ETV Bharat / business

ಜನಸಾಮಾನ್ಯರ ಜೇಬಿಗೆ ಭಾರವಾಗುತ್ತಿದೆ ಆರೋಗ್ಯ ವಿಮೆ: ಕಾರಣವೇನು?

ಕೋವಿಡ್​ ನಂತರ ವಿಮಾ ಕಂಪನಿಗಳು ಲಾಭ ಕಂಡುಕೊಳ್ಳವ ನಿರೀಕ್ಷೆಯಲ್ಲಿದ್ದವು. ಆದ್ರೆ ಲೆಕ್ಕಾಚಾರ ತಲೆಕೆಳಗಾಗಿದೆ.

author img

By

Published : Mar 10, 2023, 10:03 AM IST

health insurance is more expensive  health insurance policy hike  health insurance need to family  ಮತ್ತಷ್ಟು ಹೊರೆಯಾಲಿದೆ ಆರೋಗ್ಯ ವಿಮೆಗಳ ಮೊತ್ತ  ಕೋವಿಡ್​ ನಂತರ ವಿಮಾ ಕಂಪನಿಗಳು ಲಾಭ  ಲಾಭದ ಆದಾಯಗಳನ್ನು ಕಂಡುಕೊಳ್ಳವ ನಿರೀಕ್ಷೆ  ಪಾಲಿಸಿಗಳ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಮುಂದಾಗಿವೆ  ಆರೋಗ್ಯ ವಿಮೆಗಳ ಮೊತ್ತ  ಆರೋಗ್ಯ ವಿಮಾ ಪಾಲಿಸಿಗಳು ಮತ್ತಷ್ಟು ಹೊರೆ  ವಿಮಾ ಕಂಪನಿಗಳು ಪಾಲಿಸಿಗಳ ಮೇಲಿನ ಪ್ರೀಮಿಯಂ ಮೊತ್ತ  ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಿದ ಕಂಪನಿಗಳು
ಮತ್ತಷ್ಟು ಹೊರೆಯಾಲಿದೆ ಆರೋಗ್ಯ ವಿಮೆಗಳ ಮೊತ್ತ..!

ಆರೋಗ್ಯ ವಿಮಾ ಪಾಲಿಸಿಗಳು ದುಬಾರಿಯಾಗುತ್ತಿವೆ. ಸಾಮಾನ್ಯ ವಿಮಾ ಕಂಪನಿಗಳು ಪಾಲಿಸಿಗಳ ಮೇಲಿನ ಪ್ರೀಮಿಯಂ ಮೊತ್ತ ಹೆಚ್ಚಿಸಲು ಸಜ್ಜಾಗುತ್ತಿವೆ ಎಂದು ಮೂಲಗಳು ತಿಳಿಸಿವೆ. ಕೋವಿಡೋತ್ತರ ಕಾಲದಲ್ಲಿ ಆರೋಗ್ಯ ವಿಮೆ ಕ್ಲೈಮ್‌ಗಳ ಸಂಖ್ಯೆ ಮತ್ತು ಪ್ರಮಾಣ ಹೆಚ್ಚಿದೆ. ಇದರಿಂದಾಗಿ ವಿಮಾ ಕಂಪನಿಗಳ ಲಾಭದಲ್ಲಿ ಇಳಿಕೆಯಾಗಿದೆ. ಆದ್ದರಿಂದ ಪ್ರೀಮಿಯಂ ಮೊತ್ತ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಕಳೆದ ವರ್ಷ 30% ವರೆಗೆ ಪ್ರೀಮಿಯಂ ಮೊತ್ತ ಹೆಚ್ಚಿಸಿದ ಕಂಪನಿಗಳು ಈ ವರ್ಷ ಅದನ್ನು ಮತ್ತೆ ಏರಿಸಿವೆ. ಈಗಾಗಲೇ ಕೆಲವು ವಿಮಾ ಕಂಪನಿಗಳು ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಶೇ 15-20 ರಷ್ಟು ಜಾಸ್ತಿ ಮಾಡಿವೆ. ಮೂಲಗಳ ಪ್ರಕಾರ, ಇನ್ನೂ ಕೆಲವು ಕಂಪನಿಗಳು ಇದೇ ಹಾದಿ ಅನುಸರಿಸಲಿವೆ.

ಕಾರಣವೇನು?: ಕೋವಿಡ್ ಸಾಂಕ್ರಾಮಿಕ ರೋಗ ತೀವ್ರವಾಗಿದ್ದಾಗ ಆಸ್ಪತ್ರೆಗಳು ಕಿಕ್ಕಿರಿದು ತುಂಬಿದ್ದವು. ಆರಂಭದಲ್ಲಿ ವಿಮಾ ಕಂಪನಿಗಳು ಕೋವಿಡ್ ಚಿಕಿತ್ಸೆಗಳಿಗೆ ಕ್ಲೈಮ್‌ಗಳನ್ನು ನೀಡುತ್ತಿರಲಿಲ್ಲ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(IRDAI) ಮಧ್ಯಪ್ರವೇಶಿಸಿ ಕೊರೊನಾ ಸಂತ್ರಸ್ತರಿಗೆ ವಿಮಾ ಕಂಪನಿಗಳು ಕ್ಲೈಮ್‌ಗಳನ್ನು ಪಾವತಿಸಬೇಕು ಎಂದು ಸ್ಪಷ್ಟಪಡಿಸಿದ್ದು, ಹೆಚ್ಚಿನ ಸಂಖ್ಯೆಯ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಬೇಕಾಯಿತು. ಹೀಗಾಗಿ ವಿಮಾ ಕಂಪನಿಗಳಿಗೆ ಹೆಚ್ಚಿನ ಹೊರೆಗಿದೆ.

ಕೋವಿಡ್ ಪರಿಣಾಮ ಮುಗಿಯುತ್ತಿದ್ದಂತೆ ಈ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ, ಸಾಮಾನ್ಯ ಸ್ಥಿತಿಗೆ ಮರಳಲು ಮತ್ತು ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಿದ್ದ ವಿಮಾ ಕಂಪನಿಗಳು ನಿರಾಶೆಗೊಂಡವು. ಆದರೆ ಕೋವಿಡ್ ನಂತರ ಅನೇಕ ರೋಗಗಳು ಜನರನ್ನು ಬಾಧಿಸುತ್ತಿವೆ. ಹೃದ್ರೋಗ, ಉಸಿರಾಟ ಸಂಬಂಧಿ ಕಾಯಿಲೆಗಳು, ಡೆಂಗ್ಯೂ ಜೊತೆಗೆ ಹೊಟ್ಟೆನೋವು ಮತ್ತು ವಿವಿಧ ರೀತಿಯ ಜ್ವರಗಳು ಹೆಚ್ಚಿವೆ. ಇದರಿಂದ ಹೆಚ್ಚಿನ ವೈದ್ಯರ ಸಲಹೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಆ ಮಟ್ಟಿಗೆ ಕ್ಲೈಮ್​ಗಳ ಸಂಖ್ಯೆಯೇ ಏರಿದೆ. ಪೂರ್ವ ಕೋವಿಡ್ ಪರಿಸ್ಥಿತಿಯು ಬರದಿದ್ದರೂ ಕ್ಲೈಮ್‌ಗಳು ಮತ್ತು ಪಾವತಿಗಳು ಹೆಚ್ಚಿವೆ. ಹೀಗಾಗಿ ವಿಮಾ ಕಂಪನಿಗಳು ಆದಾಯಕ್ಕಾಗಿ ಪರ್ಯಾಯ ಮಾರ್ಗ ಹುಡುಕುತ್ತಿವೆ. ಅದಕ್ಕಾಗಿಯೇ ಪ್ರೀಮಿಯಂ ಮೊತ್ತ ಹೆಚ್ಚಿಸುತ್ತಿವೆ ಎಂದು ಕಂಪನಿಗಳು ಹೇಳುತ್ತವೆ.

ಆರೋಗ್ಯ ಹಣದುಬ್ಬರ: ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯ ಶುಲ್ಕ, ಕೊಠಡಿ ಬಾಡಿಗೆ, ಚಿಕಿತ್ಸೆ ಮತ್ತು ಔಷಧಿಗಳ ವೆಚ್ಚ ಗಗನ ಮುಖಿಯಾಗಿವೆ. ಹಲವು ಆಸ್ಪತ್ರೆಗಳು ಕೊಠಡಿ ಬಾಡಿಗೆಯನ್ನು ಶೇ.3-5ರಷ್ಟು ಏರಿಸಿವೆ. ಈ ವೆಚ್ಚದ ಹೆಚ್ಚಳಕ್ಕೆ ಅನುಗುಣವಾಗಿ ಸರಾಸರಿ ಕ್ಲೈಮ್ ಮೊತ್ತಗಳು ಏರಿವೆ. ಆರೋಗ್ಯ ವಲಯ ಇದನ್ನು 'ಆರೋಗ್ಯ ಹಣದುಬ್ಬರ' ಎಂದು ಹೇಳುತ್ತಿದೆ. ಇದರಿಂದಾಗಿ ಹೆಚ್ಚಿನ ಪ್ರೀಮಿಯಂ ವಿಧಿಸಬೇಕಾಗುತ್ತದೆ ಎಂದು ಕಂಪನಿಗಳು ತಿಳಿಸಿವೆ.

ಅನೇಕ ಪಾಲಿಸಿದಾರರು ಹಣಕಾಸು ವರ್ಷದ ಕೊನೆಯ ತಿಂಗಳು ಅಥವಾ ಹಣಕಾಸು ವರ್ಷದ ಆರಂಭಿಕ ದಿನಗಳಲ್ಲಿ ಆರೋಗ್ಯ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಾರೆ. ಅಂದರೆ ಮಾರ್ಚ್‌ನಿಂದ ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಪಾಲಿಸಿಗಳ ಹೆಚ್ಚಿನ ನವೀಕರಣ ಇರುತ್ತದೆ. ವಿಮಾ ಕಂಪನಿಗಳು ಅದಕ್ಕೆ ಅನುಗುಣವಾಗಿ ಪ್ರೀಮಿಯಂಗಳನ್ನು ಹೊಂದಿಸುತ್ತವೆ. ಐಸಿಐಸಿಐ ಲೊಂಬಾರ್ಡ್, ಎಚ್‌ಡಿಎಫ್‌ಸಿ ಎರ್ಗೊ, ಕೇರ್ ಹೆಲ್ತ್ ಇನ್ಶೂರೆನ್ಸ್, ಆದಿತ್ಯ ಬಿರ್ಲಾ, ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಮತ್ತು ಇತರ ಕಂಪನಿಗಳು ತಮ್ಮ ಪ್ರೀಮಿಯಂಗಳನ್ನು ಪರಿಷ್ಕರಿಸಿವೆ ಎಂದು ಉದ್ಯಮದ ಮೂಲಗಳು ಹೇಳುತ್ತವೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ಇತರ ವಿಮಾ ಕಂಪನಿಗಳು ಸಹ ಅದೇ ಹಾದಿಯಲ್ಲಿವೆ.

ಇದನ್ನೂ ಓದಿ: ಪಾಲಿಸಿ ವಿಚಾರ.. ಎಲ್ಲಾ ವೆಚ್ಚಗಳನ್ನು ಭರಿಸುವಂತಹ ಆರೋಗ್ಯ ವಿಮೆಗೆ ಇರಲಿ ನಿಮ್ಮ ಆದ್ಯತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.