ETV Bharat / business

ಒಂದು ಭೂಮಿ 'ನವದೆಹಲಿ ಘೋಷಣೆ'ಗಳಿಗೆ ವಿಶ್ವ ನಾಯಕರ ಒಮ್ಮತ: ಪ್ರಧಾನಿ ಮೋದಿ

ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಇದುವರೆಗೂ ವಿಶ್ವ ನಾಯಕರು ನಡೆಸಿದ ಚರ್ಚೆಗಳ ವಿಷಯಗಳ ಕುರಿತು ಒಮ್ಮತಕ್ಕೆ ಬರಲಾಗಿದ್ದು, ಎಲ್ಲ ಘೋಷಣೆಗಳನ್ನು ಅಂಗೀಕರಿಸಲಾಗಿದೆ.

ಜಿ20 ಶೃಂಗಸಭೆ
ಜಿ20 ಶೃಂಗಸಭೆ
author img

By ETV Bharat Karnataka Team

Published : Sep 9, 2023, 4:48 PM IST

Updated : Sep 9, 2023, 5:20 PM IST

ನವದೆಹಲಿ: ಜಿ-20 ಶೃಂಗಸಭೆಯಲ್ಲಿ ಒಂದು ಭೂಮಿ ಕುರಿತಾಗಿ ವಿಶ್ವ ನಾಯಕರ ಘೋಷಣೆಯನ್ನು ಅಂಗೀಕರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು. ನಮ್ಮೆಲ್ಲಾ ತಂಡಗಳ ಕಠಿಣ ಶ್ರಮದಿಂದಾಗಿ ಜಿ20 ಶೃಂಗಸಭೆಯಲ್ಲಿ ಚರ್ಚಿಸಲಾದ ಎಲ್ಲ ಘೋಷಣೆಗಳ ಬಗ್ಗೆ ಒಮ್ಮತವನ್ನು ಪಡೆಯಲಾಗಿದೆ. ಇವನ್ನು ಅಳವಡಿಸಿಕೊಳ್ಳುವುದಾಗಿ ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯ ಗಮನಕ್ಕೆ ಪ್ರಧಾನಿ ಮೋದಿ ಅವರು ತಂದರು.

ನವದೆಹಲಿ ಘೋಷಣೆಗೆ ಒಮ್ಮತ: ಈ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಮೋದಿ ಅವರು, ನವದೆಹಲಿ ಘೋಷಣೆಗೆ ವಿಶ್ವ ನಾಯಕರು ಒಮ್ಮತ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಸುದ್ದಿಯಾಗಿದೆ. ಭವಿಷ್ಯದ ಪೀಳಿಗೆಗೆ ಸುಂದರ ಜಗತ್ತನ್ನು ನೀಡುವ ಹೊಣೆ ವರ್ತಮಾನದಲ್ಲಿರುವ ನಮ್ಮಗಳ ಮೇಲಿದೆ. ಎಲ್ಲರ ಏಳಿಗೆ, ಪ್ರಯತ್ನ, ವಿಶ್ವಾಸದಿಂದ ಇದನ್ನು ಸಾಕಾರ ಮಾಡಬೇಕಿದೆ ಎಂದು ತಿಳಿಸಿದರು.

  • India’s G20 Presidency has been the most ambitious in history of G-20. 73 outcomes (lines of effort) and 39 annexed documents (presidency documents, not including Working Group outcome documents). With 112 outcomes and presidency documents, we have more than doubled the… https://t.co/4Q3nGh4do1

    — ANI (@ANI) September 9, 2023 " class="align-text-top noRightClick twitterSection" data=" ">

ಹಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಮಾನವತೆಯನ್ನು ಕೇಂದ್ರೀಕರಿಸಿಕೊಂಡು ಹೊಸ ದಿಕ್ಕಿನೆಡೆಗೆ ಸಾಗಬೇಕಿದೆ. ಕೋವಿಡ್​ನಂತಹ ದೊಡ್ಡ ಸವಾಲುಗಳು ಜಗತ್ತನ್ನೇ ಕಾಡಿವೆ. ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸಿದ್ದರೂ, ಅದು ಉಂಟು ಮಾಡಿದ ಪ್ರಭಾವದಿಂದ ನಾವು ಚೇತರಿಸಿಕೊಂಡಿಲ್ಲ. ಇವೆಲ್ಲವನ್ನೂ ಮೆಟ್ಟಿ ಸಾಗುವ ಚೈತನ್ಯ ನಮ್ಮಲ್ಲಿದೆ ಎಂಬುದನ್ನು ಜಗತ್ತಿಗೆ ಸಾರಬೇಕಿದೆ ಎಂದು ಮೋದಿ ಹೇಳಿದರು.

ಯಾರೂ ದೂರವಿಲ್ಲ, ಹತ್ತಿರವಾಗೋದು ಸುಲಭ: ಪೂರ್ವ- ಪಶ್ಚಿಮ ರಾಷ್ಟ್ರಗಳು, ಉತ್ತರ ದಕ್ಷಿಣ ರಾಷ್ಟ್ರಗಳು ದೂರ ಎಂಬ ಮಾತಿದೆ. ಆದರೆ, ಇವೆಲ್ಲವನ್ನೂ ದೂರ ಮಾಡಿ ಎಲ್ಲರೂ ಒಂದಾಗುವುದು ತುಂಬಾ ಸುಲಭ. ಆಹಾರ, ಭಯೋತ್ಪಾದನೆ ವಿರುದ್ಧ ಕ್ರಮ, ಇಂಧನ, ತೈಲ ಸೇರಿದಂತೆ ಹಲವು ಆಯಾಮಗಳ ಮೂಲಕ ನಾವೆಲ್ಲರೂ ಒಂದಾಗಬಹುದಾಗಿದೆ. ಹೊಸ ಪೀಳಿಗೆಗೆ ಇವೆಲ್ಲವೂ ಸುಲಭವಾಗಿ ಸಿಗಬೇಕಾದಲ್ಲಿ ನಮ್ಮ ಪಾತ್ರ ದೊಡ್ಡದಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

  • #WATCH | G 20 in india | "The declaration the leaders have agreed on today, focuses on promoting strong sustainable, balanced and inclusive growth. It seeks to accelerate progress on SDGs and has come up with an action plan accordingly. It envisages a green development pact for… pic.twitter.com/zreJYDG0a4

ಘೋಷಣೆಗಳ ದಾಖಲೆ: ಭಾರತದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಘೋಷಣೆಗಳ ವಿಚಾರದಲ್ಲಿ ದಾಖಲೆ ಬರೆದಿದೆ. ಒಂದು ಭೂಮಿಗಾಗಿ 73 ಘೋಷಣೆಗಳನ್ನು ಮಾಡಿದೆ. ಅದರಲ್ಲಿ ಎಲ್ಲವನ್ನೂ ನಾಯಕರು ಒಪ್ಪಿಕೊಂಡಿದ್ದು, ಅವೆಲ್ಲವನ್ನೂ ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈವರೆಗೂ ನಡೆದ ಜಿ20 ಶೃಂಗಸಭೆಯಲ್ಲಿ ಇಷ್ಟು ಪ್ರಮಾಣದ ಘೋಷಣೆಗಳನ್ನು ಹೊರಡಿಸಲಾಗಿಲ್ಲ. ಹೀಗಾಗಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶೃಂಗ ಹಲವು ದಾಖಲೆಗಳಿಗೆ ಪಾತ್ರವಾಗಿದೆ.

ಜಿ20 ಸೇರಿದ ಆಫ್ರಿಕಾ ಕೂಟ: ನವದೆಹಲಿಯಲ್ಲಿ ಶೃಂಗಸಭೆಯ ಮೊದಲ ದಿನದ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಫ್ರಿಕನ್ ಯೂನಿಯನ್ ಮುಖ್ಯಸ್ಥರನ್ನು ಜಿ20 ಕಾಯಂ ಸದಸ್ಯರಾಗಿ ಘೋಷಿಸಿದರು. ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು ಜಿ20 ಯ ಕಾಯಂ ಸದಸ್ಯ ಸ್ಥಾನ ಅಲಂಕರಿಸಿದರು.

ಇದನ್ನೂ ಓದಿ: G20 Summit: ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆಸನದ ಮುಂದೆ 'ಭಾರತ' ಕಾರ್ಡ್

Last Updated : Sep 9, 2023, 5:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.