ETV Bharat / business

ಕಚ್ಚಾ ತೈಲದ ಹೊಸ ಸರಾಸರಿ ಬೆಲೆ 75 ರಿಂದ 80 ಡಾಲರ್: ವಿಶ್ಲೇಷಣಾ ವರದಿ

author img

By

Published : Apr 21, 2023, 5:04 PM IST

ವಿಶ್ವದಲ್ಲಿ ಕಚ್ಚಾತೈಲದ ಹೊಸ ಸರಾಸರಿ ಬೆಲೆಗಳು ಸುಮಾರು 75 ರಿಂದ 80 ಡಾಲರ್ ಆಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ಸಮೀಕ್ಷಕ ಸಂಸ್ಥೆ ವರದಿ ತಿಳಿಸಿದೆ.

Crude Oil News
Crude Oil News

ನವದೆಹಲಿ: ಬ್ರೆಂಟ್ ಕಚ್ಚಾ ತೈಲದ ಹೊಸ ಸರಾಸರಿ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 75 ರಿಂದ 80 ಡಾಲರ್‌ಗಳಾಗಬಹುದು ಎಂದು ಜೆಎಂ ಫೈನಾನ್ಷಿಯಲ್ ಇನ್‌ಸ್ಟಿಟ್ಯೂಷನಲ್ ಸೆಕ್ಯುರಿಟೀಸ್ ವರದಿಯಲ್ಲಿ ತಿಳಿಸಿದೆ. ಈ ವರ್ಷದ ಮೇ ತಿಂಗಳಿನಿಂದ ವರ್ಷಾಂತ್ಯದವರೆಗೆ ಓಪೆಕ್​ ಪ್ಲಸ್​ (OPEC ಪ್ಲಸ್‌) ಸ್ವಯಂಪ್ರೇರಿತವಾಗಿ ಕಚ್ಚಾ ತೈಲ ಉತ್ಪಾದನೆಯಲ್ಲಿ ಕಡಿತ ಮಾಡಲಿದೆ ಎಂದು ಇಂಟರ್​ ನ್ಯಾಷನಲ್ ಎನರ್ಜಿ ಏಜೆನ್ಸಿ (International Energy Agency -IEA) ನಿರೀಕ್ಷಿಸಿದೆ.

ವರದಿಯ ಪ್ರಕಾರ, ಓಪೆಕ್ ಪ್ಲಸ್ ಉತ್ಪಾದನೆ ಕಡಿತದ ಕಾರಣದಿಂದ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬಿಬಿಎಲ್‌ಗೆ 75 ರಿಂದ 80 ಡಾಲರ್​ಗಳಾಗಬಹುದು. ಇದು ಸೌದಿ ಅರೇಬಿಯಾ ನಿರೀಕ್ಷಿಸುತ್ತಿರುವ ಸೂಕ್ತವಾದ ಬೆಲೆಯಾಗಿದೆ.

ತೈಲ ಬೆಲೆ ನಿರ್ಧರಿಸುವ ಅಂಶಗಳು: ಹಲವು ಕಾರಣಗಳಿಂದಾಗಿ ಕಳೆದ 2 ರಿಂದ 3 ವರ್ಷಗಳಲ್ಲಿ ಓಪೆಕ್ ಪ್ಲಸ್‌ನ ಬೆಲೆ ಸಾಮರ್ಥ್ಯವು ಬಲಗೊಂಡಿದೆ. ಅಮೆರಿಕದ ತೈಲ ಉತ್ಪಾದನೆಯು 12.3 MMBPD ಯಲ್ಲಿ ಇಳಿಕೆ ಮುಂದುವರೆಸಿದೆ. ಅದರ ಪೂರ್ವ ಕೋವಿಡ್ ಗರಿಷ್ಠ 13.1 MMBPD ಆಗಿತ್ತು. ಕೋವಿಡ್ ನಂತರದ ಜಾಗತಿಕ ತೈಲ ಬೇಡಿಕೆಯಲ್ಲಿ ಉಂಟಾದ ಶೇಕಡಾ 10 ರಷ್ಟು ಕುಸಿತವನ್ನು ಸರಿದೂಗಿಸಲು ಓಪೆಕ್ ಪ್ಲಸ್ 2020 ರ ಆರಂಭಿಕ ಕ್ಯಾಲೆಂಡರ್ ವರ್ಷದಲ್ಲಿ ಉತ್ಪಾದನೆಯನ್ನು 10 mmbpd ರಷ್ಟು ಕಡಿತಗೊಳಿಸುವ ಸಾಮರ್ಥ್ಯವನ್ನು ತೋರಿಸಿದೆ.

ರಷ್ಯಾದ ತೈಲ ರಫ್ತು ಹೆಚ್ಚಳ: ಓಪೆಕ್ ಪ್ಲಸ್ ಇನ್ನೂ 4 ರಿಂದ 5 MMBPD ಯಿಂದ ಉತ್ಪಾದನೆಯನ್ನು ಕಡಿತಗೊಳಿಸುವ ಅವಕಾಶವನ್ನು ಹೊಂದಿದೆ. ತೈಲ ಉತ್ಪನ್ನ ರಫ್ತು ಹೆಚ್ಚಳದಿಂದಾಗಿ ಮಾರ್ಚ್ 23 ರಲ್ಲಿ ರಷ್ಯಾದ ತೈಲ ರಫ್ತು 0.6 mmbpd ಯಿಂದ 8.1 mmbpd ಗೆ ಹೆಚ್ಚಾಗಿದೆ. ರಷ್ಯಾದ ತೈಲ ರಫ್ತುಗಳು ಮಾರ್ಚ್ 23 ರಲ್ಲಿ 0.6 mmbpd ಯಿಂದ 8.1 mmbpd ಗೆ ಏರಿಕೆಯಾಗಿದೆ.

ಪಾಕಿಸ್ತಾನಕ್ಕೆ ರಷ್ಯಾ ತೈಲ ಪೂರೈಕೆ: ಇಸ್ಲಾಮಾಬಾದ್ ಮತ್ತು ಮಾಸ್ಕೋ ನಡುವೆ ನಡೆದ ಹೊಸ ಒಪ್ಪಂದದ ಅಡಿ ಪಾಕಿಸ್ತಾನವು ರಷ್ಯಾದ ರಿಯಾಯಿತಿ ದರದ ಕಚ್ಚಾ ತೈಲ ಖರೀದಿಗೆ ತನ್ನ ಮೊದಲ ಆರ್ಡರ್ ನೀಡಿದೆ ಎಂದು ಪಾಕಿಸ್ತಾನದ ಪೆಟ್ರೋಲಿಯಂ ಸಚಿವರು ಹೇಳಿದ್ದಾರೆ. ಮೇ ತಿಂಗಳಲ್ಲಿ ಕರಾಚಿ ಬಂದರಿನಲ್ಲಿ ಒಂದು ಕಾರ್ಗೊ ಬಂದಿಳಿಯಲಿದೆ. ಪಾಕಿಸ್ತಾನವು ರಷ್ಯಾದ ತೈಲ ಖರೀದಿಗೆ ಮುಂದಾಗಿರುವುದರಿಂದ ರಷ್ಯಾಗೆ ಹೊಸ ಗ್ರಾಹಕನೊಬ್ಬ ಸಿಕ್ಕಂತಾಗಿದೆ. ಈಗಾಗಲೇ ರಷ್ಯಾ ಭಾರತ ಮತ್ತು ಚೀನಾಕ್ಕೆ ಗಮನಾರ್ಹ ಪ್ರಮಾಣದಲ್ಲಿ ಕಚ್ಚಾತೈಲ ಮಾರಾಟ ಮಾಡುತ್ತಿದೆ. ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ತೈಲದ ಮೇಲೆ ನಿರ್ಬಂಧ ಹೇರಿದ್ದವು. ಆದರೆ ವಿಶ್ವದ ಇತರ ಹಲವಾರು ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸಲು ಮುಂದಾಗಿವೆ.

ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನದ ವಿದೇಶಿ ಮೀಸಲು ನಿಧಿ ಪಾತಾಳಕ್ಕೆ ಕುಸಿದಿದೆ. ಇಂಥ ಸಮಯದಲ್ಲಿ ರಷ್ಯಾದಿಂದ ಆಗಮಿಸುತ್ತಿರುವ ರಿಯಾಯಿತಿ ದರದ ಕಚ್ಚಾ ತೈಲ ಪಾಕಿಸ್ತಾನಕ್ಕೆ ಸಾಕಷ್ಟು ನಿರಾಳತೆ ಮೂಡಿಸಿದೆ. ಒಪ್ಪಂದದ ಪ್ರಕಾರ ಪಾಕಿಸ್ತಾನವು ರಷ್ಯಾದಿಂದ ಕಚ್ಚಾ ತೈಲವನ್ನು ಮಾತ್ರ ಖರೀದಿಸಲಿದೆ. ಸಂಸ್ಕರಿಸಿದ ತೈಲಗಳನ್ನು ರಷ್ಯಾ ಪೂರೈಸುತ್ತಿಲ್ಲ. ಮೊದಲ ವಹಿವಾಟು ಸುಗಮವಾಗಿ ನಡೆದರೆ ಆಮದುಗಳು ದಿನಕ್ಕೆ 1 ಲಕ್ಷ ಬ್ಯಾರೆಲ್‌ಗಳನ್ನು ತಲುಪುವ ನಿರೀಕ್ಷೆಯಿದೆ ಎಂದು ಸಚಿವ ಮುಸಾದಿಕ್ ಮಲಿಕ್ ತಿಳಿಸಿದರು.

ಇದನ್ನೂ ಓದಿ : ಉದ್ಯೋಗಿಗಳ ಯೋಗಕ್ಷೇಮಕ್ಕೆ 600 ಕೋಟಿ ಖರ್ಚು ಮಾಡಲಿದೆ PwC India!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.