ETV Bharat / business

ಡೇಟಾ ಪ್ರೊಟೆಕ್ಷನ್ ಬಿಲ್ ವಿಳಂಬದಿಂದ ಆರ್ಥಿಕತೆಗೆ ಹಾನಿ: ಸಂಸದೀಯ ಸಮಿತಿ ಕಳವಳ - ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ಡೇಟಾಗೆ

ಡೇಟಾ ಪ್ರೊಟೆಕ್ಷನ್ ಬಿಲ್ ಅನ್ನು ಜಾರಿಗೊಳಿಸುವಲ್ಲಿ ಉಂಟಾಗುತ್ತಿರುವ ವಿಳಂಬದಿಂದ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.

Parliamentary panel expresses concern over delay in data protection bill

author img

By

Published : Apr 2, 2023, 7:53 PM IST

ನವದೆಹಲಿ : ಮತ್ತೊಂದು ಸುತ್ತಿನ ಪರಿಶೀಲನೆಗಾಗಿ ಆಗಸ್ಟ್​ 2022ರಲ್ಲಿ ಕೇಂದ್ರ ಸರ್ಕಾರವು ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2019 (Personal Data Protection Bill 2019)ಯನ್ನು ಹಿಂಪಡೆದ ಕಾರಣದಿಂದ ಅದನ್ನು ಜಾರಿಗೊಳಿಸುವಲ್ಲಿ ವಿಳಂಬವಾಗುತ್ತಿದೆ ಹಾಗೂ ಇದು ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಂಸದೀಯ ಸಮಿತಿಯು ಅಭಿಪ್ರಾಯಪಟ್ಟಿದೆ. ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ಡೇಟಾಗೆ ಪ್ರತ್ಯೇಕ ನೀತಿಯನ್ನು ರೂಪಿಸುವಂತೆ ಅದು ಸರ್ಕಾರವನ್ನು ಕೇಳಿದೆ.

ರಾಜ್ಯಸಭೆಯ ವಾಣಿಜ್ಯ ಸ್ಥಾಯಿ ಸಮಿತಿಯು ಇತ್ತೀಚೆಗೆ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಂಡಿಸಿದ "ಇ-ಕಾಮರ್ಸ್‌ನ ಪ್ರಚಾರ ಮತ್ತು ನಿಯಂತ್ರಣ" ಕುರಿತ ತನ್ನ ವರದಿಯಲ್ಲಿ, ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯ ವಿಳಂಬವನ್ನು ಗಮನಿಸಿದೆ. ಡೇಟಾ ಮಸೂದೆ ಜಾರಿಗೊಳಿಸುವಲ್ಲಿ ಉಂಟಾಗುತ್ತಿರುವ ವಿಳಂಬದಿಂದ ಡೇಟಾ ಒದಗಿಸಿದ ವರ್ಚುವಲ್ ಖಜಾನೆಯನ್ನು ಬಂಡವಾಳ ಮಾಡಿಕೊಳ್ಳಲು ವಿಫಲವಾದ ಕಾರಣ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

ಯಾವುದೇ ಸ್ಪಷ್ಟವಾದ ಡೇಟಾ ರೆಗ್ಯುಲೇಟರಿ ಫ್ರೇಮ್‌ವರ್ಕ್‌ನ ಅನುಪಸ್ಥಿತಿಯು ಹೊಸ ಇಂಧನ ಎಂದು ಪರಿಗಣಿಸಲಾದ ಡೇಟಾದ ಗರಿಷ್ಠ ದುರ್ಬಳಕೆಗೆ ಕಾರಣವಾಗಬಹುದು ಎಂದು ಸಮಿತಿ ತಿಳಿಸಿದೆ. ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ನೇತೃತ್ವದ ಸಮಿತಿಯು, ದೃಢವಾದ ಡೇಟಾ ಸಂರಕ್ಷಣೆ ನೀತಿಯ ತುರ್ತು ಅವಶ್ಯಕತೆ ಇರುವ ಸಮಯದಲ್ಲಿಯೇ ಡೇಟಾ ರಕ್ಷಣೆ ನಿಯಂತ್ರಣ ಇಲ್ಲವಾಗಿದೆ ಎಂದು ಹೇಳಿದೆ.

ಆದ್ದರಿಂದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ಡೇಟಾದ ಮೇಲೆ ಡೇಟಾ ನೀತಿಯನ್ನು ರೂಪಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬೇಕು ಎಂದು ಶಿಫಾರಸು ಮಾಡಿದೆ. ಜಂಟಿ ಸಂಸದೀಯ ಸಮಿತಿಯು ಅದರಲ್ಲಿ 81 ತಿದ್ದುಪಡಿಗಳನ್ನು ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಗಾಗಿ ಸಮಗ್ರ ಕಾನೂನು ಚೌಕಟ್ಟಿನ ಕಡೆಗೆ 12 ಶಿಫಾರಸುಗಳನ್ನು ಮಾಡಿದ ನಂತರ ಸರ್ಕಾರವು ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಸತ್ತಿನಿಂದ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2019 ಅನ್ನು ಹಿಂಪಡೆದಿತ್ತು. ಜಂಟಿ ಸಂಸದೀಯ ಸಮಿತಿಯು ಸೂಚಿಸಿದಂತೆ ಸಮಗ್ರ ಕಾನೂನು ಚೌಕಟ್ಟಿಗೆ ಸರಿಹೊಂದುವ ಶಾಸನವನ್ನು ತರಲು ಮಸೂದೆಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.

ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, 2018 ಅನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿಎನ್ ಶ್ರೀಕೃಷ್ಣ ನೇತೃತ್ವದ ಉನ್ನತ ಮಟ್ಟದ ತಜ್ಞರ ತಂಡ ಸಿದ್ಧಪಡಿಸಿದೆ. ಮಸೂದೆಯನ್ನು 2019 ರಲ್ಲಿ ಪ್ರತಂ ಬಾರಿಗೆ ಸಂಸತ್ತಿಗೆ ತರಲಾಯಿತು ಮತ್ತು ಆ ಸಮಯದಲ್ಲಿ ಅದನ್ನು ಪರೀಕ್ಷೆಗಾಗಿ ಜೆಸಿಪಿಗೆ ಒಪ್ಪಿಸಲಾಯಿತು. ಆರಂಭದಲ್ಲಿ ಬಿಜೆಪಿ ಸಂಸದೆ (ಎಂಪಿ) ಮೀನಾಕ್ಷಿ ಲೇಖಿ ಜೆಸಿಪಿ ಅಧ್ಯಕ್ಷರಾಗಿದ್ದರು. ಸಂಸದೀಯ ಸಮಿತಿಗಳ ಅಧ್ಯಕ್ಷರಾಗಲು ಮಂತ್ರಿಗಳಿಗೆ ಅವಕಾಶವಿಲ್ಲದ ಕಾರಣ ಅವರ ಸ್ಥಾನಕ್ಕೆ ಪಿಪಿ ಚೌಧರಿ ಅವರನ್ನು ನೇಮಿಸಲಾಯಿತು. ಡೇಟಾ ಗೌಪ್ಯತೆ/ಸಂರಕ್ಷಣಾ ಮಸೂದೆಯು ಭಾರತದೊಳಗೆ ವ್ಯಕ್ತಿಗಳ ಡೇಟಾವನ್ನು ವಿವಿಧ ಕಂಪನಿಗಳು ಮತ್ತು ಸಂಸ್ಥೆಗಳು ಹೇಗೆ ಬಳಸುತ್ತವೆ ಎಂಬುದನ್ನು ನಿಯಂತ್ರಿಸುವ ಮಹತ್ವದ ಶಾಸನವಾಗಿದೆ.

ಇದನ್ನೂ ಓದಿ : 5 ರೂಪಾಯಿ ಕೇಳಿದ್ದಕ್ಕೆ ಬಾಲಕನ ಕೊಲೆ.. ಹುಬ್ಬಳ್ಳಿಯಲ್ಲಿ ಸೈಕೋ ರವಿ ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.