ಬೆಳಗಾವಿ: ಶಾಹಿ ಮಸೀದಿ ಈ ಹಿಂದೆ ದೇಗುಲವಾಗಿತ್ತು ಎಂಬ ಹೇಳಿಕೆ ನೀಡಿದ್ದ ಶಾಸಕ ಅಭಯ್ ಪಾಟೀಲ ವಿರುದ್ಧ ಮುಸ್ಲಿಂ ನಾಯಕರು ಸಿಡಿದೆದ್ದಿದ್ದಾರೆ. 2011 ರಲ್ಲಿ ಇಲ್ಲಿನ ಭಾರತ ನಗರದಲ್ಲಿದ್ದ ಸಾಯಿ ಮಂದಿರ ತೆರವು ಗೊಳಿಸಿದ್ದಾರೆಂದು ಅಭಯ್ ವಿರುದ್ಧ ಮುಸ್ಲಿಂ ನಾಯಕರೊಬ್ಬರು ಆರೋಪಿಸಿದ್ದಾರೆ.
ತಮ್ಮ ಸ್ವಂತ ಜಾಗದ ಎದುರಿಗೆ ಇದ್ದ ಸಾಯಿ ಮಂದಿರವನ್ನು ಅಭಯ್ ಪಾಟೀಲ ತೆರವುಗೊಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳು ವೈರಲ್ ಮಾಡಲಾಗುತ್ತಿದೆ. ಹಿಂದುತ್ವ ಎನ್ನುವ ಅಭಯ್ ಪಾಟೀಲ್ ಇದರ ಬಗ್ಗೆ ಉತ್ತರಿಸಲಿ ಎಂದು ಬೆಳಗಾವಿಯಲ್ಲಿ ಮುಸ್ಲಿಂ ಮುಖಂಡ ಮನ್ಸೂರ್ ಆಗ್ರಹಿಸಿದ್ದಾರೆ.
ಓದಿ: ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣ: ಮಸೀದಿ ತೆರವು ಮಾಡಬೇಕೆಂಬ ಅರ್ಜಿಗೆ ಕೋರ್ಟ್ ಅಸ್ತು
ಮನ್ಸೂರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅಭಯ್ ಪಾಟೀಲ, ಮಾಸ್ಟರ್‌ಪ್ಲಾನ್ ವೇಳೆ ಸಾಯಿ ಮಂದಿರ ತೆರವು ಮಾಡಲಾಗಿದೆ. ನಾಥ್ ಪೈ ಸರ್ಕಲ್‌ನಿಂದ ಯಳ್ಳೂರ ಸರ್ಕಲ್ವರೆಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿತ್ತು. ರಸ್ತೆಯ ಮಾಸ್ಟರ್‌ಪ್ಲ್ಯಾನ್‌ನಲ್ಲಿ ಸ್ಥಳೀಯರ ಮನವೊಲಿಸಿ ಸಾಯಿ ಮಂದಿರ ತೆರವು ಮಾಡಲಾಗಿದೆ ಎಂದರು.
ನಾನೇನು ಸಾಯಿ ಮಂದಿರವನ್ನು ತೆರವುಗೊಳಿಸಿಲ್ಲ. ಮಾಸ್ಟರ್‌ಪ್ಲ್ಯಾನ್‌ಗಾಗಿ ತೆರವು ಮಾಡಿದ್ದೇವೆ. ಕೆಲವೊಂದು ಕಡೆ ಇನ್ನೂ ಇವೆ. ಸ್ಥಳೀಯರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ರಸ್ತೆಯಲ್ಲಿ ದೇಗುಲ ಬರುತ್ತೆ ಅಂತಾ ಮಾಸ್ಟರ್‌ಪ್ಲಾನ್ ವೇಳೆ ಮಂದಿರಗಳ ತೆರವು ಮಾಡಲಾಗಿದೆ. ಮಾಸ್ಟರ್ ಪ್ಲಾನ್ ವೇಳೆ ಒಂದಲ್ಲ, ಎರಡು ದೇಗುಲಗಳನ್ನು ತೆರವು ಮಾಡಲಾಗಿದೆ ಎಂದು ಇದೇ ವೇಳೆ ಅವರು ಸ್ಪಷ್ಟನೆ ನೀಡಿದರು.