ಚಿಸಿದ್ರೆ, ಇನ್ನೊಂದು ಬಣ ತೆರೆಯುವಂತೆ ಪ್ರತಿಭಟಿಸುತ್ತಿರುವುದು ನಗೆಪಾಟಿಲಿಗೆ ಕಾರಣವಾಗಿದೆ.

Last Updated : Jul 18, 2021, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.