ETV Bharat / business

ಸಾಲ ವಂಚನೆಗಳಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳುವುದು?.. ಇಲ್ಲಿದೆ ಮಾಹಿತಿ

ಇತರ ವ್ಯಕ್ತಿಗಳು ತೆಗೆದುಕೊಂಡ ಸಾಲಕ್ಕೆ ಶ್ಯೂರಿಟಿ(ಸಹಿ) ನೀಡಿದಾಗ, ಆ ಅಕೌಂಟ್​ಗೆ ನಿಮ್ಮ ಪಾನ್​ ಲಿಂಕ್​ ಆಗಿದ್ದಲ್ಲಿ, ಸಾಲ ಪಡೆದವರು ಬಾಕಿಯನ್ನು ಪಾವತಿಸದಿದ್ದರೆ ಅದನ್ನು ನಿಮ್ಮ ಕ್ರೆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಈ ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿತಗೊಳ್ಳುತ್ತವೆ. ಆದ್ದರಿಂದ, ಆಗಾಗ ನಾವು ಕ್ರೆಡಿಟ್ ಸ್ಕೋರ್​​ಗಳನ್ನು ಚೆಕ್​ ಮಾಡುತ್ತಿರಬೇಕು.

loan-frauds
ಸಾಲ ವಂಚನೆ
author img

By

Published : Apr 16, 2022, 1:05 PM IST

ಹೈದರಾಬಾದ್: ನೀವು ಬ್ಯಾಂಕ್​ನಲ್ಲಿ ಸಾಲ ಪಡೆದಿರುವುದಿಲ್ಲ. ಸಾಲಕ್ಕಾಗಿ ಬ್ಯಾಂಕ್​ಗೆ ಎಡತಾಕಿಯೂ ಇರುವುದಲ್ಲ. ಹೀಗಿದ್ದರೂ ನಿಮಗೆ ಸಾಲ ಮರುಪಾವತಿ ಮಾಡಲು ಬ್ಯಾಂಕ್​ನಿಂದ ನೋಟಿಸ್​ ರವಾನೆಯಾಗುತ್ತಿರುತ್ತದೆ. ಇದಕ್ಕೆ ಕಾರಣ ನಿಮ್ಮ ದಾಖಲೆಗಳನ್ನು ಬಳಸಿಕೊಂಡು ಬೇರೆ ಯಾರೋ ಸಾಲ ಪಡೆದಿರುತ್ತಾರೆ. ನಿಮ್ಮ ತಪ್ಪು ಇಲ್ಲದಿದ್ದರೂ ನೀವು ಸಾಲದ ಸುಳಿಯಲ್ಲಿ ಸಿಲುಕಿರುತ್ತೀರಿ. ಇಂತಹ ಪರಿಸ್ಥಿತಿ ಎದುರಾದಾಗ ಏನು ಮಾಡಬೇಕು. ತೆಗೆದುಕೊಳ್ಳದ ಸಾಲಕ್ಕೆ ಸುಸ್ತಿದಾರನಾಗುವುದನ್ನು ತಡೆಯುವುದು ಹೇಗೆ. ಈ ಬಗ್ಗೆ ಬ್ಯಾಂಕ್ ಬಜಾರ್‌ನ ಸಿಇಒ ಆದಿಲ್ ಶೆಟ್ಟಿ ಅವರ ಬಳಿ ಇದೆ ಉತ್ತರ. ಮುಂದೆ ಓದಿ..

ಪಾನ್​ ಮತ್ತು ಆಧಾರ್ ಕಾರ್ಡ್‌ಗಳ ದುರ್ಬಳಕೆ: ಕೆಲವೊಮ್ಮೆ ನಿಮ್ಮ ಪಾನ್​ ಸಂಖ್ಯೆ ಬೇರೆಯವರ ಸಾಲದ ಖಾತೆಗೆ ಲಿಂಕ್ ಆಗಿರುತ್ತದೆ. ಅಂದರೆ ಜಾಯಿಂಟ್​ ಅಕೌಂಟ್​ ಮಾಡಿಸಿದಾಗ ಇಬ್ಬರೂ ಒಟ್ಟಿಗೆ ಸಾಲ ಪಡೆದಿರುತ್ತಾರೆ. ಈ ವೇಳೆ ಸಾಲದ ಹಣ ಒಬ್ಬರಿಗೆ ಹೋಗಿರುತ್ತದೆ ಎಂದುಕೊಳ್ಳಿ. ಆಗ ಸಾಲದ ಮರುಪಾವತಿ ವೇಲೆ ಕಂತುಗಳನ್ನು ಸರಿಯಾಗಿ ಪಾವತಿಸದಿದ್ದರೆ ಅದು ಎರಡೂ ಖಾತೆಗಳ ಕ್ರೆಡಿಟ್ ಸ್ಕೋರ್‌ಗಳ ಮೇಲೆ ಪರಿಣಾಮ ಬೀರುತ್ತದೆ.

ಸಾಲ ವಂಚನೆಗಳಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು?

ಅಲ್ಲದೇ, ಇತರ ವ್ಯಕ್ತಿಗಳು ತೆಗೆದುಕೊಂಡ ಸಾಲಕ್ಕೆ ಶ್ಯೂರಿಟಿ(ಸಹಿ) ನೀಡಿದಾಗ ಆ ಅಕೌಂಟ್​ಗೆ ನಿಮ್ಮ ಪಾನ್​ ಲಿಂಕ್​ ಆಗಿದ್ದಲ್ಲಿ, ಸಾಲ ಪಡೆದವರು ಬಾಕಿಯನ್ನು ಪಾವತಿಸದಿದ್ದರೆ ಅದನ್ನು ನಿಮ್ಮ ಕ್ರೆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಈ ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿತಗೊಳ್ಳುತ್ತವೆ. ಆದ್ದರಿಂದ, ಆಗಾಗ್ಗೆ ನಾವು ಕ್ರೆಡಿಟ್ ಸ್ಕೋರ್​​ಗಳನ್ನು ಚೆಕ್​ ಮಾಡುತ್ತಿರಬೇಕು.

ಕೆಲವು ಸಂದರ್ಭಗಳಲ್ಲಿ ನಿಮ್ಮ ಅರವಿಗೆ ಬಾರದೇ ಇತರ ಜನರು ಅನಧಿಕೃತವಾಗಿ ನಿಮ್ಮ ಪ್ಯಾನ್ ಅನ್ನು ಬಳಸಲು ಸಾಧ್ಯವಿದೆ. ಸಾಲ ನೀಡುವ ಸಂಸ್ಥೆಗಳು ಪಾನ್​ ವಿವರಗಳನ್ನು ಪರಿಶೀಲಿಸದೆ ಸಾಲ ನೀಡುತ್ತವೆ. ಈ ವೇಳೆ ಸಾಲ ಪಡೆದವರು ಬೇರೆಯಾದರೆ, ದಾಖಲೆ ಇನ್ನೊಬ್ಬರ ಹೆಸರಲ್ಲಿರುತ್ತದೆ. ಸಾಲ ಪಡದುಕೊಳ್ಳದೇ ಸುಸ್ತಿದಾರನಾಗುವ ಮೂಲಕ ಪರದಾಡಬೇಕಾಗುತ್ತದೆ.

ಸಿಐಬಿಎಲ್​ ಸ್ಕೋರ್ ನಿಯಮಿತವಾಗಿ ಪರಿಶೀಲಿಸಿ: ನೀವು ಕ್ರೆಡಿಟ್ ಅಕೌಂಟ್​ ಚೆಕ್​ ಮಾಡದ ಹೊರತು ನಿಮ್ಮ ಹೆಸರಿನಲ್ಲಿ ಯಾರಾದರೂ ಮೋಸದಿಂದ ಸಾಲವನ್ನು ಪಡೆದುಕೊಂಡಿದ್ದಾರೆ ಎಂಬ ಅಂಶ ನಿಮಗೆ ತಿಳಿಯದು. ಆದ್ದರಿಂದ, ನಿಮ್ಮ ಅಕೌಂಟ್​ನಲ್ಲಿ ಕ್ರೆಡಿಟ್​ ಆದ ಬಗ್ಗೆ ಆಗಾಗ್ಗೆ ಪರಿಶೀಲನೆ ಮಾಡುತ್ತಿರಬೇಕು. ಅದರಲ್ಲೂ ಸಾಲ ಪಡೆದುಕೊಂಡಿರುವವರು ಹೆಚ್ಚಿನ ನಿಗಾ ವಹಿಸಬೇಕು.

ಕನಿಷ್ಠ ಪಕ್ಷ ತಿಂಗಳಿಗೊಮ್ಮೆಯಾದರೂ ಕ್ರೆಡಿಟ್​ ಡೀಟೇಲ್ಸ್​ ಚೆಕ್​ ಮಾಡಬೇಕು. ಅನೇಕ ಕಂಪನಿಗಳು ಈಗ ಕ್ರೆಡಿಟ್ ಡೀಟೇಲ್ಸ್​ಗಳನ್ನು ಉಚಿತವಾಗಿ ನೀಡುತ್ತವೆ. ನಿಯಮಿತವಾಗಿ ಪರಿಶೀಲಿಸುವುದು ನೀವು ಮೋಸ ಹೋಗುವುದನ್ನು ತಪ್ಪಿಸಬಹುದು. ಒಂದು ವೇಳೆ ಏನಾದರೂ ಸಮಸ್ಯೆಯಾದಲ್ಲಿ ತಕ್ಷಣವೇ ಸರಿಪಡಿಸಿಕೊಳ್ಳಬಹುದು.

ಆನ್​ಲೈನ್​ನಲ್ಲೂ ದೂರು ಸಲ್ಲಿಸಿ: ಒಂದು ವೇಳೆ ನಿಮ್ಮ ಪಾನ್​ ಅನ್ನು ಬೇರೆಯವರು ಬಳಸಿಕೊಂಡಿದ್ದಾರೆ ಎಂದು ಗೊತ್ತಾದಲ್ಲಿ, ತಕ್ಷಣವೇ ನೀವು ಈ ಬಗ್ಗೆ ದೂರು ನೀಡಬಹುದು. ಸಾಲ ನೀಡುವ ಸಂಸ್ಥೆಯು ನಿಮ್ಮ ದೂರಿಗೆ ಪ್ರತಿಕ್ರಿಯಿಸಬೇಕು. ದೂರುಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ತಪ್ಪಾಗಿ ಅಥವಾ ಮೋಸದಿಂದ ನಿಮ್ಮ ಪಾನ್​ ಸಾಲದ ಅಕೌಂಟ್​ಗೆ ಲಿಂಕ್​ ಆಗಿದ್ದನ್ನು ತೆಗೆದುಹಾಕಲು ಸಾಲ ನೀಡಿದ ಸಂಸ್ಥೆ ನಿಮ್ಮ ದೂರನ್ನು ಪರಿಗಣಿಸದೇ ಇರಬಹುದು. ಈ ವೇಳೆ ನೀವು ಸಾಲ ಪಡೆದಿಲ್ಲ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ.

ನಿಮ್ಮ ಕ್ರೆಡಿಟ್​ ಸ್ಕೋರ್​ಗಳು ಕಡಿತಗೊಂಡಲ್ಲಿ ಮುಂದೆ ಹೊಸದಾಗಿ ಸಾಲ ಪಡೆದುಕೊಳ್ಳುವಾಗ ಕಷ್ಟವಾಗುತ್ತದೆ. ಅಥವಾದ ಬಡ್ಡಿದರವನ್ನು ಹೆಚ್ಚು ವಿಧಿಸಬಹುದು. ಕೆಲವೊಮ್ಮೆ ಸಾಲದ ಅರ್ಜಿಯೇ ತಿರಸ್ಕಾರವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಜಾಗರೂಕರಾಗಿ ಕಾಲಕಾಲಕ್ಕೆ ನಿಮ್ಮ ಹಣಕಾಸಿನ ವಿವರಗಳನ್ನು ಗಮನಿಸುವುದು ಈ ಸಮಸ್ಯೆಗೆ ಇರುವ ಪರಿಹಾರವಾಗಿದೆ ಎಂದು ಬ್ಯಾಂಕ್ ಬಜಾರ್‌ನ ಸಿಇಒ ಆದಿಲ್ ಶೆಟ್ಟಿ ಹೇಳುತ್ತಾರೆ.

ಓದಿ: ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಸ್ವಲ್ಪ ಮಟ್ಟದ ವ್ಯತ್ಯಾಸ.. ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.