ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ಏರಿಕೆ ಮತ್ತು ಹೊಸ ವಿದೇಶಿ ಬಂಡವಾಳದ ಒಳಹರಿವಿನಿಂದ ಪ್ರೇರಿತವಾಗಿ ಭಾರತದ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಹೊಸ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಟೆಲಿಕಾಂ ಷೇರುಗಳ ಖರೀದಿ ಮಾತ್ರವದಲ್ಲದೆ ಆಟೋ ಮತ್ತು ಟೆಕ್ ಷೇರುಗಳಲ್ಲಿನ ಖರೀದಿಯು ಕೂಡ ಮಾರುಕಟ್ಟೆಗಳು ಲಾಭದೊಂದಿಗೆ ಕೊನೆಗೊಳ್ಳಲು ಸಹಾಯ ಮಾಡಿತು ಎಂದು ಟ್ರೇಡರ್ಸ್ಗಳು ತಿಳಿಸಿದ್ದಾರೆ.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 319.63 ಪಾಯಿಂಟ್ಸ್ ಅಥವಾ ಶೇಕಡಾ 0.47 ರಷ್ಟು ಏರಿಕೆ ಕಂಡು 67,838.63 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 408.23 ಪಾಯಿಂಟ್ ಅಥವಾ ಶೇಕಡಾ 0.60 ರಷ್ಟು ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 67,927.23 ಕ್ಕೆ ತಲುಪಿತ್ತು. ನಿಫ್ಟಿ 89.25 ಪಾಯಿಂಟ್ ಅಥವಾ ಶೇಕಡಾ 0.44 ರಷ್ಟು ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 20,192.35 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 119.35 ಪಾಯಿಂಟ್ ಅಥವಾ ಶೇಕಡಾ 0.59 ರಷ್ಟು ಏರಿಕೆ ಕಂಡು 20,222.45 ಕ್ಕೆ ತಲುಪಿತ್ತು.
ಸೆನ್ಸೆಕ್ಸ್ ಪ್ಯಾಕ್ನಲ್ಲಿ ಭಾರ್ತಿ ಏರ್ಟೆಲ್ ಶೇಕಡಾ 2.37 ರಷ್ಟು ಏರಿಕೆ ಕಂಡರೆ, ಮಹೀಂದ್ರಾ & ಮಹೀಂದ್ರಾ, ಎಚ್ಸಿಎಲ್ ಟೆಕ್, ಟಾಟಾ ಮೋಟರ್ಸ್, ಟೆಕ್ ಮಹೀಂದ್ರಾ, ಎಚ್ಡಿಎಫ್ಸಿ ಬ್ಯಾಂಕ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಆಕ್ಸಿಸ್ ಬ್ಯಾಂಕ್ ಮತ್ತು ನೆಸ್ಲೆ ಕೂಡ ಲಾಭ ಗಳಿಸಿದವು. ಏಷ್ಯನ್ ಪೇಂಟ್ಸ್, ಹಿಂದೂಸ್ತಾನ್ ಯೂನಿಲಿವರ್, ಬಜಾಜ್ ಫಿನ್ ಸರ್ವ್ ಮತ್ತು ಎನ್ ಟಿಪಿಸಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.
ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ಲಾಭದೊಂದಿಗೆ ಕೊನೆಗೊಂಡರೆ, ಶಾಂಘೈ ಇಳಿಕೆಯೊಂದಿಗೆ ಕೊನೆಗೊಂಡಿತು. ಯುರೋಪಿಯನ್ ಷೇರುಗಳು ಲಾಭದಲ್ಲಿ ವಹಿವಾಟು ನಡೆಸುತ್ತಿದ್ದವು. ಯುಎಸ್ ಮಾರುಕಟ್ಟೆಗಳು ಗುರುವಾರ ಏರಿಕೆಯಲ್ಲಿ ಕೊನೆಗೊಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ ₹ 294.69 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರಿಂದ ನಿವ್ವಳ ಖರೀದಿದಾರರಾಗಿದ್ದರು ಎಂದು ಷೇರು ವಿನಿಮಯದ ಅಂಕಿ ಅಂಶಗಳು ತಿಳಿಸಿವೆ. ಜಾಗತಿಕ ತೈಲ ಬೆಂಚ್ಮಾರ್ಕ್ ಬ್ರೆಂಟ್ ಕ್ರೂಡ್ ತೈಲವು ಶೇಕಡಾ 0.26 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 93.94 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್ಗೆ ಸ್ಥಾನ