ನವದೆಹಲಿ: 2023ರ ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ನಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ "A+" ಎಂದು ರೇಟ್ ಮಾಡಲಾಗಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. A+ ರೇಟಿಂಗ್ ಪಡೆದ ಮೂರು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಪಟ್ಟಿಯಲ್ಲಿ ಶಕ್ತಿಕಾಂತ ದಾಸ್ ಅವರು ಅಗ್ರಸ್ಥಾನ ಗಳಿಸಿದ್ದಾರೆ ಎಂದು ಆರ್ಬಿಐ ತಿಳಿಸಿದೆ.
ಶಕ್ತಿಕಾಂತ ದಾಸ್ ನಂತರ, ಸ್ವಿಟ್ಜರ್ಲೆಂಡ್ ಗವರ್ನರ್ ಥಾಮಸ್ ಜೆ ಜೋರ್ಡಾನ್ ಮತ್ತು ವಿಯೆಟ್ನಾಂನ ಕೇಂದ್ರ ಬ್ಯಾಂಕ್ ಮುಖ್ಯಸ್ಥ ನ್ಗುಯೆನ್ ಥಿ ಹಾಂಗ್ ಇದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಅವರು ಅಮೆರಿಕ ಮೂಲದ ಗ್ಲೋಬಲ್ ಫೈನಾನ್ಸ್ ಮ್ಯಾಗಜೀನ್‌ನಿಂದ ಜಾಗತಿಕವಾಗಿ ಉನ್ನತ ಕೇಂದ್ರೀಯ ಬ್ಯಾಂಕರ್ ಆಗಿ ಸ್ಥಾನ ಪಡೆದಿದ್ದಾರೆ.
-
Congratulations to RBI Governor Shri Shaktikanta Das. This is a proud moment for India, reflecting our financial leadership on the global stage. His dedication and vision continue to strengthen our nation's growth trajectory. https://t.co/MtdmI8La1T
— Narendra Modi (@narendramodi) September 1, 2023 " class="align-text-top noRightClick twitterSection" data="
">Congratulations to RBI Governor Shri Shaktikanta Das. This is a proud moment for India, reflecting our financial leadership on the global stage. His dedication and vision continue to strengthen our nation's growth trajectory. https://t.co/MtdmI8La1T
— Narendra Modi (@narendramodi) September 1, 2023Congratulations to RBI Governor Shri Shaktikanta Das. This is a proud moment for India, reflecting our financial leadership on the global stage. His dedication and vision continue to strengthen our nation's growth trajectory. https://t.co/MtdmI8La1T
— Narendra Modi (@narendramodi) September 1, 2023
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ: ಎ+ ರೇಟಿಂಗ್ ಪಡೆದ ಮೂರು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಪಟ್ಟಿಯಲ್ಲಿ ದಾಸ್ ಅವರನ್ನು ಅಗ್ರಸ್ಥಾನದಲ್ಲಿ ಗಳಿಸಿದ್ದಾರೆ. ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2023 ರಲ್ಲಿ ಶಕ್ತಿಕಾಂತ ದಾಸ್ ಅವರನ್ನು "A+" ಎಂದು ರೇಟ್ ಗಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಗ್ಲೋಬಲ್ ಫೈನಾನ್ಸ್ ಮ್ಯಾಗಜೀನ್‌ನ ಹೇಳಿಕೆಯ ಪ್ರಕಾರ, ಹಣದುಬ್ಬರ ನಿಯಂತ್ರಣ, ಆರ್ಥಿಕ ಬೆಳವಣಿಗೆಯ ಗುರಿಗಳು, ಕರೆನ್ಸಿ ಸ್ಥಿರತೆ ಮತ್ತು ಬಡ್ಡಿದರ ನಿರ್ವಹಣೆಯಲ್ಲಿ ಯಶಸ್ಸಿಗೆ A ನಿಂದ F ವರೆಗಿನ ಶ್ರೇಣಿಗಳನ್ನು ನೀಡಲಾಗುತ್ತದೆ. ದಾಸ್ ನಂತರ ಸ್ವಿಟ್ಜರ್ಲೆಂಡ್ ಗವರ್ನರ್ ಥಾಮಸ್ ಜೆ ಜೋರ್ಡಾನ್ ಮತ್ತು ವಿಯೆಟ್ನಾಂನ ಕೇಂದ್ರ ಬ್ಯಾಂಕ್ ಮುಖ್ಯಸ್ಥ ನ್ಗುಯೆನ್ ಥಿ ಹಾಂಗ್ ಇದ್ದಾರೆ.
"ಹಣದುಬ್ಬರದ ವಿರುದ್ಧದ ಹೋರಾಟ, ಬೇಡಿಕೆಯ ಕೊರತೆಯಿಂದ ಉತ್ತೇಜಿತವಾಗಿದೆ. ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಲಾಗಿದೆ. ಪ್ರತಿಯೊಬ್ಬರೂ ಸಹಾಯಕ್ಕಾಗಿ ತಮ್ಮ ಕೇಂದ್ರೀಯ ಬ್ಯಾಂಕರ್‌ಗಳ ಕಡೆಗೆ ತಿರುಗಿದ್ದಾರೆ" ಎಂದು ಅದು ಹೇಳಿದೆ. ''ಗ್ಲೋಬಲ್ ಫೈನಾನ್ಸ್‌ನ ವಾರ್ಷಿಕ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ತಂತ್ರಗಳು, ಸ್ವಂತಿಕೆ, ಸೃಜನಶೀಲತೆ ಮತ್ತು ಸ್ಥಿರತೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ'' ಎಂದು ಹೇಳಿದೆ.
ರ್‍ಯಾಂಕ್ ಗಳಿಸಿದ ಗವರ್ನರ್‌ಗಳ ಪಟ್ಟಿ: 'ಎ' ಗ್ರೇಡ್ ಗಳಿಸಿದ ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳಲ್ಲಿ ಬ್ರೆಜಿಲ್‌ನ ರಾಬರ್ಟೊ ಕ್ಯಾಂಪೋಸ್ ನೆಟೊ, ಇಸ್ರೇಲ್‌ನ ಅಮೀರ್ ಯಾರೋನ್, ಮಾರಿಷಸ್‌ನ ಹರ್ವೇಶ್ ಕುಮಾರ್ ಸೀಗೋಲಮ್ ಮತ್ತು ನ್ಯೂಜಿಲ್ಯಾಂಡ್ನ ಆಡ್ರಿಯನ್ ಓರ್ ಸೇರಿದ್ದಾರೆ. ಕೊಲಂಬಿಯಾದ ಲಿಯೊನಾರ್ಡೊ ವಿಲ್ಲಾರ್, ಡೊಮಿನಿಕನ್ ರಿಪಬ್ಲಿಕ್‌ನ ಹೆಕ್ಟರ್ ವಾಲ್ಡೆಜ್ ಅಲ್ಬಿಜು, ಐಸ್‌ಲ್ಯಾಂಡ್‌ನ ಅಸ್ಗೀರ್ ಜಾನ್ಸನ್ ಮತ್ತು ಇಂಡೋನೇಷ್ಯಾದ ಪೆರ್ರಿ ವಾರ್ಜಿಯೊ ಇತರರು 'A-' ಗ್ರೇಡ್ ಗಳಿಸಿದ ಗವರ್ನರ್‌ಗಳು.
ಏನಿದು ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್?: 1994ರಿಂದ ಗ್ಲೋಬಲ್ ಫೈನಾನ್ಸ್‌ನಿಂದ ವಾರ್ಷಿಕವಾಗಿ ಪ್ರಕಟವಾದ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ನಲ್ಲಿ ಯುರೋಪಿಯನ್ ಯೂನಿಯನ್, ಈಸ್ಟರ್ನ್ ಕೆರಿಬಿಯನ್ ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಸೆಂಟ್ರಲ್ ಆಫ್ರಿಕನ್ ಸ್ಟೇಟ್ಸ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ವೆಸ್ಟ್ ಆಫ್ರಿಕನ್ ಸೇರಿದಂತೆ 101 ದೇಶಗಳು, ಪ್ರಾಂತ್ಯಗಳು ಮತ್ತು ಜಿಲ್ಲೆಗಳ ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ಪಟ್ಟಿಯಲ್ಲಿ ಇದ್ದಾರೆ. ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ತಂತ್ರಗಳು, ಸ್ವಂತಿಕೆ, ಸೃಜನಶೀಲತೆ ಮತ್ತು ಸ್ಥಿರತೆಯನ್ನು ಆಧರಿಸಿ ಅವರಿಗೆ ರ್‍ಯಾಂಕ್ ನೀಡಲಾಗುತ್ತದೆ.
ಈ ಹಿಂದೆ, 2023ರ ಜೂನ್‌ನಲ್ಲಿ ಲಂಡನ್‌ನ ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ ವತಿಯಿಂದ ದಾಸ್ ಅವರಿಗೆ 'ವರ್ಷದ ಗವರ್ನರ್' ಪ್ರಶಸ್ತಿ ಲಭಿಸಿತ್ತು.
ಇದನ್ನೂ ಓದಿ: ಆಗಸ್ಟ್ ಜಿಎಸ್ಟಿ ಆದಾಯ 1,59,069 ಕೋಟಿ ರೂ.; ಕಳೆದ ವರ್ಷಕ್ಕಿಂತ ಶೇ 11ರಷ್ಟು ಹೆಚ್ಚಳ